Advertisement

ಜೇನು ಕೃಷಿಗೆ ಉತ್ತೇಜನ ಯುವಕನ ಟ್ರೆಂಡ್‌

10:26 PM Nov 16, 2019 | mahesh |

ತೆಗೆದರೆ ರಸಿಕ, ಗಡ್ಡ ಬಿಟ್ಟರೆ ಸನ್ಯಾಸಿ. ಗಡ್ಡ ಬಿಟ್ಟು ಬಗಲಲ್ಲೊಂದು ಖಾದಿ ಚೀಲ ಇಳಿಬಿಟ್ಟಿದ್ದರೆ ಆತ ಒಂದೋ ವಿಚಾರವಾದಿ, ಇಲ್ಲವೇ ಸಾಹಿತಿ. ಆಕರ್ಷಕವಾಗಿ ಗಡ್ಡ ಬೆಳೆಸುವುದು ಫ್ಯಾಶನ್‌. ಗಡ್ಡ ನೇವರಿಸುವುದು, ಮೀಸೆ ತಿರುವುವುದು – ಪ್ರತಿಯೊಂದಕ್ಕೂ ಅರ್ಥಗಳಿವೆ.

Advertisement

ಇಲ್ಲೊಬ್ಬರು ಜೇನು ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ಟ್ರೆಂಡ್‌ ಅನ್ನು ಅನುಸರಿಸಿಕೊಂಡಿದ್ದಾರೆ. ಇಷ್ಟು ಉದ್ದದ ಮೀಸೆ ಬಿಟ್ಟು ಅದನ್ನು ಆಗಾಗ ತಿರುಗುವುದು, ಗಡ್ಡ ಸವರುವುದು ಖುಷಿಯನ್ನು ನೀಡಬಹುದು. ಆದರೆ ನಂದನ್‌ ಕುಮಾರ್‌ ಪೆರ್ನಾಜೆ ಅವರ ಗಡ್ಡ ವಿಶಿಷ್ಟವಾಗಿದೆ. ಅದು ಸವಿ ಗಡ್ಡ! ಅದನ್ನು ನೇವರಿಸುವಾಗ ತುಸು ಎಚ್ಚರವಿರಬೇಕು. ಸ್ವಲ್ಪ ತಪ್ಪಿದರೂ ಜೇನು ಗೂಡಿಗೆ ಕೈ ಹಾಕಿದಂತೆಯೇ! ಚುಚ್ಚುವುದು ಖಂಡಿತ.

ಜೇನ್ನೊಣದ ಗುಣವನ್ನು ಅರಿಯದೆ ಜೇನು ನೊಣಗಳು ಎಂದರೆ ಭಯಪಡುತ್ತಾರೆ. ಕೆಲವರಂತೂ ಜೇನು ನೊಣದ ಹತ್ತಿರವೇ ಸುಳಿಯುವುದಿಲ್ಲ. ಕೆಲವೊಮ್ಮೆ ನೊಣಗಳು ಬೆವರು ವಾಸನೆಗೆ ಮೈಮೇಲೆ ಬಂದು ಕುಳಿತರೆ, ಕರೆಂಟಿನ ಬೆಳಕಿಗೆ ಬಂದಾಗ ಜೀವವೇ ಹಾರಿ ಹೋದ ಅನುಭವ ಹೊಂದುತ್ತಾರೆ. ಅದರ ಗೂಡಿಗೆ ಬೆಂಕಿ ಇಟ್ಟು ನಾಶ ಮಾಡುವವರೂ ಇದ್ದಾರೆ. ಚುಚ್ಚುವಿಕೆಯು ಔಷಧಿಯೇ ವಾತ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ. ವಿದೇಶದಲ್ಲಿ ಇದರ ಚಿಕಿತ್ಸೆಯೂ ನಡೆಯುತ್ತಿದೆ.

ಗಲ್ಲದ ತುಂಬಾ ಜೇನು ಕುಳ್ಳಿರಿಸಿ ಗಡ್ಡದಂತೆ ರೂಪಿಸಿ ನೋಡುಗರನ್ನು ಅಚ್ಚರಿ ಕುತೂಹಲಕ್ಕೆ ಪಾತ್ರರಾಗುವಿರಿ. ಅಂತಹ ವಿಶೇಷ ಗಡ್ಡ ನಿರೂಪಿಸಿದ ಪುತ್ತೂರು ಸೈಂಟ್‌ ಫಿಲೋಮಿನಾ ಬಿ.ಕಾಂ. ಪದವೀಧರ ಯುವಕ ನಂದನ್‌ ಕುಮಾರ್‌ ಪೆರ್ನಾಜೆ ಗಡ್ಡದಲ್ಲಿ ಕುಳ್ಳಿರಿಸಿ ಮನಸ್ಸಿಗೆ ನೆಮ್ಮದಿ ನೀಡುವ ಜೇನುಕೃಷಿ ಹವ್ಯಾಸವಾಗಿ ತೊಡಗಿಸಿಕೊಂಡಿದ್ದಾರೆ.

ಮರದ ಕೊಂಬೆಗೆ ಕಟ್ಟಿದ ಜೇನುಗೂಡನ್ನು ನೋಡುವುದೇ ಚೆಂದ. ಆದರೆ ಗಲ್ಲದಲ್ಲಿ ಜೇನು ಗೂಡು ಕಟ್ಟಿದರೆ ಭಯದಿಂದ ಜೇನಿನ ಮಹಲನ್ನು ದೂರದಿಂದಲೇ ವೀಕ್ಷಿಸಿ ಮುಂದಕ್ಕೆ ಹೋಗುವವರೇ ಹೆಚ್ಚು. ಅಂತಹ ಕೆಲವು ಮಂದಿಯಲ್ಲಿ ನಂದನ್‌ ಕುಮಾರ್‌ ಪೆರ್ನಾಜೆ ಚಿಗುರು ಮೀಸೆಯ ಯುವ ಉತ್ಸಾಹಿ ತರುಣ. ಕೃಷಿಯ ಬದುಕು ಮರೆಗೆ ಸರಿಯುತ್ತಿರುವ ಕಾಲಘಟ್ಟದಲ್ಲಿ ನಮ್ಮ ಬದುಕಿನ ಮೂಲವಾದ ಕೃಷಿ, ಹೈನುಗಾರಿಕೆ, ಜೇನುಕೃಷಿಗಳಿಗೆ ನಮ್ಮ ಯುವಜನರು ಮುಖ ಮಾಡುತ್ತಿರುವುದು ನಾವೆಲ್ಲ ಸಂತೋಷಪಡಬೇಕಾದ ವಿಷಯ. ಜೇನಿನ ಬದುಕು ನಮಗೆಲ್ಲ ಆದರ್ಶ. ನಮ್ಮ ಬದುಕು ಮಧುರ ಮಧುರವಾಗಿರಬೇಕಾದರೆ ಜೇನು ಕುಟುಂಬದ ಅರಿವು ಮಾಡಿಕೊಳ್ಳಬೇಕು ಜೇನುನೊಣಗಳ ಬದುಕೇ ಒಂದು ವಿಸ್ಮಯ ಸಹಕಾರ, ಒಗ್ಗಟ್ಟು, ಸೇವಾ ಮನೋಭಾವನೆಯನ್ನು ಜೇನು ಕುಟುಂಬವನ್ನು ನೋಡಿ ನಾವು ತಿಳಿದುಕೊಳ್ಳಬಹುದು.

Advertisement

ನಮ್ಮ ಹಿರಿಯರ ಕಾಲದಿಂದಲೂ ಖುಷಿ, ಶಾಂತಿ ನೆಮ್ಮದಿ ಜೇನು ಕೃಷಿಯಿಂದ ಸಿಕ್ಕಿದೆ. ಜೇನುನೊಣಗಳ ಷಟ³ದಿ ಜೋಡಣೆ ಪ್ರಕೃತಿ ಅದ್ಭುತಗಳಲ್ಲಿ ಒಂದು. ಕಡಿಮೆ ವೆಚ್ಚದಲ್ಲಿ ಹೆಚ್ಚು ಬಂಡವಾಳ ಹಾಕದೆ ಮಾಡಬಹುದಾದ ಕೃಷಿ ಜೇನು ಕೃಷಿ. ವಿದೇಶದಲ್ಲಿ ಕೀಟನಾಶಕಗಳ ಬಳಕೆ ಬ್ಯಾನ್‌ ಆಗಿದೆ. ನಾವು ಇನ್ನಷ್ಟೇ ಎಚ್ಚೆತ್ತುಕೊಳ್ಳಬೇಕಾಗಿದೆ. ಅಲ್ಲೊಂದು ಇಲ್ಲೊಂದು ಕಡೆ ಜೇನು ಕೃಷಿಯತ್ತ ವಾಲುತ್ತಿದ್ದಾರೆ ಜನ. ಇವರ ನಡುವೆ ಕುಮಾರ್‌ ಪೆರ್ನಾಜೆ ಅವರಿಗೆ ಜೇನಿನ ಬಗ್ಗೆ ಇರುವ ಮಾಹಿತಿ ಅಗಾಧ. ಅವರ ಕುಟುಂಬವು ಇದರಲ್ಲಿ ತೊಡಗಿಕೊಂಡು ಮಾದರಿಯಾಗಿದೆ. ಜೇನಿನ ಹನಿ ಸವಿಯೋಣ ಸಮೃದ್ಧ ಜೀವನ ಹೊಂದೋಣ.

- ಸೌಮ್ಯಾ ಪೆರ್ನಾಜೆ

Advertisement

Udayavani is now on Telegram. Click here to join our channel and stay updated with the latest news.

Next