Advertisement

ನೀವು, ನಿಮ್ಮ ಠೇವಣಿ

03:45 AM Jan 16, 2017 | Team Udayavani |

ಬ್ಯಾಂಕುಗಳು ಸಾಮಾನ್ಯವಾಗಿ ತಾವು ಗ್ರಾಹಕರಿಂದ ಸ್ವೀಕರಿಸಿದ ಠೇವಣಿಯನ್ನೇ ಸಾಲವಾಗಿ ಕೊಡುತ್ತವೆ. ಸಾಲಕ್ಕಾಗಿ ಒತ್ತಡ ಹೆಚ್ಚಿದಾಗ ಅವು ರಿಸರ್ವ ಬ್ಯಾಂಕಿನಿಂದ ರೆಪೋ ಹೆಸರಿನಲ್ಲಿ ಸಾಲ ಪಡೆದು ತನ್ನ ಗ್ರಾಹಕರಿಗೆ ಸಾಲ ನೀಡುತ್ತವೆ. ಈ ಸಾಲಕ್ಕೆ ಬ್ಯಾಂಕುಗಳು ರಿಸರ್ವ ಬ್ಯಾಂಕ್‌ಗೆ ಬಡ್ಡಿ ನೀಡಬೇಕಾಗುತ್ತಿದ್ದು, ಈ ಬಡ್ಡಿದರ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ.

Advertisement

ಬ್ಯಾಂಕಿಂಗ್‌ ಒಂದು ಉದ್ಯಮ. ಗ್ರಾಹಕರು ಇಡುವ ಠೇವಣಿ, ಇವುಗಳಿಗೆ ಕಚ್ಚಾ ಮಾಲು. ಗ್ರಾಹಕರಿಗೆ ಇವರು ನೀಡುವ ಸಾಲ ಮತ್ತು ಇತರ ಸೇವೆಗಳೇ ಫಿನಿಷx ಪ್ರಾಡಕ್ಟಗಳು. ಈ ಕಚ್ಚಾ ಮಾಲುಗಳಿಗೆ ಬ್ಯಾಂಕುಗಳು ಬಡ್ಡಿಯ ಹೆಸರಿನಲ್ಲಿ ಗ್ರಾಹಕರಿಗೆ ಹಣ ನೀಡಬೇಕಾಗುತ್ತದೆ ಮತ್ತು ಈ ಫಿನಿಷx ಪ್ರಾಡಕ್ಟಗಳನ್ನು ಗ್ರಾಹಕರಿಗೆ ನೀಡುವಾಗ ಬ್ಯಾಂಕುಗಳು ಸಿಬ್ಬಂದಿಗಳು ಮತ್ತು ಇನ್ನಿತರ ಖರ್ಚುಗಳಿಗಾಗಿ ವೆಚ್ಚ ಮಾಡಬೇಕಾಗುತ್ತದೆ. ಈ ಫಿನಿಷx ಪ್ರಾಡಕ್ಟಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಬ್ಯಾಂಕುಗಳು ಆದಾಯಗಳಿಸುತ್ತವೆ. ಈ ಆದಾಯ ಮತ್ತು ವೆಚ್ಚದ ಮಧ್ಯದ ವ್ಯತ್ಯಾಸವೇ ಬ್ಯಾಂಕುಗಳ ಲಾಭ. ಬ್ಯಾಂಕುಗಳು ತಮ್ಮ ಸಿಬ್ಬಂದಿಗಳಿಗೆ ಸಂಬಳ ಮತ್ತು ಇತರ ಸೌಲಭ್ಯಗಳನ್ನು ಕೊಡಬೇಕಾಗತ್ತದೆ. ಇದಕ್ಕೆ ಹೊರತಾಗಿ ಇನ್ನಿತರ ವೆಚ್ಚಗಳು ಇರುತ್ತವೆ. ಶೇರುದಾರರಿಗೆ ಮತ್ತು ಸರ್ಕಾರಕ್ಕೆ ಲಾಭಾಂಶ ನೀಡಬೇಕಾಗುತ್ತದೆ.

ತೆರಿಗೆಯನ್ನು ನೀಡಬೇಕಾಗುತ್ತದೆ. ಬ್ಯಾಂಕುಗಳು ತಮ್ಮ ಖರ್ಚು ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ತಾವು ಠೇವಣಿಗೆ ನೀಡುವ ಮತ್ತು ಗ್ರಾಹಕರ ಸಾಲ ಮತ್ತು ಇತರ ಸೇವೆಗಳಿಗೆ ಬಡ್ಡಿಯನ್ನು ಮತ್ತು ಶುಲ್ಕವನ್ನು ನಿಧ‌ìರಿಸುತ್ತವೆ. ಬ್ಯಾಂಕುಗಳ ಸುಗಮ ನಿರ್ವಹಣೆಗೆ ಈ ಅಂತರ ಸುಮಾರು ಕನಿಷ್ಟ ಶೇ 2.50 ರೀಂದ ಶೇ. 3ರಷ್ಟು ಇರಬೇಕಾಗುತ್ತದೆ. ಅಂತೆಯೇ ರೆಪೋ ದರ ಇಳಿದಾಗ, ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಇಳಿಸುವ ಅನಿವಾರ್ಯತೆ ಬಂದಾಗ, ಅದೇ ಪ್ರಮಾಣದಲ್ಲಿ ಠೇವಣಿ ಮೇಲಿನ ಬಡ್ಡಿದರವನ್ನು ಇಳಿಸಿ ತಮ್ಮ ಲೆಕ್ಕಾಚಾರವನ್ನು ಸಮದೂಗಿಸಿಕೊಳ್ಳುತ್ತವೆ. 

ಬ್ಯಾಂಕುಗಳಲ್ಲಿ 100 ಠೇವಣಿ ಬಂದರೆ, 4 ರೂಪಾಯಿಯನ್ನು ಕ್ಯಾಷ್‌ ರಿಸರ್ವ್‌ ರೇಷಿಯೋ ಹೆಸರಿನಲ್ಲಿ ಮತ್ತು 20.75 ರೂಪಾಯಿಗಳನ್ನು (ಇRR) ಹೆಸರಿನಲ್ಲಿ ರಿಸರ್ವ ಬ್ಯಾಂಕ್‌ ಹೆಸರಿನಲ್ಲಿ ಕಡ್ಡಾಯವಾಗಿ ಇಡಬೇಕಾಗುತ್ತದೆ. ಇವುಗಳಿಗೆ ರಿಸರ್ವ ಬ್ಯಾಂಕ್‌ ಬಡ್ಡಿ ನೀಡುವುದಿಲ್ಲ. ಉಳಿದ 75.25 ರೂಪಾಯಿಗಳನ್ನು ಸಾಲವಾಗಿ ಕೊಟ್ಟು ಅದಾಯ ಗಳಿಸಬೇಕಾಗುತ್ತದೆ. ಇದು ಬ್ಯಾಂಕಿನ ಸ್ಥಿರತೆ, ಗ್ರಾಹಕರ ಠೇವಣಿಯ ಭದ್ರತೆ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಗ್ರಾಹಕ ಸ್ನೇಹಿ ಕ್ರಮವಾಗಿರುತ್ತದೆ. ಹಾಗೆಯೇ ಗ್ರಾಹಕರ ಠೇವಣಿಗಳಿಗೆ ಸರ್ಕಾರಿರಂಗದ ಬ್ಯಾಂಕುಗಳಲ್ಲಿ ಒಂದು ಲಕ್ಷ$ ರೂಪಾಯಿ ವರೆಗೆ ವಿಮೆ ಕೂಡಾ ಇರುತ್ತದೆ.

ಬ್ಯಾಂಕುಗಳು ಸಾಮಾನ್ಯವಾಗಿ ತಾವು ಗ್ರಾಹಕರಿಂದ ಸ್ವೀಕರಿಸಿದ ಠೇವಣಿಯನ್ನೇ ಸಾಲವಾಗಿ ಕೊಡುತ್ತವೆ. ಸಾಲಕ್ಕಾಗಿ ಒತ್ತಡ ಹೆಚ್ಚಿದಾಗ ಅವು ರಿಸರ್ವ ಬ್ಯಾಂಕಿನಿಂದ ರೆಪೋ ಹೆಸರಿನಲ್ಲಿ ಸಾಲ ಪಡೆದು ತನ್ನ ಗ್ರಾಹಕರಿಗೆ ಸಾಲ ನೀಡುತ್ತವೆ. ಈ ಸಾಲಕ್ಕೆ ಬ್ಯಾಂಕುಗಳು ರಿಸರ್ವ ಬ್ಯಾಂಕ್‌ಗೆ ಬಡ್ಡಿ ನೀಡಬೇಕಾಗುತ್ತಿದ್ದು, ಈ ಬಡ್ಡಿದರ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಸಧ್ಯ ಅದು ಶೇ.6.2 5 ರಷ್ಟು ಇರುತ್ತದೆ. ಹಾಗೆಯೇ ಬ್ಯಾಂಕುಗಳೂ ತಮ್ಮಲ್ಲಿ ಹೆಚ್ಚಿಗೆ ಠೇವಣಿ ಇದ್ದರೆ, ಅದನ್ನು ರಿಸರ್ವ ಬ್ಯಾಂಕ್‌ನಲ್ಲಿ ಠೇವಣಿ ಇಡುತ್ತಿದ್ದು, ಇದನ್ನು ರಿವರ್ಸ್‌ ರೆಪೊ ಎಂದು ಹೇಳುತ್ತಾರೆ. 

Advertisement

ಈ ಠೇವಣಿಗೆ ಬ್ಯಾಂಕುಗಳು ಸಧ್ಯ ಶೇ.5.75ರಷ್ಟು ಬಡ್ಡಿಯನ್ನು ಪಡೆಯುತ್ತವೆ. ಈ ರೆಪೋ ಮತ್ತು ರಿವರ್ಸ್‌ ರೆಪೋ ದರಗಳು ಸಾಮಾನ್ಯವಾಗಿ ರಿಸರ್ವ್‌ ಬ್ಯಾಂಕ್‌ನ ದ್ವೆ„ಮಾಸಿಕ ಹಣಕಾಸು ನೀತಿಯ ಪರಾಮರ್ಷೆಯ ಸಮಯದಲ್ಲಿ ನಿರ್ಧರಿಸಲಾಗುವುದು. 

– ರಮಾನಂದ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next