Advertisement
ಯು.ಕೆ.ಯಲ್ಲಿ ನೆಲೆಸಿರುವ ಕನ್ನಡಿಗರ ಮಟ್ಟಿಗೆ ಹೇಳುವುದಾದರೆ ಈ ಕೋವಿಡ್ ಸಂಕಷ್ಟದ ನಡುವೆ, ಸರಕಾರದ ಲಾಕ್‌ಡೌನ್, ಟಿಯರ್ ವ್ಯವಸ್ಥೆಯ ನಿಬಂಧನೆಗಳಿಂದಾಗಿ ಎಲ್ಲರಂತೆ ಕಷ್ಟಗಳನ್ನು ಎದುರಿಸಬೇಕಾಯಿತು.
Related Articles
Advertisement
ಎಲ್ಲ ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿ ಅಡಗಿರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸಬೇಕಾದದ್ದು ಪೋಷಕರ ಮತ್ತು ಸಮುದಾಯದ ಕರ್ತವ್ಯವಾಗಿರುತ್ತದೆ.
ಪರಿಸ್ಥಿತಿ ಏನೇ ಇರಲಿ, ಲಾಕ್‌ಡೌನ್ ಅಂತಹ ಸಂದರ್ಭಗಳೇ ಎದುರಾದರೂ ಬೆಳೆಯುವ ಮಕ್ಕಳಿಗೆ ಅವರ ಪ್ರತಿಭೆಗಳನ್ನು ಅರಳಿಸಲು, ಜನರ ಮುಂದೆ ಅನಾವರಣಗೊಳಿಸಲು ತಮ್ಮ ಮನೆಯಲ್ಲೇ ಒಂದು ಪುಟ್ಟ ವೇದಿಕೆಯನ್ನು ಕೊಟ್ಟು ಅವರ ಪಠ್ಯೇತರ ಚಟುವಟಿಕೆಗಳನ್ನು ಬೆಳೆಸಬೇಕಾದದ್ದು ಎಲ್ಲ ತಂದೆ ತಾಯಿಯರ ಜವಾಬ್ದಾರಿ.
ಇದಕ್ಕೊಂದು ನಿದರ್ಶನ ವೆಂಬಂತೆ “ಚಿಣ್ಣರ ಅರಳು ಪ್ರತಿಭೆ’ ಕಾರ್ಯಕ್ರಮ ಮೂಡಿಬಂದು ಬಹಳಷ್ಟು ವೀಕ್ಷಕರ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಮೂರು ವರ್ಷಗಳಿಂದ ಹನ್ನೆರಡು ವರ್ಷಗಳ ಮಕ್ಕಳು ಭಾಗವಹಿಸಿ ಗಾಯನ, ನೃತ್ಯ, ಅಭಿನಯ, ವಾದ್ಯ ವಾದನ ಹೀಗೆ ಅನೇಕ ಕಲೆಗಳನ್ನು ಪ್ರದರ್ಶಿಸಿ ವೀಕ್ಷಕರ ಪ್ರಶಂಸೆಗೆ ಪಾತ್ರರಾದರು.
ನಮ್ಮ ಭಾರತೀಯ ಸಂಸ್ಕೃತಿಯ ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ವೇದಿಕೆ ಕಂಗೊಳಿಸಿತ್ತು. ಈ ಪುಟ್ಟ ಮಕ್ಕಳ ಅಜ್ಜ ಅಜ್ಜಿಯಂದಿರು ಹಾಗೂ ಸಂಬಂಧಿಕರು ದೂರದ ಭಾರತದಿಂದಲೇ ನೋಡಿ ಅನಂದಿಸಿ ಆಶ್ಚರ್ಯ ಚಕಿತರಾಗಿದ್ದೂ ಹೌದು.
ಈ ಕಾರ್ಯಕ್ರಮದ ವಿಶೇಷವೆಂಬಂತೆ ಮಕ್ಕಳು ಸಂಸ್ಕೃತ ದ ಶ್ಲೋಕಗಳನ್ನು ಪಠಣ ಮಾಡಿ ಅದರ ಅರ್ಥಗಳನ್ನು ವಿವರಿಸಿದ್ದು ಬಹಳಷ್ಟು ಪ್ರಶಂಸೆಗೆ ಒಳಗಾಗಿತ್ತು.
ಒಟ್ಟಿನಲ್ಲಿ ಈ ಕಾರ್ಯಕ್ರಮ ವೀಕ್ಷಕರಿಗೆ ಮನರಂಜನೆಯನ್ನು ನೀಡಿದ್ದಲ್ಲದೇ ಮಕ್ಕಳ ಪ್ರತಿಭೆಯನ್ನು ಅರಳಿಸಲು ಪೋಷಕರಿಗೆ ಪ್ರೇರಣೆಯನ್ನು ನೀಡಿ ಗಮನಸೆಳೆಯಿತು.