ಚೆನ್ನೈ: ವಿಶ್ವಕಪ್‌ನಲ್ಲಿ ಸತತ ಎರಡು ಪಂದ್ಯಗಳ ಸೋಲಿನ ನಂತರ ಪಾಕಿಸ್ಥಾನ ತಂಡವು ಅಫ್ಘಾನಿಸ್ತಾನ ವಿರುದ್ಧ ಹೊಸ ರೀತಿಯ ತಂಡವಾಗಿ ಪಂದ್ಯವನ್ನು ಆಡಲಿದೆ ಎಂದು ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಭಾನುವಾರ ಭರವಸೆ ನೀಡಿದ್ದಾರೆ.
“ನಾವು ನಾಲ್ಕು ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಗೆದ್ದಿದ್ದೇವೆ. ನಮಗೆ ಆತ್ಮವಿಶ್ವಾಸವಿದೆ. ಕಳೆದ ಎರಡು ಪಂದ್ಯಗಳಲ್ಲಿ ನಾವು ಉತ್ತಮವಾಗಿ ಆಡಲಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದ ಮುನ್ನಾದಿನದಂದು ಇಮಾಮ್ ಹೇಳಿದ್ದಾರೆ.
“ನಾವು ಗುರಿಯವರೆಗೆ ಪ್ರದರ್ಶನ ನೀಡಬೇಕು. ನಿರ್ದಿಷ್ಟ ದಿನದಂದು ನೀವು ಹೇಗೆ ಆಡುತ್ತೀರಿ ಎಂಬುದು ಬಹಳ ಮುಖ್ಯ. ನೀವು ಎಷ್ಟು ಬೇಕಾದರೂ ಮಾತನಾಡಬಹುದು. ಆದರೆ ದಿನದಲ್ಲಿ ಹೇಗೆ ಆಡುತ್ತೀರಿ ಎಂಬುದು ಮುಖ್ಯ. ನಾವು ಅದರ ಬಗ್ಗೆ ಮಾತನಾಡಿದ್ದೇವೆ. ನಾಳೆ ಚೆನ್ನೈನಲ್ಲಿ ನೀವು ಹೊಸ ತಂಡವನ್ನು ನೋಡುತ್ತೀರಿ. ಪಾಕಿಸ್ಥಾನಿ ಸ್ಪಿನ್ನರ್‌ಗಳು ಇಲ್ಲಿಯವರೆಗೆ ಸ್ಪರ್ಧೆಯಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ, ಚೆಪಾಕ್ ಸ್ಪಿನ್ ಸ್ನೇಹಿ ಆಗಿರುವುದರಿಂದ ಸ್ಪಿನ್ನರ್ ಗಳು ಮಿಂಚಲು ಅನುವು ಮಾಡಿಕೊಡುತ್ತದೆ” ಎಂದರು.
ಅಫ್ಘಾನಿಸ್ಥಾನ ತಂಡದಲ್ಲಿ ರಶೀದ್ ಖಾನ್ ಮತ್ತು ಮುಜೀಬ್ ಜದ್ರಾನ್ ಅವರಂತಹವರನ್ನು ಹೊಂದಿರುವುದರಿಂದ ಸಿದ್ಧತೆಗಳು ಹೆಚ್ಚಾಗಿ ಸ್ಪಿನ್-ಕೇಂದ್ರಿತವಾಗಿವೆಯೇ ಎಂದು ಕೇಳಿದಾಗ, “ಈಗ ನಮಗೆ ಯಾವುದೇ ರೀತಿಯ ಹೆಚ್ಚಿನ ಅಭ್ಯಾಸವನ್ನು ಮಾಡಲು ಅವಕಾಶವಿದೆ ಎಂದು ನಾನು ನಂಬುವುದಿಲ್ಲ. ನಾವು ಪಂದ್ಯಾವಳಿಯಲ್ಲಿದ್ದೇವೆ ಮತ್ತು ಕೇವಲ ಟಾಪ್-ಅಪ್ ಬಗ್ಗೆ ಹೇಳಲು ನಮಗೆ ಅಷ್ಟು ಸಮಯವಿಲ್ಲ” ಎಂದರು.
“ನಾವು ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೇವೆ. ನಾವು ಅಫ್ಘಾನಿಸ್ತಾನದ ವಿರುದ್ಧ ಸ್ಪಿನ್ ಗೆ ನೆರವಾಗುವ ಹಂಬಂತೋಟಾದಲ್ಲಿ ಆಡಿದ್ದು, ಅಲ್ಲಿ ನಾವು 3-0 ಯಿಂದ ಗೆದ್ದಿದ್ದೇವೆ ಎಂದರು.