Advertisement

ಸುಭದ್ರವಾಗಿದೆ ಟೀಂ ಇಂಡಿಯಾ ಭವಿಷ್ಯ…ಐಪಿಎಲ್ ನಲ್ಲಿ ಮಿಂಚುತ್ತಿರುವ ಯುವ ಆಟಗಾರರು

04:44 PM Oct 09, 2020 | keerthan |

ಕೋವಿಡ್ ಕಾರಣದಿಂದ 13ನೇ ಆವೃತ್ತಿಯ ಐಪಿಎಲ್ ಯುಎಇಗೆ ಸ್ಥಳಾಂತರವಾದಾಗ ಭಾರತೀಯ ಯುವ ಪ್ರತಿಭೆಗಳಿಗೆ ಕಷ್ವವಾಗಬಹುದು ಎಂದು ಹಲವರು ಅಂದಾಜಿಸಿದ್ದರು. ಭಾರತದ ಪಿಚ್ ಗಳಲ್ಲಿ ಆಡಿ ಅನುಭವವಿರುವ ಯುವ ಆಟಗಾರರು ಯುಎಇನಲ್ಲಿ ಹೇಗೆ ಆಡುತ್ತಾರೆ, ಈ ಬಾರಿಯೂ ವಿದೇಶಿಗರೇ ಐಪಿಎಲ್ ನಲ್ಲಿ ಮಿಂಚುತ್ತಾರೆ ಎನ್ನುವ ಲೆಕ್ಕಾಚಾರವನ್ನು ಕ್ರಿಕೆಟ್ ಪಂಡಿತರು ಹಾಕಿದ್ದರು. ಆದರೆ ಅವರ ಲೆಕ್ಕಾಚಾರಗಳು ಐಪಿಎಲ್ ನ ಮೊದಲ ಮೂರು ವಾರದಲ್ಲೇ ಬುಡಮೇಲಾಗಿದೆ.

Advertisement

ಹೌದು, ಈ ಬಾರಿಯ ಐಪಿಎಲ್ ನಲ್ಲಿ ಭಾರತೀಯ ಯುವ ಆಟಗಾರರು ಮಿಂಚು ಹರಿಸುತ್ತಿದ್ದಾರೆ. ಪ್ರತಿ ವರ್ಷ ವಿದೇಶಿಗರೇ ಐಪಿಎಲ್ ನಲ್ಲಿ ದೊಡ್ಡ ಹೆಸರು ಮಾಡುತ್ತಿದ್ದರು. ಆದರೆ ಈ ಬಾರಿ ಭಾರತೀಯ ಯುವ ಕ್ರಿಕೆಟರ್ಸ್ ಐಪಿಎಲ್ ನಲ್ಲಿ ನಮ್ಮದೇ ಹವಾ ಎನ್ನುವಂತೆ ಆಡುತ್ತಿದ್ದಾರೆ.

ಹಿರಿಯರ ಸಾಧಾರಣ ಪ್ರದರ್ಶನ
ಈ ಬಾರಿಯ ಐಪಿಎಲ್ ನಲ್ಲಿ ಟೀಂ ಇಂಡಿಯಾ ಸದಸ್ಯರು ಸಾಧಾರಣ ಪ್ರದರ್ಶನ ತೋರುತ್ತಿದ್ದಾರೆ. ವಿರಾಟ್, ರೋಹಿತ್ ಒಂದೊಂದು ಅರ್ಧಶತಕ ಬಾರಿಸಿದ್ದರೂ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ. ಬೌಲರ್ ಗಳಾದ ಭುವಿ, ಬುಮ್ರಾ, ಕುಲದೀಪ್ ಕೂಡಾ ಇದುವರೆಗೆ ಮಿಂಚಿಲ್ಲ. (ಭುವಿ ಕೂಟದಿಂದಲೇ ಔಟಾಗಿದ್ದಾರೆ) ಆದರೆ ರಾಹುಲ್- ಮಯಾಂಕ್ ಉತ್ತಮ ಪ್ರದರ್ಶನ ನೀಡಿದ್ದಾರೆ)

ಪಡಿಕ್ಕಲ್ ಪವರ್ ಹಿಟ್ಟಿಂಗ್

Advertisement

ಕಳೆದೆರಡು ವರ್ಷಗಳಿಂದ ಆರ್ ಸಿಬಿ ತಂಡದ ಸದಸ್ಯನಾಗಿದ್ದರೂ ಬೆಂಚ್ ಕಾಯ್ದಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಈ ಬಾರಿ ದೊರೆತ ಮೊದಲ ಅವಕಾಶವನ್ನೇ ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಇದುವರೆಗೆ ಆಡಿರುವ ಐದು ಪಂದ್ಯಗಳಿಂದ ಮೂರು ಅರ್ಧಶತಕ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಆ ಮೂರು ಪಂದ್ಯಗಳನ್ನು ಆರ್ ಸಿಬಿ ಗೆದ್ದುಕೊಂಡಿದೆ. ಎಡಗೈ ಆರಂಭಿಕ ಆಟಗಾರನಾಗಿರುವ ಪಡಿಕ್ಕಲ್ ತನ್ನ ಕಲಾತ್ಮಕ ಆಟ ಮತ್ತು ಟೈಮಿಂಗ್ ನಿಂದ ಯಶಸ್ಸು ಗಳಿಸುತ್ತಿದ್ದಾರೆ.

ಯಾರ್ಕರ್ ಸ್ಪೆಶಲಿಸ್ಟ್ ಟಿ ನಟರಾಜನ್


ತಮಿಳುನಾಡಿನ ಎಡಗೈ ವೇಗಿ ತಂಗರಸು ನಟರಾಜನ್ ಈ ಐಪಿಎಲ್ ನಲ್ಲಿ ಬೆಳಕಿಗೆ ಬಂದ ಪ್ರತಿಭೆ. 29 ವರ್ಷದ ನಟರಾಜನ್ ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದರೂ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯುತ್ತಿರುವ ಇವರು ನಿಖರ ಯಾರ್ಕರ್ ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ತನ್ನ ಪ್ರದರ್ಶನ ಹೀಗೆ ಮುಂದುವರಿಸಿದಲ್ಲಿ ಭಾರತ ತಂಡದಲ್ಲಿ ಖಾಲಿಯಿರುವ ಎಡಗೈ ವೇಗಿ ಜಾಗವನ್ನು ತುಂಬುವುದರಲ್ಲಿ ಅನುಮಾನವಿಲ್ಲ.

ಸ್ಪಿನ್ನರ್ ರವಿ ಬಿಶ್ನೋಯಿ

ಇನ್ನೂ 20ರ ಹರೆಯದ ರಾಜಸ್ಥಾನ ಮೂಲಕ ಯುವಕ. 2019ರ ಅಂಡರ್ 19 ವಿಶ್ವಕಪ್ ನಲ್ಲಿ ಮಿಂಚಿದ್ದ ರವಿ ಬಿಶ್ನೋಯಿಯನ್ನು ಪಂಜಾಬ್ ಫ್ರಾಂಚೈಸಿ ಖರೀದಿಸಿತ್ತು. ಲೆಗ್ ಸ್ಪಿನ್ನರ್ ಆಗಿರುವ ರವಿಗೆ ಕೋಚ್ ಅನಿಲ್ ಕುಂಬ್ಳೆ ತರಬೇತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಬಿಶ್ನೋಯಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ವಾರ್ನರ್ ಮತ್ತು ಬೆರಿಸ್ಟೋ ವಿಕೆಟ್ ಪಂದ್ಯದ ಗತಿ ಬದಲಿಸಿದ್ದರು.

ವೇಗಿ ಶಿವಂ ಮಾವಿ


2018ರ ಅಂಡರ್ 19 ವಿಶ್ವಕಪ್ ನಲ್ಲಿ ಮಿಂಚಿದ ಭಾರತದ ಯುವ ವೇಗಿ. ವಯಸ್ಸು ಇನ್ನೂ 20. ಅಂಡರ್ 19 ವಿಶ್ವಕಪ್ ನಲ್ಲಿ ಭಾರಿ ಸದ್ದು ಮಾಡಿದ್ದ ಮಾವಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿಸಿತ್ತು. ಆದರೆ ಗಾಯದ ಸಮಸ್ಯೆ ಮಾವಿಯನ್ನು ಕಾಡಿತ್ತು. ಆದರೆ ಈ ಬಾರಿ ಕೆಕೆಆರ್ ತಂಡದಲ್ಲಿ ಉತ್ತಮ ದಾಳಿ ಸಂಘಟಿಸುತ್ತಿರುವ ಮಾವಿ ತನ್ನ ವೇಗ ಮತ್ತು ಚಾಣಾಕ್ಷ ಬೌಲಿಂಗ್ ನಿಂದ ಹೆಸರಾಗಿದ್ದಾನೆ. ಸ್ಥಿರ ಪ್ರದರ್ಶನ ಮುಂದುವರಿಸಿದರೆ ಕೆಲವೇ ವರ್ಷಗಳಲ್ಲಿ ಟೀಂ ಇಂಡಿಯಾ ಕದ ತಟ್ಟುವುದರಲ್ಲಿ ಅನುಮಾನವಿಲ್ಲ.

-ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next