ಪಣಜಿ : ನೆರೆಯ ರಾಜ್ಯಗಳಿಂದ ಗೋವಾಕ್ಕೆ ಆಗಮಿಸಲು ಡಬಲ್ ಡೋಸ್ ಪಡೆದಿರುವ ಪ್ರವಾಸಿಗರು ಕೂಡ ಯಾವುದೇ ನೆಗೆಟಿವ್ ಪ್ರಮಾಣ ಪತ್ರವಿಲ್ಲದೆಯೇ ನೇರವಾಗಿ ಗೋವಾಕ್ಕೆ ಆಗಮಿಸಬಹುದಾಗಿದೆ. ಬಾಂಬೆ ಹೈಕೋರ್ಟ್ ನಿರ್ಣಯದಿಂದ ಗೋವಾ ಪ್ರವೇಶಕ್ಕೆ ಅವಕಾಶ ಲಭಿಸಿದೆ. ಆದರೆ ಗೋವಾದಲ್ಲಿ ಪ್ರವಾಸಿಗರಿಗೆ ಕ್ಯಾಸಿನೊ, ವಾಟರ್ ಬೋಟ್, ವಿವಿಧ ಪ್ರವಾಸಿ ಕ್ಷೇತ್ರಗಳು ಯಾವಾಗ ತೆರೆಯಲಿದೆಯೇ ಎನ್ನುವುದು ಪ್ರವಾಸಿಗರ ಪ್ರಶ್ನೆಯಾಗಿದೆ.
ಇದನ್ನೂ ಓದಿ : ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನ: ಬ್ಯಾಡ್ಮಿಂಟನ್ ಫೈನಲ್ ಗೆದ್ದ ಪ್ರಮೋದ್
ಟ್ರಾವೆಲ್ ಆ್ಯಂಡ್ ಟೂರಿಸಮ್ ಅಸೋಸಿಯೇಶನ್ ಆಫ್ ಗೋವಾ ಅಧ್ಯಕ್ಷ ನೀಲೇಶ್ ಶಹಾ ಪ್ರತಿಕ್ರಿಯೆ ನೀಡಿ, ಗೋವಾ ರಾಜ್ಯ ಸರ್ಕಾರ ಇದುವರೆಗೂ ರಾಜ್ಯದಲ್ಲಿ ಅಧೀಕೃತವಾಗಿ ಪ್ರವಾಸೋದ್ಯಮ ಆರಂಭಿಸದಿದ್ದರೂ ಕೂಡ ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬಾಂಬೆ ಹೈ ಕೋರ್ಟ್ ಡಬಲ್ ಡೋಸ್ ವ್ಯಾಕ್ಸಿನ್ ಪಡೆದ ಪ್ರವಾಸಿಗರಿಗೂ ನೇರವಾಗಿ ಗೋವಾ ಪ್ರವೇಶಕ್ಕೆ ಅವಕಾಶ ನೀಡಿದ್ದರಿಂದ ಪ್ರವಾಸಿರು ಗೋವಾಕ್ಕೆ ಆಗಮಿಸಲು ಸಾಧ್ಯವಾಗುವಂತಾಗಿದೆ ಎಂದಿದ್ದಾರೆ.
ಇದರಿಂದಾಗಿ ಸರ್ಕಾರವು ರಾಜ್ಯದಲ್ಲಿ ಪ್ರವಾಸೋದ್ಯಮ ಅವಲಂಭಿತ ಉದ್ಯೋಗಗಳನ್ನು ಆರಂಭಿಸಲು ಪರವಾನಗಿ ನೀಡಬೇಕಿದೆ. ಇಷ್ಟೇ ಅಲ್ಲದೆಯೇ ಗೋವಾಕ್ಕೆ ಚಾರ್ಟರ್ ವಿಮಾನಗಳ ಓಡಾಟ ಆರಂಭಿಸುವತ್ತ ಕೂಡ ಸರ್ಕಾರ ಗಮನಹರಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಕೇವಲ ಪ್ರವಾಸಿಗರನ್ನು ಅವಲಂಭಿಸಿರುವ ಅದೆಷ್ಟೋ ಉದ್ಯೋಗಗಳು ಕೋವಡಿಡ್ ಸಂದರ್ಭದಲ್ಲಿ ಬಂದ್ ಆಗಿದೆ. ಗೋವಾದಲ್ಲಿರುವ ಸುಮಾರು 3500 ಹೋಟೆಲ್ ಗಳ ಪೈಕಿ ಸದ್ಯ 1400 ಹೋಟೆಲ್ ಗಳು ಆರಂಭಗೊಂಡಿದೆ. ಈ ಪೈಕಿ 1200 ಹೋಟೆಲ್ ಗಳು ಶೇಕಡಾ 15 ರಿಂದ 20 ರಷ್ಟು ಉತ್ಪಾದನಾ ಕ್ಷಮತೆಯೊಂದಿಗೆ ಆರಂಭಗೊಂಡಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಕಂಪೆನಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ :ಸಚಿವ ನಿರಾಣಿ