Advertisement

ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ತೆರೆದ ಯುವಕರು

03:20 PM Nov 23, 2019 | Suhan S |

ಕುಷ್ಟಗಿ: ತಾಲೂಕಿನ ಸಾಸ್ವಿಹಾಳ ಗ್ರಾಮದಲ್ಲಿ ಯುವಕರಿಬ್ಬರ ಇಚ್ಛಾಶಕ್ತಿಯಿಂದ ಗ್ರಾಮೀಣ ಗ್ರಂಥಾಲಯಕ್ಕೆ ಪರ್ಯಾಯವಾಗಿ ಶ್ರೀ ರಾಮಲಿಂಗೇಶ್ವರ ಗ್ರಂಥಾಲಯ ತಲೆ ಎತ್ತಿದ್ದು, ಯುವಕರು ಸ್ವಂತ ಖರ್ಚಿನಲ್ಲಿ ಜ್ಞಾನದಾಸೋಹ ಕಲ್ಪಿಸಿರುವುದು ಮಾದರಿ ಎನಿಸಿದೆ.

Advertisement

ತಾಲೂಕಿನ ಜುಮ್ಲಾಪೂರ ಗ್ರಾಪಂ ವ್ಯಾಪ್ತಿಯ ಸಾಸ್ವಿಹಾಳ 2 ಸಾವಿರ ಜನಸಂಖ್ಯೆ ಹೊಂದಿದೆ. ಈ ಗ್ರಾಮದ ದೇವಪ್ಪ ಮಡಿವಾಳರ ಹಾಗೂ ಶಶಿಧರ ಹುಲಿಯಾಪೂರ ಪದವೀಧರರಾಗಿದ್ದು, ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಯುವಕರಿಬ್ಬರು ತಮ್ಮೂರಿಗೆ ಏನಾದರೂ ಸೇವೆ ಮಾಡಬೇಕೆಂಬ ತುಡಿತದ ಹಿನ್ನೆಲೆಯಲ್ಲಿ ಅವರಿಗೆ ಹೊಳೆದಿದ್ದೇ ಈ ಗ್ರಂಥಾಲಯ. ಗ್ರಾಮದ ಮಧ್ಯ ಭಾಗದಲ್ಲಿ ಖಾಲಿ ಬಿದಿದ್ದ ಭವನವನ್ನು ಸ್ವತ್ಛಗೊಳಿಸಿ, ಸುಣ್ಣಬಣ್ಣ ಹಚ್ಚಿ ಶ್ರೀ ರಾಮಲಿಂಗೇಶ್ವರ ಹೆಸರಿನಲ್ಲಿ ಗ್ರಂಥಾಲಯ ಆರಂಭಿಸಿದ್ದಾರೆ. ಈ ಗ್ರಂಥಾಲಯಕ್ಕೆ 18 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಿದ್ದಾರೆ.

ಐಎಎಸ್‌, ಐಪಿಎಸ್‌, ಕೆಎಎಸ್‌, ಸಾಮನ್ಯ ಅಧ್ಯಯನ, ಸೈನಿಕ, ಪೊಲೀಸ್‌ ಪೇದೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಪುತಸ್ತಕ ಹಾಗೂ ಭಾರತ ಸಂವಿಧಾನ, ಸಮಗ್ರ ಕರ್ನಾಟಕ ಇತಿಹಾಸ, ಕಂಪ್ಯೋಟರ್‌ ಜ್ಞಾನ, ಚಾಣಕ್ಯ ಕಣಜ, ರಾಜಕೀಯ, ಭೂಗೋಳ ಶಾಸ್ತ್ರ, ಕನ್ನಡ ಸಾಹಿತ್ಯ ಕೋಶ, ಜ್ಞಾನ ವಿಕಸನದ ಪುಸ್ತಕಗಳನ್ನು ಖರೀದಿಸಿ ತಂದಿದ್ದಾರೆ. ಈ ಪುಸ್ತಕಗಳ ಸುರಕ್ಷಿತವಾಗಿಡಲು ಅಲಮೆರಾವನ್ನು ಸಹ ಖರೀ ದಿಸಿದ್ದಾರೆ. ಅಲ್ಲದೇ ನಿತ್ಯ ನಾಲ್ಕು ದಿನ ಪತ್ರಿಕೆಗಳನ್ನು ಅದು ಕೂಡ ಸ್ವಂತ ಖರ್ಚಿನಲ್ಲಿ ಗ್ರಂಥಾಲಯದ ಓದುಗರಿಗೆ ತರಿಸುತ್ತಿದ್ದಾರೆ.

ಈ ಗ್ರಂಥಾಲಯದ ಓದುಗರಾಗಲು ಮೊದಲಿಗೆ ಸದಸ್ಯತ್ವದ ಶುಲ್ಕ 20 ರೂ.ಪಾವತಿಸಬೇಕು. ಒಮ್ಮೆ ಪಾವತಿಸಿದರೆ ಮುಗಿಯಿತು ದಿನವೂ ಬಂದು ಓದಬಹುದಾಗಿದೆ. ದಿನಕ್ಕೆ ಒಂದೇ ಪುಸ್ತಕ ಓದುವ ಅವಕಾಶವಿದ್ದು, ಪಡೆದ ಪುಸ್ತಕ ಹಿಂತಿರುಗಿಸಿ ಮತ್ತೂಂದು ಪುಸ್ತಕ ಪಡೆದು ಅಲ್ಲಿಯೇ ಕುಳಿತು ಓದಬಹುದಾಗಿದೆ. ಒಂದು ವೇಳೆ ಪಡೆದ ಪುಸ್ತಕ ಕಳೆದರೆ, ಹಾಳು ಮಾಡಿದರೆ ಪುಸ್ತಕದ ಒಟ್ಟು ಮೊತ್ತ ಪಾವತಿಸುವ ಕಠಿಣ ನಿಯಮ ಅಳವಡಿಸಿಕೊಳ್ಳಲಾಗಿದೆ. ಅಲ್ಲದೇ ಮೊಬೈಲ್‌, ಧೂಮಪಾನ ನಿಷೇ ಧಿಸಲಾಗಿದ್ದು, ದಿನವೂ 30 ಜನ ಯುವಕರು, ಸಾರ್ವಜನಿಕರು ಬಂದು ಓದುವುದು ರೂಢಿಸಿಕೊಂಡಿದ್ದಾರೆ.

ಪುಸ್ತಕದ ಮುಖಬೆಲೆ ಕೊಟ್ಟು ಖರೀದಿ ಸುವ ಶಕ್ತಿ ಇಲ್ಲದಿದ್ದರೂ ಅದೇ ಪುಸ್ತಕಗಳನ್ನು 20 ರೂ. ಸದಸ್ಯತ್ವ ಶುಲ್ಕದಲ್ಲಿ ಸಿಗುತ್ತಿರುವುದು ವರದಾನವಾಗಿದೆ. ಇದು ವಿದ್ಯಾರ್ಥಿಗಳಿಗೆ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಪೂರಕವೆನಿಸಿದೆ. ಸರ್ಕಾರದ ಗ್ರಾಮೀಣ ಗ್ರಂಥಾಲಯ ಇದ್ದು, ಇಲ್ಲದಂತಾಗಿದ್ದು. ಶ್ರೀರಾಮಲಿಂಗೇಶ್ವರ ಗ್ರಂಥಾಲಯದ ಪುಸ್ತಕಗಳನ್ನು ಈ ಗ್ರಂಥಾಲಯಕ್ಕೆ ನೀಡಿದರೆ ಸಾಕಷ್ಟು ಅನುಕೂಲವೇ ಆಗಲಿದೆ – ಮಂಜುನಾಥ ದಂಡಿನ ವಿದ್ಯಾರ್ಥಿ, ಸಾಸ್ವಿಹಾಳ

Advertisement

 

-ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next