Advertisement
ಜಿಲ್ಲಾಧಿಕಾರಿ ನಡೆ ಹಳ್ಳಿಯಕಡೆ ಎಂಬ ವಿಶೇಷ ಕಾರ್ಯಕ್ರಮ ತಾಲೂಕಿ ನ ಲಕ್ಮಕೊಂಡನಹಳ್ಳಿಯಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವುಗಳಲ್ಲಿ ಯುವಕರ ಒಂದು ಅರ್ಜಿ ಎಲ್ಲರ ಗಮನ ಸೆಳೆಯಿತು. ಈ ಅರ್ಜಿಯಲ್ಲಿ ಮೊದಲ ಅಕ್ಷರಗಳೇ ಅವಿವಾಹಿತರಿಗೆ ವಿವಾಹ ಮಾಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಲಕ್ಮಗೊಂಡನಹಳ್ಳಿ ಆಜು- ಬಾಜು ಯುವಕರು ಬರೆದಿದ್ದರು.
Related Articles
Advertisement
ಸ್ವಯಂ ಉದ್ಯೋಗದಲ್ಲಿ ಜೀವನವನ್ನು ಕಟ್ಟಿಕೊಳ್ಳ ಬೇಕು ಎಂದು ಹಲವಾರು ಯೋಜನೆ ರೂಪಿಸುತ್ತದೆ. ಆದರೆ, ಯುವಕರು ಜೀವನ ಕಟ್ಟಿಕೊಳ್ಳಲು ದಿನನಿತ್ಯ ಶ್ರಮ ಹಾಕುತ್ತಾರೆ. ಆದರೆ, ಯುವ ರೈತರಿಂದ ತಾಳಿ ಕಟ್ಟಿಸಿಕೊಳ್ಳಲು ಇಂದಿನ ಬಹುತೇಕ ಯುವತಿಯರು ಮನಸ್ಸು ಮಾಡುವುದಿಲ್ಲ.
ಇದು ಯುವತಿಯರ ತಪ್ಪಲ್ಲ, ಕೃಷಿ ಪ್ರಧಾನ ದೇಶದಲ್ಲಿ ಕೃಷಿಕರಿಗೆ ಬೆಲೆ ಇಲ್ಲದಂತಾಗಿದ್ದು ಹಾಗೂ ಜೀವನಕ್ಕೆ ಭದ್ರತೆ ಸಿಗದಂತಾಗಿರುವುದು. ಹಳ್ಳಿಗಳಲ್ಲಿ ಯುವ ರೈತರಿಗೆ 35 ವರ್ಷ ಕಳೆದರೂ ಮದುವೆ ಮರೀಚಿಕೆಯಂತಾಗಿದೆ.
ಮದುವೆಯಾದರೆ ಪ್ರೋತ್ಸಾಹಧನ ನೀಡಿ: ದಿನನಿತ್ಯ ತೋಟ, ಹೊಲಗಳಲ್ಲಿ ದುಡಿಯುವ ಯುವಕರಿಗೆ ವಧು ಸಿಗದೇ ನೆಮ್ಮದಿ ಇಲ್ಲದಂ ತಾಗಿದೆ. ಈ ಸಮಸ್ಯೆ ಎಲ್ಲ ರೈತ ಕುಟುಂಬಗಳಲ್ಲಿ ಇದ್ದು, ಕೆಲವರು ತಮ್ಮ ಸಮಸ್ಯೆಯನ್ನು ನೇರವಾಗಿ ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು ಸುಮ್ಮ ನಾಗುತ್ತಾರೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀ ರವಾಗಿ ಪರಿಗಣಿಸಬೇಕು. ಯುವ ರೈತರನ್ನು ಮದುವೆಯಾದರೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು. ಇಲ್ಲವಾದರೆ ಅವರು ಬೆಳೆಯುವ ಬೆಳೆಗೆ ನಿಗದಿತ ಬೆಲೆ ಸಿಗುವಂತೆ ಮಾಡಬೇಕು. ರೈತ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುವಂತಹ ಕಾರ್ಯ ಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.