Advertisement

2 ಕಂತಿನಲ್ಲಿ ಭವಿಷ್ಯ ನಿಧಿ ಬಡ್ಡಿ ಪಾವತಿ

11:35 PM Sep 09, 2020 | mahesh |

ನವದೆಹಲಿ: ಪ್ರಸಕ್ತ ವಿತ್ತೀಯ ವರ್ಷಕ್ಕೆ ಸಂಬಂಧಿಸಿದಂತೆ ಶೇ.8.5ರ ಬಡ್ಡಿ ದರದಂತೆ ಆಂಶಿಕವಾಗಿ ಬಡ್ಡಿಯನ್ನು ನೀಡಲು ಭವಿಷ್ಯ ನಿಧಿ ಮಂಡಳಿ ಬುಧವಾರ ನಿರ್ಧರಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಪಾವತಿಯನ್ನು ಎರಡು ಕಂತುಗಳಲ್ಲಿ ಹಾಗೂ ಪೂರ್ಣ ಮೊತ್ತವನ್ನು ಡಿಸೆಂಬರ್‌ನಲ್ಲಿ ನೀಡಲಾಗುತ್ತದೆ. ಈ ಕ್ರಮದಿಂದಾಗಿ ಆರು ಕೋಟಿ ಮಂದಿ ನೌಕರರಿಗೆ ಅನುಕೂಲವಾಗಲಿದೆ. ಭವಿಷ್ಯ ನಿಧಿಯ ಕೇಂದ್ರೀಯ ಮಂಡಳಿ ಸದಸ್ಯರು ಡಿಸೆಂಬರ್‌ನಲ್ಲಿ ಮತ್ತೆ ಸಭೆ ಸೇರಿ ಶೇ. 0.35ರಷ್ಟು ಬಡ್ಡಿ ಪಾವತಿ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಿ ದ್ದಾರೆ. ಮಾರ್ಚ್‌ನಲ್ಲಿ ಬಡ್ಡಿ ದರವನ್ನು ಶೇ.8.5ಕ್ಕೆ ನಿಗದಿ ಮಾಡಲು ಸಮ್ಮತಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next