Advertisement

ಮೊಬೈಲ್‌ ಕೊಳ್ಳುವ ಮುನ್ನ ನಿಮಗಿದು ತಿಳಿದಿರಲಿ…

06:00 AM Dec 03, 2018 | |

ಹೆಚ್ಚಿನವರು, ಜಾಹೀರಾತುಗಳನ್ನು ನೋಡಿಯೇ, ಮೊಬೈಲ್‌ ಖರೀದಿಸುತ್ತಾರೆ. ಆದರೆ, ಒಂದು ಮೊಬೈಲ್‌ ಅತಿ ಮುಖ್ಯವಾಗಿ ಯಾವ್ಯಾವ ಗುಣವಿಶೇಷಗಳನ್ನು, ಸಾಮರ್ಥಯವನ್ನು ಹೊಂದಿರಬೇಕು ಎಂದು ಬಹುಪಾಲ್‌ ಮಂದಿಗೆ ತಿಳಿದಿರುವುದಿಲ್ಲ. ಮೊಬೈಲ್‌ ಕೊಳ್ಳುವಾಗ ತಿಳಿದಿರಲೇಬೇಕಾದ ಸಂಗತಿಗಳ ಕುರಿತು ಇಲ್ಲಿ ವಿವರವಾಗಿ ಹೇಳಲಾಗಿದೆ. 

Advertisement

ಜನ ಸಾಮಾನ್ಯರಾದ ನಮಗೆ ಸ್ಮಾರ್ಟ್‌ ಫೋನ್‌ ಕೊಳ್ಳುವಾಗ ಯಾವ ರೀತಿಯ ಫೋನ್‌ ಕೊಳ್ಳಬೇಕು ಎಂಬುದರ  ಬಗ್ಗೆ ಖಚಿತತೆ ಇರುವುದಿಲ್ಲ. ನಾವು ಬಳಸುವ ಸೋಪ್‌ ಯಾವುದಿರಬೇಕು, ಜೀನ್ಸ್‌ ಯಾವುದು ಕೊಂಡರೆ ಸರಿಯಾಗಿ ಫಿಟ್‌ ಆಗುತ್ತದೆ, ಅಂಗಡಿಯಿಂದ ತರುವ ಅಕ್ಕಿ ಇಂಥದ್ದೇ ಆಗಿದ್ದರೆ ಚೆನ್ನಾಗಿರುತ್ತದೆ, ಗಂಜಿ ಬರುವುದಿಲ್ಲ, ಅನ್ನ ಮಾಡಿದರೆ ಹೆಚ್ಚುತ್ತದೆ ಎಂಬುದರ ಬಗ್ಗೆಯಲ್ಲ ಗೊತ್ತಿರುತ್ತದೆ. ಆದರೆ ತಮ್ಮದಲ್ಲದ ಕ್ಷೇತ್ರವಾದ ಮೊಬೈಲ್‌ ಕೊಳ್ಳುವಾಗ ನಿಖರತೆ ಇರುವುದಿಲ್ಲ. ಈ ಕಾರಣದಿಂದಲೇ ಮೊಬೈಲ್‌ ಖರೀದಿಸುವಾಗ ಹೆಚ್ಚಿನವರು ಗೊಂದಲಕ್ಕೊಳಗಾಗಿ ಯಾವುದರ ಜಾಹೀರಾತನ್ನು ಹೆಚ್ಚು ನೋಡುತ್ತಾರೋ ಅದನ್ನು ಕೊಳ್ಳುವ ಸಾಧ್ಯತೆಗಳೇ ಜಾಸ್ತಿ. ಹಾಗೆ ಕೊಳ್ಳುವಾಗ, ಅದರಲ್ಲಿ ಯಾವ ಪ್ರೊಸೆಸರ್‌ ಬಳಸಿರುತ್ತಾರೆ? ಎಷ್ಟು ಜಿಬಿ ಇಂಟರ್‌ನಲ್‌ ಮೆಮೊರಿ ಇದೆ? ಎಷ್ಟು ಜಿಬಿ ರ್ಯಾಮ್‌ ಇದೆ? ಬ್ಯಾಟರಿ ಜಾಸ್ತಿ ಇದೆಯೇ? ಕ್ಯಾಮರಾ ಚೆನ್ನಾಗಿದೆಯೇ? ಎಂಬುದು ಬಹುಪಾಲು ಮಂದಿಗೆ ತಿಳಿದಿರುವುದಿಲ್ಲ. ಮೊಬೈಲ್‌ ಅಂಗಡಿಯಾತ ಶಿಫಾರಸು ಮಾಡಿದ ಒಂದನ್ನು ಕೊಳ್ಳುವವರೇ ಹೆಚ್ಚು. 

ಮೊಬೈಲ್‌ ಕೊಳ್ಳುವಾಗ ನೀವು ಈ ಸಂಗತಿಗಳ ಬಗ್ಗೆ ಗಮನ ಹರಿಸಿ:
ಆಂತರಿಕ ಸಂಗ್ರಹ (ಇನ್‌ಬಿಲ್ಟ್ ಮೆಮೊರಿ):
ಮೊದಲಿಗೆ ನೀವು ಕರೆ ಮಾತ್ರವಲ್ಲದೇ, ವಾಟ್ಸಪ್‌, ಫೇಸ್‌ಬುಕ್‌, ಇಂಟರ್‌ನೆಟ್‌ ಬಳಕೆ, ಫೋಟೋಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಳ್ಳುವವರಾದರೆ ಮೊದಲಿಗೆ ಆ ಮೊಬೈಲ್‌ 32 ಜಿಬಿ ಆಂತರಿಕ ಸಂಗ್ರಹ ಹೊಂದಿರಲೇ ಬೇಕು. ಅದರ ರ್ಯಾಮ್‌ ಕನಿಷ್ಟ 3 ಜಿಬಿ ಆಗಿರಬೇಕು. ನೀವು ದಿನಾ ಜಾಹಿರಾತಿನಲ್ಲಿ, ಅಂಗಡಿಗಳ ಮುಂದೆ ದೊಡ್ಡ ಹೋರ್ಡಿಂಗ್‌ ಹಾಕಿಕೊಂಡಿರುವ ಕೆಲವು ಕಂಪೆನಿಗಳು 2 ಜಿಬಿ ರ್ಯಾಮ್‌ ಮತ್ತು 16 ಜಿಬಿ ಆಂತರಿಕ ಸಂಗ್ರಹ ಇರುವ ಫೋನ್‌ಗಳನ್ನು 11-12 ಸಾವಿರಕ್ಕೆ ಮಾರುತ್ತವೆ. ಅಷ್ಟು ಹಣ ಕೊಟ್ಟು ಪರಿಚಯದವರು ಅದನ್ನು ಕೊಂಡಿದ್ದು ನೋಡಿದಾಗ ನನಗೆ ಹೊಟ್ಟೆ ಉರಿದುಹೋಗುತ್ತದೆ. ಏಕೆ ಗೊತ್ತೆ? 2 ಜಿಬಿ ರ್ಯಾಮ್‌, 16 ಜಿಬಿ ಮೆಮೊರಿ ಇರುವ ಫೋನ್‌ಗಳು 7 ಸಾವಿರದೊಳಗೇ ಸಿಗುತ್ತವೆ. ಮತ್ತು 11-12 ಸಾವಿರ ಬೆಲೆ ಪೀಕಿಸುವ ಕಂಪೆನಿಗಳಿಗಿಂತ ಉತ್ತಮ ದರ್ಜೆಯ ಪ್ರೊಸೆಸರ್‌, ತಕ್ಕ ಮಟ್ಟಿಗೆ ಕ್ಯಾಮರಾ ಹಾಗೂ ಲೇಟೆಸ್ಟ್‌ ಟೆಕ್ನಾಲಜಿ ಹೊಂದಿರುತ್ತವೆ. 

ಅದಿರಲಿ, 2 ಜಿಬಿ ರ್ಯಾಮ್‌ 16 ಜಿಬಿ ಮೆಮೊರಿ ಇರುವ ಫೋನ್‌ಗಳು ವಾಟ್ಸಪ್‌ ಬಿಟ್ಟು ನನಗೆ ಇನ್ನೇನೂ ಬೇಡ ಎನ್ನುವವರಿಗೆ ಸಾಕಾಗಬಹುದಷ್ಟೇ. 16 ಜಿಬಿಯಲ್ಲಿ ಸುಮಾರು 8 ಜಿಬಿ ಆ್ಯಪ್‌ಗ್ಳಿಗೇ ಹೋಗಿರುತ್ತದೆ. ಇನ್ನುಳಿದ 8 ಜಿಬಿ ಏನೇನಕ್ಕೂ ಸಾಲುವುದಿಲ್ಲ. ನಾಲ್ಕೈದೇ ತಿಂಗಳಲ್ಲಿ ಫೋನ್‌ ಹ್ಯಾಂಗ್‌ ಆಗಲು ಶುರುವಾಗುತ್ತದೆ.  ಹೊಸದಾಗಿ ಫೋಟೋ ತೆಗೆಯಲು ಹೋದರೆ ಮೆಮೊರಿ ಫ‌ುಲ್‌, ಹಳೆಯದನ್ನು ಡಿಲಿಟ್‌ ಮಾಡಿ ಎಂಬ ಸೂಚನೆ ತೋರಿಸಲಾರಂಭಿಸುತ್ತದೆ. ಆದ್ದರಿಂದ ಕನಿಷ್ಟ 32 ಜಿಬಿ ಆಂತರಿಕ ಸಂಗ್ರಹ ಮತ್ತು 3 ಜಿಬಿ ರ್ಯಾಮ್‌ ಇರುವ ಫೋನ್‌ ಗೇ ಆದ್ಯತೆ ನೀಡಿ. ಅದಕ್ಕಿಂತ ಮುಂದೆ 64 ಜಿಬಿ ಮೆಮೊರಿ ಉಳ್ಳದ್ದು ಕೊಂಡರೆ ಇನ್ನೂ ಒಳ್ಳೆಯದೇ.

ಪ್ರೊಸೆಸರ್‌: ಒಂದು ಮೊಬೈಲ್‌ನ ಮೆದುಳು, ಹೃದಯ-ಪ್ರೊಸೆಸರ್‌. ನೀವು ಕೊಡುವ ಹಣಕ್ಕೆ ತಕ್ಕುದಾದ ಪ್ರೊಸೆಸರ್‌ ಆ ಮೊಬೈಲ್‌ನಲ್ಲಿ ಇರಬೇಕು. 10-11 ಸಾವಿರದೊಳಗೆ ಇರುವ ಮೊಬೈಲ್‌ಗೆ ಸ್ನಾಪ್‌ಡ್ರಾಗನ್‌ 400 ಸಿರೀಸ್‌ನ ಪ್ರೊಸೆಸರ್‌ ಇರುತ್ತದೆ. ಇದು ಕಡಿಮೆ ಶಕ್ತಿಯ ಪ್ರೊಸೆಸರ್‌.(ಸ್ನಾಪ್‌ಡ್ರಾಗನ್‌ 430, 450 ಇತ್ಯಾದಿ) 12 ಸಾವಿರದಿಂದ 18 ಸಾವಿರ ರೂ.ಗಳವರೆಗಿನ ಮೊಬೈಲ್‌ಗ‌ಳಿಗೆ ಸ್ನಾಪ್‌ಡ್ರಾಗನ್‌ 600 ಸೀರೀಸ್‌ ಇರುತ್ತದೆ. ಇದು ಮಧ್ಯಮ ಶಕ್ತಿಯ ಪ್ರೊಸೆಸರ್‌ಸ್ನಾಪ್‌ಡ್ರಾಗನ್‌ 625, 630, 632, 650,) 15 ಸಾವಿರದಿಂದ 25 ಸಾವಿರದವರೆಗಿನ ಮೊಬೈಲ್‌ಗ‌ಳಿಗೆ ಸ್ನಾಪ್‌ಡ್ರಾಗನ್‌ 700 ಸೀರೀಸ್‌ ಇರುತ್ತದೆ. (ಎಸ್‌.ಡಿ. 710). 25 ಸಾವಿರ ರೂ.ಗಳಿಗೆ ಮೇಲ್ಪಟ್ಟ ಮೊಬೈಲ್‌ಗ‌ಳಿಗೆ ಸ್ನಾಪ್‌ಡ್ರಾಗನ್‌ 800 ಸೀರೀಸ್‌, (840, 845 ಇತ್ಯಾದಿ) ಇರಬೇಕು. ಇದು ಅತ್ಯಂತ ಶಕ್ತಿಶಾಲಿ ಪ್ರೊಸೆಸರ್‌.

Advertisement

ಕಡಿಮೆ ಶಕ್ತಿಯ ಸ್ನಾಪ್‌ಡ್ರಾಗನ್‌ 450 ಪ್ರೊಸೆಸರ್‌ ಅನ್ನು 10 ಸಾವಿರದೊಳಗಿನ ಮಾರುಕಟ್ಟೆ ದರ ಹೊಂದಿರುವ ಮೊಬೈಲ್‌ಗ‌ಳಿಗೆ ಬಳಸಲಾಗುತ್ತದೆ. ಆ ದರಕ್ಕೆ ಅದು ಸರಿಯಾದದ್ದೇ. ಆದರೆ ಮೊನ್ನೆ ಒಂದು ಕಂಪೆನಿ ಬಿಡುಗಡೆ ಮಾಡಿದ 17 ಸಾವಿರ  ರೂ. ಮೌಲ್ಯದ ಮೊಬೈಲ್‌ಗೆ ಸ್ನಾಪ್‌ಡ್ರಾಗನ್‌ 450 ಪ್ರೊಸೆಸರ್‌ ಹಾಕಿದೆ. ಪಾಪ! ಈ ತಾಂತ್ರಿಕ ವಿಷಯಗಳೆಲ್ಲ ಗ್ರಾಹಕರಿಗೇನು ಗೊತ್ತಾಗುತ್ತದೆ? ಅದರ ಬಣ್ಣ ಬಣ್ಣದ ಜಾಹೀರಾತು ಅವರು ಹೆಚ್ಚು ಯೋಚಿಸದೆ ಮೊಬೈಲ್‌ ಕೊಳ್ಳುತ್ತಾರೆ!

ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌, ಅತ್ಯಂತ ಜನಪ್ರಿಯ ಪ್ರೊಸೆಸರ್‌. ಇನ್ನು ಸ್ಯಾಮ್‌ಸಂಗ್‌ ಕಂಪನಿ, ತನ್ನದೇ ಆದ ಎಕ್ಸಿನಾಸ್‌ ಪ್ರೊಸೆಸರ್‌ ಬಳಸುತ್ತದೆ. ಹುವಾವೇ, ಆನರ್‌ ಕಂಪೆನಿ ತನ್ನದೇ ನಿರ್ಮಾಣದ ಕಿರಿನ್‌ ಪ್ರೊಸೆಸರ್‌ ಬಳಸುತ್ತದೆ. ಸ್ನಾಪ್‌ಡ್ರಾಗನ್‌ ಬೆಲೆ ತುಸು ಹೆಚ್ಚಾದ ಕಾರಣ, ಕೆಲವು ಕಂಪೆನಿಗಳು ಆರಂಭಿಕ ದರ್ಜೆಯ ಹಾಗೂ ಮಧ್ಯಮ ದರ್ಜೆಯ ಮೊಬೈಲ್‌ಗ‌ಳಿಗೆ ಹೀಲಿಯೋ ಎಂಬ ಇನ್ನೊಂದು  ಪ್ರೊಸೆಸರ್‌ ಬಳಸುತ್ತವೆ. 

ಬ್ಯಾಟರಿ: ಇಂದು ಸ್ಮಾರ್ಟ್‌ ಫೋನ್‌ ಗಳಲ್ಲಿ ಬ್ಯಾಟರಿಗೆ ಗಮನ ನೀಡಲೇಬೇಕು. ಬೆಳಗ್ಗೆ ಚಾರ್ಜ್‌ ಮಾಡಿದರೆ ಕನಿಷ್ಠ ಒಂದು ದಿನ ಪೂರ್ತಿ ಬ್ಯಾಟರಿ ನಿಲ್ಲಬೇಕು. ಹಾಗಾಗಿ 3500 ಎಂಎಎಚ್‌ (ಮಿಲಿ ಆ್ಯಂಪ್‌ ಅವರ್‌)   ಗಿಂತ ಹೆಚ್ಚು ಇರುವಂತೆ ನೋಡಿಕೊಳ್ಳಿ. ಕೆಲವು ಬ್ರಾಂಡ್‌ಗಳಲ್ಲಿ 3000 ಎಂಎಎಚ್‌ ಇದ್ದರೂ ಒಂದು ದಿನ ಬ್ಯಾಟರಿ ಬರುತ್ತದೆ. ನೀವು ಕೊಳ್ಳುವ ಮೊಬೈಲನ್ನು ಅಮೆಜಾನ್‌ ಅಥವಾ ಫ್ಲಿಪ್‌ಕಾರ್ಟ್‌ ನಲ್ಲಿ ನೋಡಿ, ಅಲ್ಲಿ ಬಳಕೆದಾರರು ಬ್ಯಾಟರಿ ಬಗ್ಗೆ ಹಾಕಿರುವ ಅಭಿಪ್ರಾಯಗಳನ್ನು ಓದಿ.

ಕ್ಯಾಮರಾ
ಈಗೆಲ್ಲ ಡುಯಲ್‌ ಲೆನ್ಸ್‌ ಕ್ಯಾಮರಾಗಳ ಜಮಾನ. ಹಿಂಬದಿ ಕನಿಷ್ಟ 13+2 ಮೆಗಾಪಿಕ್ಸಲ್‌ , ಸೆಲ್ಪಿà ಕನಿಷ್ಠ 13 ಮೆ.ಪಿ. ಕ್ಯಾಮರಾ ಇರಲಿ. ಸರ್ವೀಸ್‌ ಸೆಂಟರ್‌: ನೀವು ಕೊಳ್ಳುವ ಮೊಬೈಲ್‌ ಬ್ರಾಂಡ್‌ ನಿಮ್ಮೂರಿನಿಂದ 50-60 ಕಿ.ಮೀ. ಅಂತರದಲ್ಲಿದೆಯೇ ಚೆಕ್‌ ಮಾಡಿಕೊಳ್ಳಿ. ತುಂಬಾ ದೂರ ಹೋಗಬೇಕಾದರೆ ನೀವು ರಿಪೇರಿಗಾಗಿ ಬಸ್‌ ಖರ್ಚು ಹಾಕಿಕೊಂಡು ಅಷ್ಟು ದೂರ ಎರಡು ಮೂರು ಬಾರಿ ಅಲೆಯಬೇಕಾಗುತ್ತದೆ. ಆದ್ದರಿಂದ ನಿಮ್ಮೂರಿನಲ್ಲಿ ಅಥವಾ ಸಮೀಪದಲ್ಲಿ  ಆ ಬ್ರಾಂಡ್‌ನ‌ ಅಧಿಕೃತ ಸರ್ವೀಸ್‌ ಸೆಂಟರ್‌ ಇದೆಯೇ ಎಂದು ಅವರ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಿಕೊಳ್ಳಿ.

ನೀವು ಕೊಳ್ಳಬಯಸುವ ಮೊಬೈಲ್‌ ಬಗ್ಗೆ ಅಮೆಜಾನ್‌ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ನೋಡಿ. ಅದರಲ್ಲಿ ಗ್ರಾಹಕರು ಆ ಮೊಬೈಲ್‌ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಓದಿ.  5 ಸ್ಟಾರ್‌ ಗೆ ಕನಿಷ್ಟ 4 ಸ್ಟಾರ್‌ ರೇಟಿಂಗ್‌ ಇರಬೇಕು. ಅದರ ಮೇಲಿದ್ದರೆ ಮಾತ್ರ ಆ ಮೊಬೈಲ್‌ ಕೊಳ್ಳಿ. ಅದರಲ್ಲಿ ಕ್ಯಾಮರಾ, ಬ್ಯಾಟರಿ, ಸ್ಪೀಡ್‌ ಎಲ್ಲವನ್ನೂ ಬಳಕೆದಾರರು ಬರೆದಿರುತ್ತಾರೆ. ತುಂಬಾ ಒಳ್ಳೆಯ ಮೊಬೈಲ್‌ಗ‌ೂ ಟೀಕೆಗಳು ಬಂದಿರುತ್ತವೆ. ಆದರೆ ಹೊಗಳಿಕೆ ಜಾಸ್ತಿ, ಟೀಕೆ ಕಡಿಮೆ ಇರುವ ಮೊಬೈಲ್‌ ಆರಿಸಿಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next