Advertisement

ಯೂಟ್ಯೂಬ್‌ ಟೀಚರ್‌

09:52 AM Oct 24, 2017 | |

ಯಾವುದೇ ಐಎಎಸ್‌- ಕೆಎಎಸ್‌ ಟಾಪರ್‌ಗಳನ್ನು ನೀವು “ನಿಮ್ಮ ಸಕ್ಸಸ್ಸಿನ ಗುಟ್ಟೇನು?’ ಅಂತ ಕೇಳಿ. ಅವರಲ್ಲಿ ಬಹುತೇರು ಯೂ ಟ್ಯೂಬ್‌ನ ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಆದರೆ, ಕೇವಲ ಲೋಕ ಸೇವಾ ಆಯೋಗ ಪರೀಕ್ಷೆಗಷ್ಟೇ ಅಲ್ಲ. ಬೇರೆ ಬೇರೆ ತರಗತಿಗಳ ಪಾಠಗಳೂ ಯೂ ಟ್ಯೂಬ್‌ನ ಬುಟ್ಟಿಯಲ್ಲಿವೆ…

Advertisement

ಯುವಕರಿಗೆ ಯೂಟ್ಯೂಬ್‌ ಆನ್ನೋದು ಒಂದು ಟಾಕೀಸು. ಹೊಚ್ಚ ಹೊಸ ಸಿನಿಮಾದ ಟ್ರೈಲರು, ರಂಜಿಸುವ ಹಾಡುಗಳು, ಮನ ತಣಿವ ಸಿನಿಮಾಗಳು- ಇವುಗಳಿಗೆ ಅವರ ಮೊದಲ ಆದ್ಯತೆ. ಅದು ಬಿಟ್ಟರೆ ಹಾಸ್ಯದ ವಿಡಿಯೋಗಳನ್ನು ನೋಡಿ ಅನೇಕರು “ಹೊಟ್ಟೆ’ ತುಂಬಿಸಿಕೊಳ್ಳುವುದುಂಟು! ಆದರೆ, ಯೂ ಟ್ಯೂಬ್‌ ಅನ್ನು ಮನರಂಜನೆಯ ವಾಹಿನಿಯಾಗಿ ನೋಡುವುದಕ್ಕಿಂತ, ಟೀಚರ್‌ ಆಗಿ, ಗೈಡ್‌ ಆಗಿ ನೋಡಿದರೆ, ಮುಂದೊಂದು ದಿನ ಯಶಸ್ಸೊಂದು ನಿಮ್ಮನ್ನು ಎವರೆಸ್ಟ್‌ಗೆ ಏರಿಸುತ್ತೆ! ನೀವು ಬೇಕಾದರೆ, ಯಾವುದೇ ಐಎಎಸ್‌- ಕೆಎಎಸ್‌ ಟಾಪರ್‌ಗಳನ್ನು ನೀವು “ನಿಮ್ಮ ಸಕ್ಸಸ್ಸಿನ ಗುಟ್ಟೇನು?’ ಅಂತ ಕೇಳಿ. ಅವರಲ್ಲಿ ಬಹುತೇಕರು ಯೂಟ್ಯೂಬ್‌ನ ಪ್ರಸ್ತಾಪ ಮಾಡಿಯೇ ಮಾಡುತ್ತಾರೆ. ಆದರೆ, ಕೇವಲ ಲೋಕಸೇವಾ ಆಯೋಗ ಪರೀಕ್ಷೆಗಷ್ಟೇ ಅಲ್ಲ. ಬೇರೆ ಬೇರೆ ತರಗತಿಗಳ ಪಾಠಗಳೂ  ಯೂಟ್ಯೂಬ್‌ನ ಬುಟ್ಟಿಯಲ್ಲಿವೆ.

1.  ಅನ್‌ ಅಕಾಡೆಮಿ
ಬಹುತೇಕ ಐಎಎಸ್‌ ಟಾಪರ್‌ಗಳಿಗೆ ಈ ಚಾನೆಲ್‌, ರ್‍ಯಾಂಕ್‌ ಹೊಂದಲು ನೆರವಾಗಿದೆ. ರೋಮನ್‌ ಸೈನಿ ಮತ್ತು ಗೌರವ್‌ ಮಂಜಾಲ್‌ ಎಂಬವರು ಐಎಎಸ್‌ ಪರೀಕ್ಷೆಯನ್ನು ಮುಂದಿಟ್ಟುಕೊಂಡೇ ಈ ಚಾನೆಲ್‌ ಆರಂಭಿಸಿದರು. ಇತಿಹಾಸ, ಗಣಿತ, ವಿಜ್ಞಾನ, ಅರ್ಥಶಾಸ್ತ್ರಗಳಿಂದ ಹಿಡಿದು ಸಾಮಾನ್ಯ ಜ್ಞಾನದ ಮಾಹಿತಿ ನೀಡುವ ಹಲವು ವಿಡಿಯೋಗಳು ಇಲ್ಲಿವೆ.  
ಸಬ್  ಸ್ಕ್ರೈಬ್: 11.15 ಲಕ್ಷ

2. ಟ್ಯುಟೋರ್‌ ವಿಸ್ತಾ
ಇದು ಆನ್‌ಲೈನ್‌ ಟ್ಯೂಶನ್‌ ಸಂಸ್ಥೆ. ಶಿಕ್ಷಣಕ್ಕೆ ಸಂಬಂಧಿಸಿದ ಗುಣಮಟ್ಟದ ವಿಡಿಯೋಗಳನ್ನು ಚಾನೆಲ್‌ ಮೂಲಕ ತಲುಪಿಸುತ್ತಿದೆ. ಒಟ್ಟಾರೆ 2 ಸಾವಿರ ಶಿಕ್ಷಕರು ಇಲ್ಲಿ ತರಗತಿ ನಡೆಸುತ್ತಾರೆ. 60 ಲಕ್ಷ ವೀಕ್ಷಣೆ ಪಡೆದಿರುವ ಈ ಚಾನೆಲ್‌, ಸಾಕಷ್ಟು ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಿದೆ. ಗಣಿತ, ವಿಜ್ಞಾನ ಪಾಠಗಳು ಈ ಚಾನೆಲ್‌ನ ಹೈಲೈ ಟ್‌. 
ಸಬ್  ಸ್ಕ್ರೈಬ್: 88,950

3. ಮೆರಿಟ್‌ನೇಶನ್‌
1ರಿಂದ 12 ತರಗತಿಯ ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತ ಚಾನೆಲ್‌ ಇದು. ಮೆರಿಟ್‌ನೇಶನ್‌ ಕೂಡ ಗಣಿತ, ವಿಜ್ಞಾನಕ್ಕೆ ಹೆಚ್ಚು ಜನಪ್ರಿಯ. ಈ ಚಾನೆಲ್‌ ಆರಂಭವಾಗಿ ಕೇವಲ ಒಂದು ವರುಷವಾಗಿದ್ದರೂ, ದೇಶದಾದ್ಯಂತ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಹಾದಿಯಲ್ಲಿ ಇದನ್ನು ನೆನೆಸಿಕೊಳ್ಳುತ್ತಿದ್ದಾರೆ.
ಸಬ್  ಸ್ಕ್ರೈಬ್: 29,100

Advertisement

4. ದಿಕ್ಯೂರಿಯಸ್‌ ಎಂಜಿನಿಯರ್‌
ಓಂಕಾರ್‌ ಭಗತ್‌ ಎಂಬ ಕಂಪ್ಯೂಟರ್‌ ಎಂಜಿನಿಯರ್‌ ವಿದ್ಯಾರ್ಥಿ ಆರಂಭಿಸಿದ ಈ ಚಾನೆಲ್‌ ಅನ್ನು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹೆಚ್ಚು ಇಷ್ಟಪಡುತ್ತಾರೆ. ಎಂಜಿನಿಯರಿಂಗ್‌ ಪದವಿ ಮೇಲಿರುವ ಮಿಥ್‌ಗಳನ್ನು ಹೇಳುವುದರೊಂದಿಗೆ, ವಿಡಿಯೋ ಮೂಲಕ ಸರವಾಗಿ ಪಾಠಗಳನ್ನು ಕಲಿಸುತ್ತದೆ.
ಸಬ್  ಸ್ಕ್ರೈಬ್: 72,510

5. ಅರುಣ್‌ ಕುಮಾರ್‌
ಇಲ್ಲು ಸ್ಟ್ರೇಟರ್‌ ಟ್ಯುಟೋರಿಯಲ್‌ ಅಂತಲೇ ಈ ಚಾನೆಲ್‌ ಜನಪ್ರಿಯ. ಅಲ್ಲದೇ, ಫೋಟೋಶಾಪ್‌ ಬಳಸಿ ಕೊಂಡು, ಹಲವು ವಿನ್ಯಾಸಗಳ ಮೂಲಕ ಪಠ್ಯವನ್ನು ತಲುಪಿಸುತ್ತದೆ.  ”ನೆನಪಿನಲ್ಲಿ ಉಳಿಯುವಂಥ ಮಾದರಿಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಈ ಚಾನೆಲ್‌ ಮುಖ್ಯಸ್ಥ ಅರುಣ್‌ ಕುಮಾರ್‌.
ಸಬ್  ಸ್ಕ್ರೈಬ್: 4 ಲಕ್ಷ

6. 7 ಆ್ಯಕ್ಟಿವ್‌ ಸ್ಟುಡಿಯೋ
ಇದು ಇತರೆ ಚಾನೆಲ್‌ಗಳಿಗಿಂತ ತುಸು ಭಿನ್ನ. ಆಯಾ ಕಾಲೇಜು, ವಿದ್ಯಾರ್ಥಿಗಳಿಗೆ ಬೇಡಿಕೆಗೆ ಅನುಗುಣವಾಗಿ ಅಗತ್ಯವಿರುವ ವಿಡಿಯೋಗಳನ್ನು ವಿನ್ಯಾಸಿಸುತ್ತದೆ. 3ಡಿ ಎಫೆಕ್ಟ್ನಲ್ಲಿರುವ ಈ ವಿಡಿಯೋಗಳು 2.5ಕೋಟಿ ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿವೆ.
ಸಬ್  ಸ್ಕ್ರೈಬ್: 1.11 ಲಕ್ಷ

Advertisement

Udayavani is now on Telegram. Click here to join our channel and stay updated with the latest news.

Next