Advertisement

‘ಯುವಕರೇ ಹೆಚ್ಚಾಗಿ ಮಾದಕ ವ್ಯಸನಗಳಿಗೆ ಬಲಿ’

11:37 PM Jul 02, 2019 | Team Udayavani |

ಮಹಾನಗರ: ದ.ಕ. ಜಿಲ್ಲೆಯು ವಿದ್ಯಾಸಂಸ್ಥೆಗಳಲ್ಲಿ ಹೆಸರುವಾಸಿಯಾಗಿದೆ. ಅದರ ಜತೆಯಲ್ಲಿ ಹೆಚ್ಚಿನ ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗು ತ್ತಿರುವುದು ಕಳವಳಕಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಹೇಳಿದರು.

Advertisement

ನಗರದ ರೊಸಾರಿಯೋ ಸಭಾಭವನದಲ್ಲಿ ಮಂಗಳವಾರ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ಆರೋಗ್ಯ ವಿಭಾಗ), ನಗರ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ, ರೊಜಾರಿಯೋ ಪದವಿ ಪೂರ್ವ ಕಾಲೇಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವೆನ್ಲಾಕ್‌ ಆಸ್ಪತ್ರೆ ಮತ್ತು ಸಿಐಎಸ್‌ಎಫ್‌ (ಎಂಆರ್‌ಪಿಎಲ್ ಯೂನಿಟ್) ಮಂಗಳೂರು ಇವುಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ಹಾಗೂ ಅಕ್ರಮ ಕಳ್ಳಸಾಗಾಣಿಕೆ ತಡೆಗಟ್ಟುವ ದಿನ- 2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾದಕ ವಸ್ತುಗಳ ನಿರ್ಮೂಲನೆ ಮಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿ ಸಬೇಕಾದ ಅನಿವಾರ್ಯತೆ ಇದೆ. ಮಾದಕ ವ್ಯಸನದಿಂದ ಬರೀ ವ್ಯಸನಿಯೊಬ್ಬರೇ ಅಲ್ಲದೆ ಕುಟುಂಬದ ಆರ್ಥಿಕ ಸ್ಥಿತಿ, ಸಾಮಾ ಜಿಕ ಸ್ಥಿತಿಯಲ್ಲೂ ಪರಿಣಾಮ ಬೀರುತ್ತದೆ ಎಂದರು.

ಜಾಗೃತಿ ಅಗತ್ಯ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್‌ ಪ್ರಾಸ್ತಾವಿಕ ಮಾತನಾಡಿ, ಮಾದಕ ವ್ಯಸನಗಳಿಗೆ ಬಲಿಯಾಗಿ ನಮ್ಮ ಜೀವನವನ್ನು ನಾವೇ ಹಾಳು ಮಾಡುವುದು ಸರಿಯಲ್ಲ. ಈ ಕುರಿತು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಈ ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಡಾ| ಅನಿರುದ್ಧ ಶೆಟ್ಟಿ ಹಾಗೂ ಸಿಐಎಸ್‌ಎಫ್‌ ಸೆಂಟ್ರಲ್ ಆರ್ಮ್ಡ್‌ ಪೊಲೀಸ್‌ ಫೋರ್ಸ್‌ನ ಉಪ ಕಮಾಡೆಂಟ್ ಮೃತ್ಯುಂಜಯ ಸ್ವಾಮಿ ಡಿ. ಮಾತನಾಡಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಜಿ. ಗಂಗಾಧರ್‌, ಸರಕಾರಿ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ, ರೊಜಾರಿಯೋ ವಿದ್ಯಾ ಸಂಸ್ಥೆಗಳ ಸಂಚಾಲಕ ವಂ| ಜೆ.ಬಿ.ಕ್ರಾಸ್ತಾ, ರೊಜಾರಿಯೋ ಪಿಯು ಕಾಲೇಜಿನ ಪ್ರಿನ್ಸಿಪಾಲ್ ವಂ| ವಿಕ್ಟರ್‌ ಡಿ’ಸೋಜಾ, ರೊಜಾರಿಯೋ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಲೋಶಿಯಸ್‌ ಡಿ’ಸೋಜಾ ಉಪಸ್ಥಿತರಿದ್ದರು. ಡಾ| ರತ್ನಾಕರ್‌ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next