ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತು ಮೀರತ್ “ಎಕ್ಸ್‌ಪ್ರೆಸ್ ವೇ’ ಪಕ್ಕದಲ್ಲಿ ಗಾಜಿಯಾಬಾದ್ ನಗರದ ಹೊರವಲಯದಲ್ಲಿ ಸದ್ಯದಲ್ಲೇ ಏರೋಪ್ಲೇನ್ ಹೊಟೇಲೊಂದು ಸೇವೆಗೆ ಸಿದ್ಧವಾಗಲಿದೆ. ಹಳೆಯ ವಿಮಾನ ವೊಂದನ್ನೇ ಹೊಟೇಲಾಗಿ ಪರಿವರ್ತಿಸಿ ಸೇವೆಗೆ ಅಣಿಗೊಳಿಸಲಾಗುತ್ತಿದೆ.
ಹಳೆಯ ವಿಮಾನವೊಂದರ ಬಿಡಿಭಾಗಗಳನ್ನು ದಿಲ್ಲಿಯಿಂದ ತರಿಸಲಾಗಿದ್ದು, ಅವುಗಳ ಜೋಡಣೆ ಕಾರ್ಯ ನಡೆಯುತ್ತಿದೆ. ಜತೆಗೆೆ ವಿಮಾನಕ್ಕೆ ಹೊಟೇಲ್‌ನ ಸ್ಪರ್ಶವನ್ನೂ ನೀಡಲಾಗುತ್ತಿದೆ. ಈ ವಿಮಾನ ಹೊಟೇಲ್‌ನಲ್ಲಿ ಒಮ್ಮೆಗೆ 70 ಮಂದಿ ಕುಳಿತುಕೊಳ್ಳ ಬಹುದಾಗಿದೆ.
ಇದನ್ನೂ ಓದಿ:ಹರ್ಷ ಹತ್ಯೆಯ ಆರೋಪಿಗಳಿಬ್ಬರ ಹೆಸರು ಬಹಿರಂಗ: ಶಿವಮೊಗ್ಗದಲ್ಲಿ ಕರ್ಫ್ಯೂ
ಜತೆಗೆೆ ವಿಮಾನದ ಟಾಪ್ ಮೇಲೆ ಓಪನ್-ಏರ್ ರೂಫ್ಟಾಪ್ ರೆಸ್ಟೋರೆಂಟ್ ಅನ್ನೂ ನಿರ್ಮಿಸ ಲಾಗುತ್ತಿದೆ ಎಂದು ಈ ಯೋಜನೆಯ ವ್ಯವ ಸ್ಥಾಪಕ ಅನು ಭವ್ ಜೈನ್ ತಿಳಿಸಿದ್ದಾರೆ.
ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ಈ ಹೊಟೇಲ್ ಸಿದ್ಧವಾಗುತ್ತದೆ ಎಂದು ಜೈನ್ ಹೇಳಿದ್ದಾರೆ.