ಕಾರಿ ಗಳಾಗಿ ಜೀವನ ಸಾರ್ಥಕ್ಯ ಕಂಡುಕೊಳ್ಳ ಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
Advertisement
ಶ್ರೀ ಮಹಾವೀರ ಭವನದಲ್ಲಿ ಶುಕ್ರವಾರ ಸಂಜೆ ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಜೈನಕಾಶಿ ಮೂಡುಬಿದಿರೆಗೆ ಆಗಮಿಸಿರುವ ಪ.ಪೂ. 108 ಅಮೋಘ ಸಾಗರ ಮುನಿಮಹಾರಾಜರು, ಪ.ಪೂ. 108 ಅಮರ ಕೀರ್ತಿ ಮುನಿಮಹಾರಾಜರು ಹಾಗೂ ಪ.ಪೂ. 108 ಪ್ರಸಂಗ ಸಾಗರ ಮುನಿಮಹಾ ರಾಜರ ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಭಟ್ಟಾರಕ ಸ್ವಾಮೀಜಿ ಪ್ರಸ್ತಾವನೆಗೈದು, ಡಾ| ಹೆಗ್ಗಡೆಯವರು ಮೂಡುಬಿದಿರೆಯೊಂದಿಗೆ ಆತ್ಮೀಯ ಸಂಬಂಧ ಉಳ್ಳವರು. ಆರಾಧನ ಕೇಂದ್ರ ಗಳಿಗೆ ಕಾಯಕಲ್ಪದಂಥ ಧರ್ಮಕಾರ್ಯಗಳಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು. ಇದನ್ನೂ ಓದಿ:ಕಲಾವಿದರಿಗೆ ಸರ್ಕಾರ ಹೆಚ್ಚು ಅವಕಾಶ ಕಲ್ಪಿಸಲಿ
Related Articles
ಧರ್ಮಕಾರ್ಯ ನಿರತೆ ತುಮಕೂರಿನ ಶಾಂತಲಾ ಅಜಿತ್ ಕುಮಾರ್ ಅವರನ್ನು ಭಟ್ಟಾರಕ ಸ್ವಾಮೀಜಿ ಸಮ್ಮಾನಿಸಿದರು. ಜೈನ್ ಮಿಲನ್ ಮಾಜಿ ಅಧ್ಯಕ್ಷೆ ಶ್ವೇತಾ ಕೆ. ಸಮ್ಮಾನ ಪತ್ರ ವಾಚಿಸಿದರು. ಅಮೋಘ ಸಾಗರ ಮುನಿಗಳ ಮಾತೃಶ್ರೀ ಕನಕಲತಾ ಅರವಿಂದ, ಅಮರ ಕೀರ್ತಿ ಮುನಿಗಳ ಸಹೋದರಿ, ಮುನಿ ಮಹಾರಾಜರ
ವಾಸ್ತವ್ಯಕ್ಕಾಗಿ ತಮ್ಮ ನೂತನ ಗೃಹವನ್ನು ಒದಗಿಸಿರುವ ಬೆಳುವಾಯಿ ಶಂಕರ ಶೆಟ್ಟಿ, ಭರತನಾಟ್ಯ ಕಲಾವಿದೆ ಅನನ್ಯಾ ಅವರನ್ನು ಸ್ವಾಮೀಜಿ ಪುರಸ್ಕರಿಸಿದರು.
Advertisement
ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್ ಕುಮಾರ್, ಬಿ. ದಿನೇಶ್ ಕುಮಾರ್, ಆದರ್ಶ ಅರಮನೆ, ಸ್ವಾಗತ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ, ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್, ರಾಜವರ್ಮ ಬೈಲಂಗಡಿ, ಧನಕೀರ್ತಿ ಬಲಿಪ, ಶಾಂತಿರಾಜ ಕಂಬಳಿ, ಶೈಲೇಂದ್ರ ಕುಮಾರ್, ಮಹೇಂದ್ರ ವರ್ಮ ಜೈನ್ ಪಾಲ್ಗೊಂಡಿದ್ದರು.
ಭಟ್ಟಾರಕಶ್ರೀಗಳ ಹಿರಿತನದಲ್ಲಿ ಕಲಿಕುಂಡಾರಾಧನೆ ಜರಗಿತು. ಶೈಲೇಂದ್ರ ಕುಮಾರ್ ಸ್ವಾಗತಿಸಿದರು. ಡಾ| ಪ್ರಭಾತ್ ಕುಮಾರ್ ಬಿ. ನಿರೂಪಿಸಿದರು. ಜೈನ್‌ಮಿಲನ್ ಅಧ್ಯಕ್ಷ ನಮಿರಾಜ ಜೈನ್ ವಂದಿಸಿದರು.