Advertisement
ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ 4 ವರ್ಷಗಳಿಂದ ಹಮ್ಮಿಕೊಳ್ಳಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 40ನೇ ಶ್ರಮದಾನವನ್ನು ಕೂಳೂರು ಪರಿಸರದಲ್ಲಿ ರವಿವಾರ ಕೈಗೊಳ್ಳಲಾಯಿತು.
Related Articles
Advertisement
ಸ್ವಚ್ಛತೆನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು, ಬೆಸೆಂಟ್ ಸಂಧ್ಯಾ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಸ್ವಚ್ಛ ಮಂಗಳೂರು ಕಾರ್ಯಕರ್ತರು ಸುಮಾರು 6 ಗುಂಪುಗಳಾಗಿ ವಿಂಗಡಿಸಿಕೊಂಡು ಸ್ವಚ್ಛತಾ ಕಾರ್ಯ ನಡೆಸಿದರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಕಮಲಾಕ್ಷ ಪೈ ನೇತೃತ್ವದಲ್ಲಿ ಕೂಳೂರು ಕಾವೂರು ರಸ್ತೆಯಲ್ಲಿಯ ಕಾಲುದಾರಿಯಲ್ಲಿ ಹಾಕಲಾಗಿದ್ದ ತ್ಯಾಜ್ಯ ರಾಶಿಯನ್ನು ತೆರವು ಮಾಡಿದರು. ವಿಟuಲದಾಸ್ ಪ್ರಭು ಮಾರ್ಗದರ್ಶನದಲ್ಲಿ ಬೆಸೆಂಟ್ ಸಂಧ್ಯಾ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು ರಾಯಕಟ್ಟೆ ಅಡ್ಡರಸ್ತೆ ತಿರುವಿನಲ್ಲಿಯ ಕಸವನ್ನು ತೆಗೆದು ಸ್ವಚ್ಛಗೊಳಿಸಿದರು. ಯೋಗೀಶ್ ಕಾಯರ್ತಡ್ಕ, ಉಮಾಕಾಂತ್ ಇನ್ನಿತರ ಸ್ವಯಂಸೇವಕರು ಅಂಬಿಕಾ ನಗರ ಬಸ್ ತಂಗುದಾಣದ ಎದುರುಗಡೆುದ್ದ ತ್ಯಾಜ್ಯರಾಶಿಯನ್ನು ತೆರವು ಮಾಡಿ ಅಲ್ಲಿದ್ದ ಹುಲ್ಲು ಕಳೆಯನ್ನು ತೆಗೆದು ಹಸನು ಮಾಡಿದರು. ಪುನಿತ್ ಪೂಜಾರಿ, ಮೆಹಬೂಬ್ ಖಾನ್, ಕಾರ್ಯಕರ್ತರು ಶಾಂತಿನಗರ ಗ್ರೌಂಡ್ ಬಳಿಯಿದ್ದ ತ್ಯಾಜ್ಯ ರಾಶಿಯನ್ನು ತೆಗೆದರು. ಹರೀಶ್ ಪ್ರಭು, ಶಿವು ಪುತ್ತೂರು, ಬಾಲಕೃಷ್ಣ ಭಟ್ ಅವರು ಕೂಳೂರು ಕಾವೂರು ರಸ್ತೆಯ ಮಧ್ಯೆ ಇದ ್ದತ್ಯಾಜ್ಯ ರಾಶಿಯನ್ನು ಸ್ವಚ್ಛ ಮಾಡಿದರು. ಉಪನ್ಯಾಸಕ ಪ್ರಕಾಶ್ ಎಸ್.ಎನ್., ಅನಿರುದ್ಧ ನಾಯಕ್ ನೇತೃತ್ವದಲ್ಲಿ ಫ್ಲೈಓವರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಮಾಜಿ ಕಾರ್ಪೊರೇಟರ್ ಸುರೇಶ್ ಶೆಟ್ಟಿ , ಶಾರದ ವಿದ್ಯಾಲಯದ ವಿದ್ಯಾರ್ಥಿನಿಯರು ಕೂಳೂರಿನಲ್ಲಿರುವ ಅಂಗಡಿ, ಮನೆಗಳಿಗೆ ತೆರಳಿ ಸ್ವಚ್ಛತೆ, ಮಲೇರಿಯಾ, ಡೆಂಗ್ಯೂ ಕುರಿತು ಜಾಗೃತಿ ಕಾರ್ಯಕ್ರಮವನ್ನು ಮಾಡಿದರು. ಅಭಿಯಾನದ ಪ್ರಮುಖರಾದ ಉಮಾನಾಥ್ ಕೊಟೆಕಾರ್, ದಿಲ್ರಾಜ್ ಆಳ್ವ ಶ್ರಮದಾನದ ಜವಾಬ್ದಾರಿ ವಹಿಸಿದ್ದರು. 9 ತ್ಯಾಜ್ಯ ರಾಶಿಗಳ ತೆರವು
ಕೂಳೂರಿನಿಂದ ಕಾವೂರಿನತ್ತ ಸಾಗುವ ಮುಖ್ಯ ರಸ್ತೆಯಲ್ಲಿಯ ಒಟ್ಟು ಒಂಬತ್ತು ತ್ಯಾಜ್ಯಬೀಳುತ್ತಿದ್ದ ಸ್ಥಳಗಳನ್ನು ಗುರುತಿಸಿ ಇಂದು ಸ್ವಚ್ಛಗೊಳಿಸಲಾಗಿದೆ. ಇದೀಗ ಸ್ವಚ್ಛಗೊಳಿಸಿದ ಜಾಗೆಯಲ್ಲಿ ಅಲಂಕಾರಿಕ ಗಿಡಗಳನ್ನಿಟ್ಟು ಜಾಗವನ್ನು ಅಂದ ತೋರುವಂತೆ ಮಾಡಲಾಗಿದೆ. ಇಂದಿನಿಂದ ಅಲ್ಲಿ ಸ್ವಚ್ಛತಾ ಯೋಧರ ತಂಡ ಸುಧೀರ್ ನರೋಹ್ನ, ಜಗನ್ ಕೋಡಿಕಲ್ ನೇತೃತ್ವದಲ್ಲಿ ಹಗಲಿರುಳು ಕಾವಲು ಕಾಯಲಿದ್ದು, ಬೀದಿಬದಿಯಲ್ಲಿ ಕಸಹಾಕುವವರಿಗೆ ಕಸಹಾಕದಂತೆ ಮನವಿ ಮಾಡಿ ಅರಿವು ಮೂಡಿಸಲಿದ್ದಾರೆ. 40ನೇ ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲ ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ದಕ್ಷಿಣ ಕನ್ನಡ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಸ್ವಯಂಸೇವಕರಿಗೆ ಮಜ್ಜಿಗೆ, ಲಸ್ಸಿಯನ್ನು ವ್ಯವಸ್ಥೆಮಾಡಲಾಗಿತ್ತು.