Advertisement

ಅಪರಾಧ ಎಸಗಿದರೆ ತಕ್ಕ ಶಾಸ್ತಿ

11:35 AM Jan 01, 2022 | Team Udayavani |

ಆಳಂದ: ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿ ಹೊರ ಬಂದಿದ್ದೀರಿ. ಇನ್ನಾದರೂ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಜೀವನ ನಡೆಸಿ. ಮತ್ತೆ ಅಪರಾಧ ಕೃತ್ಯಕ್ಕೆ ಕೈ ಹಾಕಿದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಂದು ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ನಡೆಸಲಾದ ರೌಡಿ ಶೀಟರ್‌ಗಳ ಪರೇಡ್‌ನ‌ಲ್ಲಿ ಮಾತನಾಡಿ, ಅಪರಾಧ ಮಾಡಿ ಜೈಲು ಸೇರುವುದರಿಂದ ಸಮಾಜದಲ್ಲಿ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಒಳ್ಳೆಯ ಕಾರ್ಯಕ್ಕೆ ಮುಂದಾಗಿ ಎಂದು ಸಲಹೆ ನೀಡಿದರು.

ಸಿಪಿಐ ಮಂಜುನಾಥ, ಪಿಎಸ್‌ ಐಗಳಾದ ಮಹಾಂತೇಶ ಪಾಟೀಲ, ನಿಂಬರಗಾ ಪಿಎಸ್‌ಐ ಸುವರ್ಣಾ ಮಲ್ಲಶಟ್ಟಿ, ಮಲ್ಲಣ್ಣ ಯಲಗೋಂಡ ಸಿಬ್ಬಂದಿಗಳಾದ ರವಿ ವರ್ಮಾ, ಗಣಪತಿ ಘಂಟೆ, ಹಣಮಂತ, ಸಿದ್ಧರಾಮ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next