Advertisement

ಡೆಮೋಹಟ್‌ನಲ್ಲಿ ಪ್ರಥಮ ಮತದಾನ ನಡೆಸಿದ ನಿಮ್ಮಿ

10:10 PM Mar 23, 2019 | Team Udayavani |

ಕಾಸರಗೋಡು: ಮತದಾರರಿಗೆ ಮತದಾನ ನಡೆಸುವ ವಿಧಾನ ಸುಗಮಗೊಳಿಸುವ, ವಿವಿಪಾಟ್‌ ಸೌಲಭ್ಯದ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ “ಡೆಮೋಹಟ್‌’ಆರಂಭಗೊಂಡಿದೆ.

Advertisement

ಆತಂಕ ನಿವಾರಣೆಗಾಗಿ 
ಡೆಮೋಹಟ್‌

ಮತದಾರರು ಅದರಲ್ಲೂ ಪ್ರಥಮ ಬಾರಿಗೆ ನೂತನ ಸೌಲಭ್ಯಗಳೊಂದಿಗಿನ ಮತದಾನ ನಡೆಸುವ    ವೇಳೆ ಉಂಟಾಗಬಲ್ಲ ಆತಂಕ ಪರಿಹರಿಸುವ ನಿಟ್ಟಿನಲ್ಲಿ ಈ ಸೌಲಭ್ಯಗಳ ಕುರಿತು ಸರಳವಾಗಿ ಎಲ್ಲ ಮಾಹಿತಿಗಳನ್ನೂ ನೀಡಿ, ಪ್ರಾತ್ಯಕ್ಷಿಕೆ ನಡೆಸಿ ಮತದಾನಕ್ಕೆ ಪೂರಕವಾದ ತರಬೇತಿ ನೀಡುವ ನಿಟ್ಟಿನಲ್ಲಿ ಈ ಡೆಮೋಹಟ್‌ ಸ್ಥಾಪಿಸಲಾಗಿದೆ. ಬ್ಯಾಲೆಟ್‌ ಯೂನಿಟ್‌, ಕಂಟ್ರೋಲ್‌ ಯೂನಿಟ್‌, ವಿವಿಪಾಟ್‌ ಇತ್ಯಾದಿಗಳ ಕುರಿತು ಸಮಗ್ರ ಮಾಹಿತಿ ಇಲ್ಲಿ ನೀಡಲಾಗುತ್ತಿದೆ.

ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ಸಮಕ್ಷದಲ್ಲಿ, ಈ ಸಲ ಪ್ರಥಮ ಬಾರಿಗೆ ಮತದಾನ ನಡೆಸುವ ಸಿದ್ಧತೆಯಲ್ಲಿರುವ ಚೆಮ್ನಾಡ್‌ ಕೋಳಿಯಡ್ಕ ನಿವಾಸಿ ನಿಮ್ಮಿ ಟಿ. ಅವರು ಡೆಮೋ ಹಟ್‌ ಉದ್ಘಾಟಿಸಿದರು ಜಿಲ್ಲಾಡಳಿತೆ ವತಿಯಿಂದ ಡೆಮೋಹಟ್‌ ಸ್ಥಾಪಿಸಲಾಗಿದ್ದು, ಜಿಲ್ಲಾ ಮಟ್ಟದ ಅ ಧಿಕಾರಿಗಳು, ಸಿಬ್ಬಂದಿ ಈ ವೇಳೆ ಜತೆಗಿದ್ದರು.

ಡೆಮೋ ಹಟ್‌
ಕಾಸರಗೋಡು ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಸ್ಥಾಪಿಸಿದ ಡೆಮೋಹಟ್‌ನಲ್ಲಿ ಪ್ರಥಮ ಬಾರಿಗೆ ಮತದಾನ ನಡೆಸಿದ ಗುಂಗಿನಲ್ಲಿದ್ದಾರೆ   ಚೆಮ್ನಾಡ್‌ ನಿವಾಸಿ  ನಿಮ್ಮಿ ಟಿ.ಮತದಾನ ಯಂತ್ರ ಕುರಿತು ತರಬೇತಿ ನೀಡುವ ಕೇಂದ್ರದಲ್ಲಿ ಮತದಾನ ನಡೆಸುವ ತರಬೇತಿ ಪಡೆದರೆ ಲೋಕಸಭೆ ಚುನಾವಣೆಯ ಮತದಾನಕ್ಕೆ ಸುಲಭವಾದೀತು ಎಂಬ ಭಾವನೆಯಿಂದ ಬಂದಾಕೆ ಇವರು.
 
ಅನಿರೀಕ್ಷಿತ
ಆದರೆ ಅನಿರೀಕ್ಷಿತವಾಗಿ ಈ ಕೇಂದ್ರದ ಉದ್ಘಾಟನೆ ತಾವೇ ನಡೆಸಬೇಕಾಗಿ ಬಂದಾಗ ಸಂತೋಷ ಮತ್ತು ಸಂಕೋಚ ಜೊತೆಗೇ ಕಾಡಿತ್ತು. ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ಒತ್ತಾಯದ ಮೇರೆಗೆ ತಾವು ಈ ಕರ್ತವ್ಯ ನಡೆಸಬೇಕಾಗಿ ಬಂದಿತ್ತು.

ತಾವಿಲ್ಲಿ ನಡೆಸಿದ ಮೋಕೊÌàಟಿಂಗ್‌ ಸಂತೋಷ ತಂದಿತ್ತಿದೆ ಎಂದವರು ಈ ವೇಳೆ ಅಭಿಪ್ರಾಯಪಟ್ಟರು. 

Advertisement

ಸರಳ ತರಬೇತಿ
ವಿವಿಪ್ಯಾಟ್‌ ಮೆಷಿನ್‌ ಕುರಿತು ಮಾಹಿತಿ ತಿಳಿಯಲು ಇಲ್ಲಿ ಅವಕಾಶ ಲಭಿಸಿದೆ. ಉಳಿದವರಿಗೂ ಸುಲಭ ರೀತಿ ಮತದಾನ ನಡೆಸಲು ಇಲ್ಲಿನ ಸರಳ ತರಬೇತಿ ಪೂರಕವಾಗಿದೆ ಎಂದವರು ನುಡಿದರು.

ಚೆಮ್ನಾಡ್‌ ಗ್ರಾಮ ಪಂಚಾಯತ್‌ನ ಕೋಳಿಯಡ್ಕ ನಿವಾಸಿ ದಾಮೋದರನ್‌-ಲೀಲಾ ದಂಪತಿ ಪುತ್ರಿ ನಿಮ್ಮಿ. ಬಿ.ಕಾಂ. ತೃತೀಯ ವರ್ಷ ಪರೀಕ್ಷೆ ಪೂರೈಸಿ, ಫಲಿತಾಂಶಕ್ಕಾಗಿ ಕಾಯುತ್ತಿರುವ ಈಕೆಗೆ ಈ ಬಾರಿ ಪ್ರಥಮ ಬಾರಿಗೆ ಮತದಾನ ನಡೆಸುವ ಅವಕಾಶವೂ ಲಭಿಸಿದೆ. 20 ವರ್ಷ ಪ್ರಾಯದ ಈಕೆಗೆ ಈ ಹಿಂದೆ ಮತದಾನಕ್ಕೆ ಗುರುತುಚೀಟಿ ಇಲ್ಲದೇ ಇದ್ದುದು ಕಾರಣವಾಗಿತ್ತು. ಈ ಬಾರಿ ಗುರುತುಚೀಟಿ ಲಭಿಸಿದ್ದು, ಮತದಾನಕ್ಕೆ ಹಾದಿ ಸುಗಮವಾಗಿದೆ ಎಂದವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next