ಕುಷ್ಟಗಿ: ಯುವಕನೋರ್ವ sorry ಅಮ್ಮ…ಅಣ್ಣಾ… ಎಂದು ಮೊಬೈಲ್ ನಲ್ಲಿ ಸ್ಟೇಟಸ್ ಇಟ್ಟು ಪಾನಮತ್ತನಾಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಮ್ಲಾಪೂರ ಗ್ರಾಮದಲ್ಲಿ ನಡೆದಿದೆ.
ಮಹೇಶ ಬಾದವಾಡಗಿ(27) ಮೃತ ಯುವಕಎಂದು ಗುರುತಿಸಲಾಗಿದೆ. ಮೂಲತಃ ತಾಲೂಕಿನ ಚಳಗೇರಾ ಗ್ರಾಮದವನಾದ ಮಹೇಶ ಕ ಜುಮ್ಲಾಪೂರ ಅಕ್ಕನ ಮನೆಯಲ್ಲಿ ವಾಸವಾಗಿದ್ದ. ಮಂಗಳವಾರ ಮಧ್ಯಾಹ್ನ 1-30 ರ ವೇಳೆ ಮೋಬೈಲ್ ನಲ್ಲಿ sorry ಅಮ್ಮ..ಅಣ್ಣಾ ಎಂದು ಸ್ಟೇಟಸ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಕೆರೆಯ ದಡದಲ್ಲಿ ಮದ್ಯ ಸೇವಿಸಿ ಪಾದರಕ್ಷೆ, ಮೊಬೈಲ್ ಬಿಟ್ಟು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೊಬೈಲ್ ಸ್ಟೇಟಸ್ ಗಮನಿಸಿದ ಸ್ಥಳೀಯರು ಅವನಿಗಾಗಿ ಹುಡುಕಾಡಿದಾಗ ಕೆರೆಯ ದಡದಲ್ಲಿ ಪಾದರಕ್ಷೆ ಮೊಬೈಲ್ ಕಂಡು ಬಂದಾಗ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಖಾತ್ರಿಯಾಗಿದೆ. ಕೂಡಲೇ ಅಗ್ನಿಶಾಮಕ ದಳದವರನ್ನು ಕರೆಯಿಸಿ ಕೆರೆಯಿಂದ ಮಹೇಶ ಬಾದವಾಡಗಿ ಶವ ಮೇಲಕ್ಕೆ ಎತ್ತಿದ್ದು, ಶವದ ಮರಣೋತ್ತರ ಪರೀಕ್ಷೆಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.
ತಾವರಗೇರಾ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಈ ಯುವಕನ ದುರಂತ ಸಾವಿಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.