Advertisement
ಅಪ್ಪಿ ಎಂಬ ವೃದ್ಧೆಯ ಒಬ್ಬಂಟಿ ಬದುಕಿನ ಬಗ್ಗೆ ಅರಿತುಕೊಂಡ ಪುತ್ತೂರಿನ ಅಭಿರಾಮ್ ಫ್ರೆಂಡ್ಸ್ ಎಂಬ ಯುವಕರ ತಂಡ ಪ್ರಥಮ ಹಂತದಲ್ಲಿ ಮನೆ ಪರಿಸರ ಸ್ವತ್ಛತೆ, ದುರಸ್ತಿಗೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಸೌಕರ್ಯ ಒದಗಿಸಲು ನಿರ್ಧರಿಸಿದೆ.
Related Articles
Advertisement
ಚುನಾವಣೆ ಸಂದರ್ಭದಲ್ಲಿ ಮನೆ ಭೇಟಿ ಬಿಟ್ಟರೆ ಉಳಿದ ಸಂದರ್ಭದಲ್ಲಿ ಯಾರೂ ಬರುವವರಿಲ್ಲ ಅನ್ನುವುದಕ್ಕೆ ಈ ಮನೆ ಪರಿಸ್ಥಿತಿಯೇ ಉದಾಹರಣೆ. ತಾರಿಗುಡ್ಡೆ ಭಾಗದವರು, ಸ್ಥಳೀಯರು ಅಪ್ಪಿ ಅಕ್ಕ ಎಂದೇ ಕರೆಯಲ್ಪಡುವ ಈ ಅಜ್ಜಿಗೆ ಜತೆಗಾರರೇ ಇಲ್ಲದೆ ಒಂಟಿಯಾಗಿ ದಿನ ದೂಡುವ ಸ್ಥಿತಿ. ಈ ವಿಚಾರವನ್ನು ಅರಿತ 25ಕ್ಕೂ ಅಧಿಕ ಇರುವ ಯುವಕರ ಕ್ರೀಡಾ ತಂಡ ಅಭಿರಾಮ್ ಫ್ರೆಂಡ್ಸ್‌ನ ಸದಸ್ಯರು ಮನೆ ಭೇಟಿ ಮಾಡಿ ವೃದ್ಧೆಯ ಅಳಲು ಆಲಿಸಿದ್ದಾರೆ. ಸೋರುವ ಮಾಡು, ನೇತಾಡುತ್ತಿರುವ ಗೋಡೆ, ಕತ್ತಲು ವಾತಾ ವರಣಕ್ಕೆ ಬೆಳಕು ನೀಡುವ ಕಾರ್ಯ ಪ್ರಾರಂ ಭಿಸಿದ್ದಾರೆ. ಮನೆ ಛಾವಣಿಗೆ ಟಾರ್ಪಾಲು ಹಾಸಿ ತಾತ್ಕಾಲಿಕ ರಕ್ಷಣೆ ನೀಡಲಾಗಿದೆ.
ನಗರಸಭೆ ವ್ಯಾಪ್ತಿಯೊಳಗಿರುವ ಅಪ್ಪಿ ಅವರ ಮನೆ ಪರಿಸ್ಥಿತಿ ಕಂಡು ನೆರವಾಗಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ ಸ್ವತ್ಛತೆ, ದುರಸ್ತಿ ಕಾರ್ಯ ನಡೆಸಿದ್ದು, ಸಾರ್ವಜನಿಕರ ಸಹಕಾರ ಪಡೆದು ಮುಂದಿನ ಹಂತದ ಕೆಲಸ ಕಾರ್ಯಗಳನ್ನು ಮಾಡಲು ತೀರ್ಮಾನಿಸಿದ್ದೇವೆ. –ನವೀನ್ ರೈ ಪಂಜಳ, ಅಧ್ಯಕ್ಷರು, ಅಭಿರಾಮ್ ಫ್ರೆಂಡ್ಸ್ ಪುತ್ತೂರು
ಅಪ್ಪಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸಮಸ್ಯೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ದಾಖಲೆ ಪತ್ರ ನೀಡುವಂತೆ ತಿಳಿಸಿದ್ದೇನೆ. ದಾಖಲೆ ಗಳಿದ್ದರೆ ನಗರಸಭೆಯಿಂದ ಮನೆ ದುರ ಸ್ತಿಗೆ ನೆರವು ನೀಡಲಾಗುತ್ತದೆ. ದಾಖಲೆ ಪತ್ರ ಸಮರ್ಪಕವಾಗಿಲ್ಲದಿದ್ದರೆ ಸಂಘ ಸಂಸ್ಥೆಗಳ ನೆರವು ಪಡೆದು ಸ್ಪಂದಿಸ ಲಾಗುವುದು. –ಜೀವಂಧರ್ ಜೈನ್, ಅಧ್ಯಕ್ಷರು, ನಗರಸಭೆ