Advertisement

Ullala: ನೇಣು ಬಿಗಿದು ಯುವಕ ಆತ್ಮಹತ್ಯೆ

09:48 PM Feb 29, 2024 | Team Udayavani |

ಉಳ್ಳಾಲ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುಂಪಲ ಸಮೀಪದ ಲಕ್ಷ್ಮೀಗುಡ್ಡೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.

Advertisement

ಮೂಲತಃ ಕುಂಪಲ ಆಶ್ರಯ ಕಾಲನಿ ನಿವಾಸಿ ಧನರಾಜ್‌ ಪೂಜಾರಿ (32) ಆತ್ಮಹತ್ಯೆಗೈದವರು.

ಆಶ್ರಯ ಕಾಲನಿಯಲ್ಲಿ ನೆಲೆಸಿದ್ದ ಧನರಾಜ್‌ ಕುಟುಂಬವು ಮನೆ ಪುನರ್‌ ನಿರ್ಮಾಣದ ಹಿನ್ನೆಲೆಯಲ್ಲಿ ಲಕ್ಷ್ಮೀಗುಡ್ಡೆಯ ಬಾಡಿಗೆ ಮನೆಯಲ್ಲಿ ನೆಲೆಸಿತ್ತು. ಅವಿವಾಹಿತನಾಗಿರುವ ಧನರಾಜ್‌ ದೇರಳಕಟ್ಟೆಯ ಯೇನಪೊಯ ಪಾರ್ಕಲ್ಲಿ ಆಟೋ ರಿûಾ ಚಲಾಯಿಸುತ್ತಿದ್ದರು. ಗುರುವಾರ ಸಂಜೆ ಅವರ ತಾಯಿ ಕೆಲಸ ಮುಗಿಸಿ ಮನೆಗೆ ಮರಳಿದಾಗ ಧನರಾಜ್‌ ಸೀಲಿಂಗ್‌ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮೃತ ಧನರಾಜ್‌ ತಂದೆ ರಿಕ್ಷಾ ಚಾಲಕರಾಗಿರುವ ಲಿಂಗಪ್ಪ ಪೂಜಾರಿ ಅನಾರೋಗ್ಯಕ್ಕೊಳಗಾಗಿದ್ದು ಧನರಾಜ್‌ ಮನನೊಂದು ಆತ್ಮ ಹತ್ಯೆಗೈದಿರುವ ಶಂಕೆ ಇದೆ.

ಹಿಂದೂ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಧನರಾಜ್‌ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next