Advertisement
ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಇತರ ಪರವಾನಗಿಗಳಂತಹ ದಾಖಲೆಗಳ ಸಿಂಧುತ್ವ (ವ್ಯಾಲಿಡಿಟಿ) ವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಸರ್ಕಾರ ಈ ಮೊದಲು ಜೂನ್ 30 ರವರೆಗೆ ಗಡುವು ನೀಡಿತ್ತು. ಇದನ್ನು ಈಗ ಸೆ.30ರವರೆಗೆ ವಿಸ್ತರಿಸಲಾಗಿದೆ.
Related Articles
Advertisement
ಈ ಹಿಂದೆ ಫೆ.1ರಿಂದ ಜೂ.30ರವರೆಗಿನ ದಾಖಲೆಗಳ ಮಾನ್ಯತೆಯನ್ನು ನೀಡಿ ಪ್ರಕಟಣೆ ನೀಡಲಾಗಿತ್ತು. ಇದೀಗ ಇದರ ಗಡುವು ಅವಧಿಯನ್ನು ಮತ್ತೆ ಎರಡು ತಿಂಗಳಿಗೆ ಸಚಿವಾಲಯವು ವಿಸ್ತರಣೆ ಮಾಡಿದೆ.
ಲಾಕ್ ಡೌನ್ ಕಾರಣದಿಂದ ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 1989 ಕ್ಕೆ ಸಂಬಂಧಿಸಿದ ದಾಖಲೆಗಳ ನವೀಕರಣದಲ್ಲಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸೂಚನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸರ್ಕಾರಿ ಸಾರಿಗೆ ಕಚೇರಿಗಳ ಮುಂದೆ ಉದ್ದದ ಸರತಿ ಸಾಲುಗಳಲ್ಲಿ ಈ ಸಮಯದಲ್ಲಿ ಜನರು ನಿಲ್ಲುವುದನ್ನು ತಪ್ಪಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ.