ಬೆಂಗಳೂರು: ತಮಿಳುನಾಡಿನ ಜೋಲಾರಪೇಟೆ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಯುವಕನ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರೇ
ಯಸಿ ಜತೆ ಸಹಜೀವನ ನಡೆಸುತ್ತಿದ್ದ ವಿಚಾರಕ್ಕೆ ಆಕೆಯ ಕುಟುಂಬ ಸದಸ್ಯರು ಹಲ್ಲೆ ನಡೆಸಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತಮಿಳುನಾಡು ಮೂಲದ ತೋಟಶ್ರೀ ಮಣಿಕಂಠ ರಾಯಲ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರೇಯಸಿ ಐಶ್ವರ್ಯ ಎಂಬಾಕೆಯ ಮಾವ ಹೇಮಂತ್(34), ಸಂಬಂಧಿಗಳಾದ ದೀಕ್ಷಿತ್(32) ಮತ್ತು ರವಿಕುಮಾರ್(36) ಎಂಬವರನ್ನು ಬಂಧಿಸಲಾಗಿದೆ.
ಮಣಿಕಂಠ ಜು.13ರಂದು ತಮಿಳುನಾಡಿನ ಜೋಲಾರಪೇಟೆ ರೈಲ್ವೆ ಠಾಣೆ ವ್ಯಾಪ್ತಿಯಲ್ಲಿ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸ್ಥಳೀಯ ಪೊಲೀಸರು, ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ಹೆಚ್ಚಿನ ತನಿಖೆಗಾಗಿ ಸೆ.21ರಂದು ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ವರ್ಗಾವಣೆ ಮಾಡಿದ್ದರು. ಇದೀಗ ತನಿಖೆ ನಡೆಸಿದ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಮಣಿಕಂಠ ಮತ್ತು ಐಶ್ವರ್ಯ ಬೆಂಗಳೂರಿನಲ್ಲಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಎಚ್‌ಎಸ್‌ಆರ್ ಲೇಔಟ್‌ನ ಅಪಾರ್ಟ್‌ಮೆಂಟ್ ವೊಂದರಲ್ಲಿ ಒಟ್ಟಿಗೆ ವಾಸವಾಗಿದ್ದರು. ಈ ವಿಚಾರ ತಿಳಿದ ಮಣಿಕಂಠನ ಕುಟುಂಬ ಸದಸ್ಯರು ವಿದ್ಯಾಭ್ಯಾಸ ಮುಗಿದ ಬಳಿಕ ಇಬ್ಬರಿಗೂ ಮದುವೆ ಮಾಡುವುದಾಗಿ ಹೇಳಿದ್ದರು.
ಆದರೆ, ಐಶ್ವರ್ಯಳ ಮಾವ ಹೇಮಂತ್, ಸಂಬಂಧಿಕರಾದ ದೀಕ್ಷಿತ್, ರವಿಕುಮಾರ್, ಯಶೋದಾ ಮತ್ತು ಅಂಜಲಿ ಎಂಬವರು ಜು.11ರಂದು ಅಪಾಟ್ ìಮೆಂಟ್‌ಗೆ ಬಂದು ಪ್ರೇಮಿಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಅಲ್ಲದೆ, ಐಶ್ವರ್ಯಳನ್ನು ತಮ್ಮೊಂದಿಗೆ ಕರೆದೊಯ್ದಿದ್ದರು. ಅದರಿಂದ ನೊಂದಿದ್ದ ಮಣಿಕಂಠ ಜು.13ರಂದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.