Advertisement

ನೀವು ಇಬ್ಬರಿಗೆ ಮಾತ್ರ ಜನ್ಮ ನೀಡಿದ್ದೀರಿ.. 20 ಮಂದಿಗೆ ಯಾಕಿಲ್ಲ..? : ತಿರಥ್ ಸಿಂಗ್ ರಾವತ್

11:29 AM Mar 22, 2021 | Team Udayavani |

ರಾಮ್ ನಗರ, ಉತ್ತರಾಕಂಡ್ : ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನಿಡುವುದರ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.

Advertisement

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆಹಾರಕ್ಕಾಗಿ ಹೆಣಗಾಡುತ್ತಿರುವ  ಬಡ ಕುಟುಂಬಗಳು ಆಹಾರ ಧಾನ್ಯಗಳನ್ನು ವಿತರಿಸುವ ಕೇಂದ್ರ ಸರ್ಕಾರದ ಯೋಜನೆಯಿಂದ ಹೆಚ್ಚಿನ ಪಡಿತರವನ್ನು ಬಯಸಿದರೆ, 20 ಮಕ್ಕಳನ್ನು ಹೊಂದಿರಬೇಕು ಎಂದು ರಾವತ್ ಹೇಳಿದ್ದಾರೆ.

ಓದಿ :  ‘ಕಣ್ಣು ಹೊಡೆಯಾಕ ಹಾಡು’ 2 ಕೋಟಿ ವೀಕ್ಷಣೆ: ಶ್ರೇಯಾ ಘೋಷಾಲ್‌ ಫುಲ್ ಖುಷ್‌

ಪ್ರತಿ ಮನೆಗೆ ಐದು ಕೆಜಿ ಪಡಿತರವನ್ನು ನೀಡಲಾಗುತ್ತಿದೆ. ಒಂದು ಮನೆಯಲ್ಲಿ ಹತ್ತು ಮಂದಿ ಇದ್ದರೆ 50 ಕೆಜಿ ಪಡಿತರವನ್ನು ನೀಡಲಾಗುತ್ತದೆ, 20 ಮಂದಿ ಇದ್ದರೆ ಒಂದು ಕ್ವಿಂಟಲ್ ಪಡಿತರವನ್ನು ನೀಡಲಾಗುತ್ತದೆ. ಕೆಲವರು ಅಸೂಯೆ ಪಟ್ಟರು. ಇಬ್ಬರು ಮಂದಿ ಇರುವವರು 10 ಕೆಜಿ ಪಡಿತರವನ್ನು ಪಡೆಯುತ್ತಾರೆ, 20 ಮಂದಿ ಕ್ವಿಂಟಲ್ ಪಡಿತರವನ್ನು ಪಡೆಯುತ್ತಾರೆ ಯಾಕೆ..? ನೀವು ಸಮಯ ಇದ್ದಾಗ ಕೇವಲ ಇಬ್ಬರಿಗೆ ಮಾತ್ರ ಜನ್ಮ ನೀಡಿದ್ದೀರಿ ಯಾಕೆ 20 ಮಂದಿಗೆ ಜನ್ಮ ನೀಡಲಿಲ್ಲ ಎಂದು ಮುಖ್ಯಮಂತ್ರಿ ರಾವತ್ ಕೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಬಡವರು ಕೋವಿಡ್ ಸಂದರ್ಭದಲ್ಲಿ ತುತ್ತಿಗಾಗಿ ಕಷ್ಟ ಪಟ್ಟ ಹೃದಯ ವಿದ್ರಾವಕ ದೃಶ್ಯಗಳನ್ನು ನಾವು ನೋಡಿದ್ದೇವೆ. ಕೆಲಸ ಕಾರ್ಯಗಳಿಲ್ಲದ ಸಂದರ್ಭ, ಅವರಿಗೆ ಊಟಕ್ಕೂ ಕಷ್ಟವಾಯಿತು. ಕಡಿಮೆ ಮಕ್ಕಳಿರುವ ಕುಟುಂಬ ಕಡಿಮೆ ಪಡಿತರವನ್ನು ಪಡಯುತ್ತದೆ ಎಂಬ ಮಾತನ್ನು ಅವರು ತಳ್ಳಿ ಹಾಕಿದ್ದರು. ಈಗ ಪಡಿತರ ಹೆಚ್ಚು ಪಡೆಯಬೇಕಾದರೇ, ಹೆಚ್ಚು ಮಕ್ಕಳನ್ನು ಹೊಂದಿರಬೇಕು ಎಂದು ಹೇಳಿರುವ ಮಾತನ್ನು ಎಎನ್ಐ ವರದಿ ಮಾಡಿದೆ.

Advertisement

ಆದಾಗ್ಯೂ, ಜನ ಸಂಖ್ಯೆ ಹೆಚ್ಚಳ ಅಥವಾ ಅಂತಹ ಕ್ರಮವು ವ್ಯವಸ್ತೆಯ ಮೇಲೆ ಬೀರಿದ ಪರಿಣಾಮದ ಬಗ್ಗೆ ಮುಖ್ಯಮಂತ್ರಿ ಯಾವ ಪ್ರಸ್ತಾಪವನ್ನು ಮಾಡಲಿಲ್ಲ.

ಇನ್ನು, ಕೆಲವು ದಿನಗಳ ಹಿಂದೆ ಮಹಿಳೆಯರ ಹರಿದ ಜೀನ್ಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿ ತಿರಥ್ ಸಿಂಗ್ ಯಾದವ್, ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದಲ್ಲಿ ನೋವುಂಟಾಗಿದ್ದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು, ಆದರೇ, ಮಹಿಳೆಯರ ಜೀನ್ಸ್ ಧರಿಸುವುದಕ್ಕೆ ಯಾವುದೇ ವಿರೋಧವಿಲ್ಲ. ಹರಿದ ಜೀನ್ಸ್ ಧರಿಸುವುದು ಸರಿಯಲ್ಲ ಎಂದು ಹೇಳಿದ್ದರು.

ನಿನ್ನೆ (ಆದಿತ್ಯವಾರ, ಮಾ.21) ಮತ್ತೊಂದು ಮೂರ್ಖತನದ ಹೇಳಿಕೆಯೊಂದನ್ನು ನೀಡಿ ಮತ್ತೆ ಟೀಕೆಗೆ ಒಳಗಾದರು. 200 ವರ್ಷಗಳ ಕಾಲ ನಮ್ಮನ್ನು ಅಮೆರಿಕದವರು ಆಳ್ವಿಕೆ ಮಾಡಿದ್ದರು ಎಂದು ನಗೆಪಾಟಲಿಗೀಡಾಗಿದ್ದರು.

ಓದಿ : ಜಮ್ಮು-ಕಾಶ್ಮೀರ: ಎನ್ ಕೌಂಟರ್ ಗೆ ಲಷ್ಕರ್ ಎ ತೊಯ್ಬಾದ ಇಬ್ಬರು ಉಗ್ರರ ಸಾವು

Advertisement

Udayavani is now on Telegram. Click here to join our channel and stay updated with the latest news.

Next