ಮೈಸೂರು: ವಿಶ್ವ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಇಲಾಖೆ, ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ಎನ್‌ಎಸ್‌ಎಸ್ ವಿಭಾಗದ ಸಹಯೋಗದಲ್ಲಿ ಸೋಮವಾರ ಜಾಥಾ ನಡೆಸಲಾಯಿತು.
ಮಾದಕ ವಸ್ತುಗಳನ್ನು ತ್ಯಜಿಸಿ ಮುಕ್ತ ಸಮಾಜಕ್ಕೆ ಕೈ ಜೋಡಿಸಿ ಎಂಬ ವಿವಿಧ ನಾಮಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನು ವಿರೋಧಿಸುವಂತೆ ಜಾಗೃತಿ ಜಾಥಾದ ಮೂಲಕ ಅರಿವು ಮೂಡಿಸಿದರು.
ಜಿಲ್ಲಾ ಸಶŒ ಚಿಕಿತ್ಸಾಧಿಕಾರಿ ಡಾ.ಬಸವರಾಜು ಜಾಥಾಗೆ ಚಾಲನೆ ನೀಡಿ, ಯುವ ಸಮೂಹ ಮಾದಕ ವಸ್ತುಗಳಿಂದ ದೂರವಿರಬೇಕು. 20 ವರ್ಷದ ಯುವಕ ಮಾದಕ ವಸ್ತುವಿನಿಂದ ಪ್ರಚೋದನೆಗೊಂಡು 70 ವರ್ಷದವರನ್ನು ಅತ್ಯಾಚಾರ ನಡೆಸುವ ಪ್ರಕರಣವೂ ನಡೆಯುತ್ತಿದೆ. ಹೀಗಾಗಿ ಯುವಜನತೆ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಬನ್ನಿಮಂಟಪದ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಆವರಣದಿಂದ ಆರಂಭಗೊಂಡ ಜಾಥಾವು ವೀರನಗೆರೆ, ಫೌಂಟೇನ್ ಸರ್ಕಲ್ ವೃತ್ತ, ಆಶೋಕ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ಆರೋಗ್ಯ ಇಲಾಖೆಯ ಡಾ.ಸಂತೋಷ್, ಡಾ.ಶಿವರಾಮ್, ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಎಚ್.ಪಿ.ಶಿವಸ್ವಾಮಿ, ಅತಿಥಿ ಉಪನ್ಯಾಸಕ ಎಂ. ಬಸವರಾಜು, ಎನ್‌ಎಸ್‌ಎಸ್ ಅಧಿಕಾರಿಗಳಾದ ಎಸ್.ಎಂ.ಮಧುಸೂದನ, ನವೀನ್‌ಕುಮಾರ್ ಇತರರಿದ್ದರು.