Advertisement

ನಿಮಗೆ ಗೊತ್ತಿರಲಿ…ಎಲ್ಲರೂ “ಈ”ವಿಷಯದಲ್ಲಿ ತೃಪ್ತರಲ್ಲ..!

09:14 AM Jul 16, 2021 | Team Udayavani |
ಈ ಅರಿಷಡ್ವರ್ಗಗಳಲ್ಲಿ ಒಂದಾದ ಕಾಮದ ಬಗ್ಗೆಯೂ ಸುಮಾರು ಹದಿನೆಂಟು ಬಗೆಯ ಅಸಹಜ ಭಯ ಅಥವಾ ಫೋಬಿಯಾ ಇವೆ ಎಂದರೇ, ನೀವು ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಿ. ಆದರೇ, ಇದು ವಾಸ್ತವ. ಪ್ರೇಮದ ಉತ್ತುಂಗವೇ ಕಾಮ. ಮನುಷ್ಯನಿಗೆ ದೇಹದ ಬಯಕೆಯನ್ನು ಮೀರಿ ಬದುಕಲು ಕಷ್ಟಸಾಧ್ಯ. ಆದರೇ, ಈ ಲೈಂಗಿಕ ಕ್ರಿಯೆಗಳ ಬಗ್ಗೆಯೂ ಮನುಷ್ಯನಲ್ಲಿ ಅಸಹಜ ಭಯ ಇದೆ ಎನ್ನುವುದು ಸತ್ಯ. ಅದೇನೇ ಇರಲಿ, ಈ ಲೈಂಗಿಕ ಕ್ರಿಯೆಯ ಅಸಹಜ ಭಯದ ಸುಮಾರು ಹದಿನೆಂಟು ಬಗೆಗಳಿವೆ...
Now pay only for what you want!
This is Premium Content
Click to unlock
Pay with

ಸಾಮಾನ್ಯವಾಗಿ ಭಯ ಎನ್ನುವುದು ಸಹಜ. ಬದುಕಿನ ಭಯ, ಭವಿಷ್ಯದ ಭಯ, ಕಾಯಿಲೆಯ ಭಯ ಹೀಗೆ ಹತ್ತು ಹಲವು ಭಯ ಎಲ್ಲರಲ್ಲೂ ಇರುತ್ತದೆ. ಆದರೇ, ಕೆಲವರಲ್ಲಿ ಕೆಲವು ವಿಷಯದಲ್ಲಿ ಅಸಹಜ ಭಯ ಇರುತ್ತದೆ. ಅದಕ್ಕೆ ಮನಃಶಾಸ್ತ್ರದಲ್ಲಿ ಫೋಬಿಯಾ ಎಂದು ಹೇಳಲಾಗುತ್ತದೆ.
ಮನುಷ್ಯ ಅರಿಷಡ್ವರ್ಗದಿಂದ ಬದುಕುವವನು. ಮನುಷ್ಯನ ಮನಃಶಾಂತಿಯನ್ನು ಕದಡುವ, ಸ್ವಾಸ್ಥ್ಯಕ್ಕೆ ಪತಿಬಂಧಕರೂಪ ವಾಗಿರುವ ಭಾವನೆಗಳನ್ನು ಶತ್ರುಗಳು (ಅರಿ) ಎಂದು ಕರೆದು, ಅವುಗಳನ್ನು ಆರು ಗುಂಪಾಗಿ ವರ್ಗೀಕರಣ ಮಾಡಲಾಗಿದೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳು ಎಂದು ವಿಂಗಡಿಸಲಾಗಿದೆ. ಇವಗಳನ್ನು ಹೊರತಾಗಿ ಮನುಷ್ಯ ಬದುಕನ್ನು ಕಂಡುಕೊಳ್ಳಲಾರ.
ಈ ಅರಿಷಡ್ವರ್ಗವನ್ನು ಗೆದ್ದವನು ಯೋಗಿಯಾಗುತ್ತಾನೆ. ಇವು ಆರೂ ಅಂತಃಶತ್ರುಗಳೆಂದು ಕಲ್ಪನೆ ಇದೆ. ಆದರೇ, ಮನುಷ್ಯ ಇವುಗಳೊಂದಿಗೆಯೇ ಬದುಕುತ್ತಾನೆ. ಮನುಷ್ಯನಿಗೆ ಅರಿಷಡ್ವರ್ಗವನ್ನು ಹೊರತಾಗಿ ಇರವುದಕ್ಕೆ ಕಷ್ಟಸಾಧ್ಯ, ಆದರೇ, ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹಾಗೂ ನಿಗ್ರಹಿಸಿಕೊಳ್ಳುವುದು ಮುಖ್ಯವಾಗುತ್ತದೆ.

Advertisement

ಈ ಅರಿಷಡ್ವರ್ಗಗಳಲ್ಲಿ ಒಂದಾದ ಕಾಮದ ಬಗ್ಗೆಯೂ ಸುಮಾರು ಹದಿನೆಂಟು ಬಗೆಯ ಅಸಹಜ ಭಯ ಅಥವಾ ಫೋಬಿಯಾ ಇವೆ ಎಂದರೇ, ನೀವು ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಿ. ಆದರೇ, ಇದು ವಾಸ್ತವ. ಪ್ರೇಮದ ಉತ್ತುಂಗವೇ ಕಾಮ. ಮನುಷ್ಯನಿಗೆ ದೇಹದ ಬಯಕೆಯನ್ನು ಮೀರಿ ಬದುಕಲು ಕಷ್ಟಸಾಧ್ಯ. ಆದರೇ, ಈ ಲೈಂಗಿಕ ಕ್ರಿಯೆಗಳ ಬಗ್ಗೆಯೂ ಮನುಷ್ಯನಲ್ಲಿ ಅಸಹಜ ಭಯ ಇದೆ ಎನ್ನುವುದು ಸತ್ಯ.

ಈ ಕಾಮದ ಬಗ್ಗೆ ಭಯ ಇರುವವರಿಗೆ ಕಾಮ ಬೇಡ ಎಂದು ಅರ್ಥವಲ್ಲ. ಆದರೇ, ಆ ಬಗ್ಗೆ ಅವರಲ್ಲಿ ಏನೋ ಮುಜುಗರ, ಅಸಹನೀಯ ಭಯ ಇರುತ್ತದೆ. ಇನ್ನು, ಯಾರಲ್ಲಿ ಈ ಅಸಹಜ ಭಯ ಇರುತ್ತದೆಯೋ, ಅಂತವರಲ್ಲಿಯೇ ಹೆಚ್ಚು ಕಾಮಾಸಕ್ತಿ ಇರುತ್ತದೆ ಎಂದು ಕೂಡ ಹೇಳಲಾಗುತ್ತದೆ.

ಅದೇನೇ ಇರಲಿ, ಈ ಲೈಂಗಿಕ ಕ್ರಿಯೆಯ ಅಸಹಜ ಭಯದ ಸುಮಾರು ಹದಿನೆಂಟು ಬಗೆಗಳಿವೆ ಅವುಗಳಲ್ಲಿ ಪ್ರಮುಖವಾದ ಹತ್ತರಿಂದ ಹನ್ನೆರಡು ಬಗೆಗಳನ್ನು ಒಂದೊಂದಾಗಿ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸೋಣ…

ಇರೋಟೊಫೋಬಿಯಾ/ ಎರೋಟೋಫೋಬಿಯಾ
ಇದು ಲೈಂಗಿಕತೆಯ ಬಗ್ಗೆ ಯಾವ ವಿಚಾರ ಮಾತನಾಡಿರೂ ಅಸಹಜವಾಗಿ ಹುಟ್ಟಿಕೊಳ್ಳುವ ಭಯ ಎಂದರೇ ತಪ್ಪಿಲ್ಲ. ವಸ್ತುಕ್ರಿಯೆ ಅಥವಾ ಲೈಂಗಿಕ ಕ್ರಿಯೆ, ಅಥವಾ ತನ್ನ ಸಂಗಾತಿಯೊಂದಿಗೆ ಸೇರುವ ವಿಚಾರದಲ್ಲಿ ಆಗುವ ಭಯ ಇದು. ಕಾಮ ಬೇಡವೆಂದಲ್ಲ. ಆ ಕ್ರಿಯೆಗೆ ತೊಡಗಿಕೊಳ್ಳುವ ಭಯ ಎಂದು ಹೇಳುತ್ತಾರೆ.

Advertisement

ಜಿನೋಫೋಬಿಯಾ
ಲೈಂಗಿಕ ಸಂಭೋಗದ ದೈಹಿಕ ಅಥವಾ ಮಾನಸಿಕ ಭಯ ಇದು. ಈ ಭಯದಿಂದ ಬಳಲುತ್ತಿರುವ ಪುರುಷರು ಮತ್ತು ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೆದರುತ್ತಾರೆ. ತನ್ನ ಸಂಗಾತಿಯೊಂದಿಗೆ ಅನ್ಯೋನ್ಯತೆಯಿಂದಿರಲು ಬಯಸುತ್ತಾರೆ. ಎಂದಿಗೂ ಸಾಂಗತ್ಯ ಬಯಸುವ ಮನಸ್ಥಿತಿ ಇವರದ್ದಾಗಿದ್ದರೂ ಸಂಭೋಗಕ್ಕೆ ಭಯ ಪಡುತ್ತಾರೆ. ಇನ್ನು, ಚುಂಬನ ಮತ್ತು ಮುದ್ದಾಡುವಿಕೆಯನ್ನು ಹೊರತಾಗಿ ಲೈಂಗಿಕ ಸಂಪರ್ಕ ಸಾಧಿಸುವುದಕ್ಕೆ ತುಂಬಾ ಭಯ ಪಡುತ್ತಾರೆ.

ಜಿಮ್ನೋಫೋಬಿಯಾ
ಈ ಭೀತಿಯಿಂದ ಬಳಲುತ್ತಿರುವ ಜನರು ನಗ್ನತೆಗೆ ಹೆದರುತ್ತಾರೆ. ತನ್ನ ದೇಹದ ನಗ್ನತೆಯನ್ನು ಸಂಗಾತಿ ಒಪ್ಪಿಕೊಳ್ಳುತ್ತಾರೋ, ಅಥವಾ ಇಲ್ಲವೋ ಎನ್ನುವ ವಿಚಾರದಲ್ಲಿ ಇರುವ ಅಸಹಜ ಮನಸ್ಥಿತಿ ಇದು. ಸಂಭೋಗಕ್ಕೆ ಈ ರೀತಿಯ ಮನಸ್ಥಿತಿ ಇರುವವರಲ್ಲಿ ಭಯ ಇರುವುದಿಲ್ಲ. ಆದರೇ, ನಗ್ನವಾಗಿ ತನ್ನ ಸಂಗಾತಿ ಜೊತೆ ಸಮಯ ಕಳೆಯಲು ಆರಂಭದಲ್ಲಿ ಅಸಹ್ಯ ಭಾವನೆ ಇರುವ ಮನಸ್ಥಿತಿ ಎಂದು ಹೇಳಬಹುದು.

ಹ್ಯಾಫೆಫೋಬಿಯಾ
ಇದನ್ನು ಚಿರಪ್ಟೋ ಫೋಬಿಯಾ ಎಂದು ಕೂಡ ಕರೆಯುತ್ತಾರೆ. ಕೇವಲ ಲೈಂಗಿಕ ರೀತಿಯಲ್ಲಿ ಮಾತ್ರವಲ್ಲದೆ ಸ್ಪರ್ಶಿಸಲು ಕೂಡ ಭಯ ಇರುವ ಮನಸ್ಥಿತಿ ಇದು. ಈ ಭೀತಿಯಿಂದ ಬಳಲುತ್ತಿರುವವರು ಸಾರ್ವಜನಿಕವಾಗಿ, ಜನದಟ್ಟಣೆ ಇರುವ ಪ್ರದೇಶಗಳ ಬಗ್ಗೆಯೂ ತೀರಾ ಭಯ ಪಡುತ್ತಾರೆ. ಇನ್ನೊಬ್ಬರ ಮೈಗೆ ತನ್ನ ಮೈ ತಾಗುವುದು ಕೂಡ ಇಂತವರಿಗೆ ಭಯ ಅಂತನ್ನಿಸುತ್ತದೆ.

ಫಿಲೆಮಾಫೋಬಿಯಾ
ಈ ರೀತಿಯ ಮನಸ್ಥಿತಿಯವರ ಬಗ್ಗೆ ಕೇಳಿದರೇ ನಿಮಗೆ ನಗು ಬರದೇ ಇರಲಾರದು. ಚುಂಬನಕ್ಕೂ ಕೂಡ ಭಯ ಪಡುವ ಮನಸ್ಥಿತಿ ಇದು. ಜರ್ಮ್ಸ್ ಅಥವಾ ಸೂಕ್ಷ್ಮಜೀವಿಗಳು ಚುಂಬನದಿಂದಾಗಿ ತಮ್ಮ ದೇಹದೊಳಗೆ ಹೋಗುತ್ತವೆ ಎನ್ನುವ ಭಯ ಇಂತವರಲ್ಲಿ ಇರುತ್ತದೆ. ಚುಂಬನದಿಂದ ಉಂಟಾಗುವ ರೋಮಾಂಚನಕ್ಕೂ ಕೂಡ ಇವರು ಭಯಪಡುತ್ತಾರೆ. ಆದರೇ, ಲೈಂಗಿಕ ಕ್ರಿಯೆಯಲ್ಲಿಯೇ ಹೆಚ್ಚು ಸಮಯ ಕಳೆಯಲು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ.

ಪ್ಯಾರಾಫೋಬಿಯಾ
ದೇಹದ ಆಕಾರದ ಬಗ್ಗೆ ಇರುವ ಭಯ ಇದು. ಸಾಮಾನ್ಯವಾಗಿ ದೊಡ್ಡ ದೇಹದವರನ್ನು ಕಂಡರೇ, ಅವರಿಗೆ ಅಸಹಜ ಭಯ ಉಂಟಾಗುತ್ತದೆ. ದೇಹ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವ ಈ ಮನಸ್ಥಿತಿಯವರು, ಕಟ್ಟುಮಸ್ತು ದೇಹದವರ ಜೊತೆ ಕೂರುವುದಕ್ಕೂ ಭಯ ಪಡುತ್ತಾರೆ. ಲೈಂಗಿಕ ವಿಚಾರದಲ್ಲಿಯೂ ಹಾಗೇ, ತನ್ನ ಸಂಗಾತಿಯ ದೇಹ ಕಟ್ಟುಮಸ್ತಾಗಿರದೇ ಇರುವುದನ್ನು ಬಯಸುತ್ತಾರೆ.

ಇಥಿಫಲ್ಲೋಫೋಬಿಯಾ
ಮೆಡೋರ್ಥೋಫೋಬಿಯಾ ಅಥವಾ ಫಲ್ಲೊಫೋಬಿಯಾ ಎಂದು ಕೂಡ ಈ ಮನಸ್ಥಿತಿಯನ್ನು ಕರೆಯಲಾಗುತ್ತದೆ. ಶಿಶ್ನ ಅಥವಾ ಪುರುಷನ ಗುಪ್ತಾಂಗದ ಮೇಲೆ ಇರುವ ಭಯ ಇದು. ಸಾಮಾನ್ಯವಾಗಿ ಇಂತಹ ಭಯ ಇರುವವರೊಂದಿಗೆ ಸಾಂಸಾರಿಕ ಜೀವನವನ್ನು ನಡೆಸುವ ಪುರುಷರು ಲೈಂಗಿಕ ಅತೃಪ್ತರಾಗಿರುತ್ತಾರೆ.

ಮೆಡುಮಲಕುಫೋಬಿಯಾ
ಹೆಚ್ಚು ಸಮಯಗಳ ಕಾಲ ಲೈಂಗಿಕ ಸಂಪರ್ಕವನ್ನು ಬಯಸುವವರಲ್ಲಿ ಈ ಮನಸ್ಥಿತಿ ಇರುತ್ತದೆ. ಬೇಗ ಸುಸ್ತಾಗುತ್ತದೆ ಎಂಬ ಮನಸ್ಥಿತಿ ಇಂತವರಲ್ಲಿ ಹೆಚ್ಚಿರುತ್ತದೆ. ಇಂತಹ ಮನಸ್ಥಿತಿ ಇರುವವರು ಲೈಂಗಿಕ ಸಂಪರ್ಕದಲ್ಲಿ ತೊಡಗಿಕೊಳ್ಳುವಾಗ ಆತುರಕ್ಕೆ ಒಳಪಡುತ್ತಾರೆ. ಮತ್ತು ನಿರಾಶೆ ಹೊಂದುತ್ತಾರೆ. ಅನುಭವಿಸುವುದಕ್ಕಿಂತ ಆತಂಕದಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ.

ಆಗ್ರೋಫೋಬಿಯಾ
ಹಿಂದೆ ಇನ್ನೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದವರಲ್ಲಿ ಈ ಭಯ ಹೆಚ್ಚಾಗಿರುತ್ತದೆ. ಅಥವಾ ಲೈಂಗಿಕ ಕಿರುಕುಳ ಅನುಭವಿಸಿದವರಲ್ಲಿ ಈ ಭಯ ಇರುತ್ತದೆ ಎಂದು ಹೇಳಲಾಗುತ್ತದೆ.

ಯುರೊಟೊಫೋಬಿಯಾ
ಇದು ಯೋನಿಯ ಕುರಿತಾದ ಭಯ. ಈ ಫೋಬಿಯಾ ಇರುವ ಮಹಿಳೆಯರು ಯಾವುದೇ ರೀತಿಯ ಲೈಂಗಿಕ ಪ್ರಚೋದನೆಗೆ ಹೆದರುತ್ತಿದ್ದರೆ, ಪುರುಷರು ಯೋನಿಯೊಂದಿಗೆ ಲೈಂಗಿಕ ಕ್ರಿಯೆ ಮಾಡುವುದಕ್ಕೆ ಹಿಂಜರಿಯುತ್ತಾರೆ. ರಕ್ತಸ್ರಾವ ಆಗುವ ಭಯದಿಂದಲೂ ವೆಜಿನಾ ಸೆಕ್ಸ್ ಅಥವಾ ಯೋನಿ ಲೈಂಗಿಕ ಸಂಪರ್ಕಕ್ಕೆ ಹಿಂದಡಿ ಇಡುತ್ತಾರೆ.

ಮೆನೊಫೋಬಿಯಾ
ಹೆಸರೇ ಸೂಚಿಸುವಂತೆ, ಇದು ಮುಟ್ಟು ಅಥವಾ ಋತುಸ್ರಾವದ ಭಯ. ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯಿಂದ ಋತುಸ್ರಾವಕ್ಕೆ ಏನಾದರೂ ಸಮಸ್ಯೆ ಎದುರಾಗಬಹುದೇನೋ ಎಂಬ ಭಯದಿಂದಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದಕ್ಕೆ ಭಯ ಪಡುತ್ತಾರೆ.

ಟೊಕೊಫೋಬಿಯಾ

ಗರ್ಭ ಧರಿಸುವ ಭಯದಿಂದಲೇ ಈ ಮನಸ್ಥಿತಿಯವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಸದಾ ಲೈಂಗಿಕ ಸಂಪರ್ಕದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಈ ಮನಸ್ಥಿತಿಯವರಲ್ಲಿ ಮಗು ಆಗುತ್ತದೆ. ಆಮೇಲೆ ತುಂಬಾ ದಿನಗಳವರೆಗೆ ಲೈಂಗಿಕ ಸಂಪರ್ಕ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದರೊಂದಿಗೆ ಮಗುವಿನ ಆರೈಕೆಯ ಬಗ್ಗೆಯೂ ಒಂದು ರೀತಿಯ ಸಣ್ಣ ಭಯದ ಮನಸ್ಥಿತಿ ಇರುತ್ತದೆ.

ಒಟ್ಟಿನಲ್ಲಿ, ಲೈಂಗಿಕ ಕ್ರಿಯೆಯನ್ನು ಎಲ್ಲರೂ ಬಯಸುತ್ತಾರೆ ಆದರೂ, ಎಲ್ಲರೂ ಲೈಂಗಿಕ ಕ್ರಿಯೆಯನ್ನು ಆನಂದಿಸುವುದಿಲ್ಲ ಎನ್ನುವುದಕ್ಕೆ ಈ ಮೇಲಿ ಅಸಹಜ ಭಯ ಅಥವಾ ಫೋಬಿಯಾಗಳೇ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.