Advertisement

ಕಿರುಕುಳ ಪ್ರಕರಣ ದಾಖಲಿಗೆ ಕಾಲಮಿತಿ ಬೇಡ: ಮೇನಕಾ

08:40 AM Oct 09, 2018 | Karthik A |

ಮುಂಬಯಿ: ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿ ವಯೋಮಿತಿ ನಿಗದಿ ಇರಬಾರದು. ಘಟನೆ ನಡೆದು 10-15 ವರ್ಷ ಕಳೆದು, ಅದರ ಬಗ್ಗೆ ಯಾರೇ ದೂರು ಸಲ್ಲಿಸಿದರೂ ಅದನ್ನು ದಾಖಲಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಸೋಮವಾರ ಕೇಂದ್ರ ಕಾನೂನು ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಬಾಲಿವುಡ್‌ ನಟ ನಾನಾ ಪಾಟೇಕರ್‌ ವಿರುದ್ಧ ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಪ್ರಕರಣದ ಆರೋಪ ಮಾಡಿದ ಬಳಿಕ ಹಲವಾರು ಮಂದಿ ಪ್ರಮುಖರು ಅದೇ ಮಾದರಿ ದೂರುಗಳನ್ನು ಹೇಳಿಕೊಂಡ ಬಳಿಕ ಸಚಿವೆ ಮನೇಕಾ ಈ ಮನವಿ ಮಾಡಿದ್ದಾರೆ. 

Advertisement

ಭಾರತದಲ್ಲಿಯೂ ‘ಮಿ ಟೂ’ ಆಂದೋಲನ ಶುರುವಾಗಿರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ. ಸಣ್ಣ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೂ ಕೆಲವು ವರ್ಷಗಳ ಬಳಿಕವೂ ಅವರಿಗೆ ದೂರು ದಾಖಲಿಸಲು ಅವಕಾಶ ಇರಬೇಕು ಎಂಬ ಅಂಶವನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾಗಿ ಮೇನಕಾ ಹೇಳಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರೇ ಕಿರುಕುಳ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಅಂಥವರ ವಿರುದ್ಧ ದೂರು ನೀಡಲು ಅಥವಾ ಸಾರ್ವಜನಿಕವಾಗಿ ಮಾತನಾಡಲು ಕಷ್ಟವಾಗುತ್ತದೆ ಎಂದಿದ್ದಾರೆ. ಮಿ ಟೂ ಆಂದೋಲನವನ್ನು ನಿಜವಾಗಿಯೂ ಕಿರುಕುಳಕ್ಕೆ ಒಳಗಾಗಿದ್ದರೆ ಬಳಕೆ ಮಾಡಬೇಕೇ ಹೊರತು, ಯಾರನ್ನೂ ಗುರಿಯಾಗಿಸಿಕೊಳ್ಳಬಾರದು ಎಂದಿದ್ದಾರೆ

ಕ್ಷಮೆ ಯಾಚನೆ: ನಟ-ನಿರ್ಮಾಪಕ ರಜತ್‌ ಕಪೂರ್‌ ಸೋಮವಾರ ಕ್ಷಮೆ ಯಾಚಿಸಿದ್ದಾರೆ. ಕಪೂರ್‌ ತಮಗೆ ಕಿರುಕುಳ ನೀಡಿದ್ದರು ಎಂದು ಇಬ್ಬರು ಮಹಿಳೆಯರು ಆರೋಪ ಮಾಡಿದ್ದರಿಂದ ಟ್ವಿಟರ್‌ ಮೂಲಕ ಕ್ಷಮೆ ಕೋರಿದ್ದಾರೆ. ಇನ್ನೊಂದೆಡೆ ಎಐಬಿ ಕಾಮಿಡಿ ಸಂಘಟನೆಯ ಸಹ ಸಂಸ್ಥಾಪಕ ತನ್ಮಯ್‌ ಭಟ್‌ ಕಿರುಕುಳದ ಆರೋಪಗಳ ಹಿನ್ನೆಲೆಯಲ್ಲಿ ಸಂಘಟನೆಯಿಂದ ದೂರ ಇರುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಸೇಮವಾರ ಹೊರಡಿಸಲಾಗಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next