Advertisement

ಯುವ ಕಲಾವಿದೆ ಮೇಘನಾ ಹೆಗಡೆ ಕೇಂದ್ರ‌ ಪುರಸ್ಕಾರ

08:59 PM Jul 12, 2023 | Team Udayavani |

ಶಿರಸಿ: ಯುವ ಸಿತಾರ್ ಹಾಗೂ ರುದ್ರವೀಣಾ ವಾದಕಿ ಮೇಘನಾ ಹೆಗಡೆ ಅವರಿಗೆ ಭಾರತ ಸರಕಾರ ನೀಡುವ ವಿದ್ಯಾರ್ಥಿ ವೇತನ ಪುರಸ್ಕಾರ ಪ್ರಕಟವಾಗಿದೆ.

Advertisement

ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ (ಸಿಸಿಆರ್ಟಿ) ನಡೆಸಿದ 2021  22ನೇ ಸಾಲಿನ ಯುವ ಪ್ರತಿಭಾ ಶೋಧದ ಸಂಗೀತ ವಿಭಾಗದಲ್ಲಿ ಈ ಆಯ್ಕೆಗೆ ಭಾಜನಳಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಏಕೈಕ ವಿದ್ಯಾರ್ಥಿಯಾಗಿ ಸಂಗೀತ ವಿಭಾಗದಲ್ಲಿ ಆಯ್ಕೆ ಆದ ಮೇಘನಾ ಹೆಗಡೆ ಕಳೆದ ಒಂಬತ್ತು ವರ್ಷಗಳಿಂದ ಪ್ರಸಿದ್ಧ ರುದ್ರ ವೀಣಾ ವಾದಕ ಪಂಡಿತ್ ಆರ್.ವಿ. ಹೆಗಡೆ ಅವರ ಶಿಷ್ಯರಾಗಿ ಸಿತಾರ್ ಹಾಗೂ 6 ವರ್ಷದಿಂದ ರುದ್ರವೀಣೆ ಅಭ್ಯಾಸ ಮಾಡುತ್ತಿದ್ದಾರೆ.

ಇವರು ನಗರದ ಮಾನಸಾ ಪೇಪರ್ಸನ ಪರಮೇಶ್ವರ ಹೆಗಡೆ ಹಾಗೂ ಪಾರ್ವತಿ ಹೆಗಡೆ ಪುತ್ರಿ. ಪ್ರಸಕ್ತ ರುದ್ರವೀಣೆಯಲ್ಲಿ ಈ ಸಾಧನೆ ಮಾಡಿದ‌ ದೇಶದ ಏಕೈಕ ಪ್ರತಿಭೆ ಆಗಿರುವದು ವಿಶೇಷವಾಗಿದೆ ಪ್ರಸ್ತುತ ಮೇಘ‌ನಾ ಅವರು ಎಂಇಎಸ್ ಚೈತನ್ಯ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next