ನವ ದೆಹಲಿ : ನಿವೃತ್ತಿ ಹೊಂದಿದ ಮೇಲೆ ಎಲ್ಲರ ತಲೆಯಲ್ಲಿ ಓಡಾಡುವ ಒಂದೇ ಒಂದು ವಿಚಾರ ಏನೆಂದರೇ, ಪಿಂಚಣಿ ಯಾವಾಗ ಬರುತ್ತದೆ…? ಪಿಂಚಣಿ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ..? ಹೀಗೆ ಅದರ ಬಗ್ಗೆಯೇ ಹೆಚ್ಚು ಆಲೋಚನೆಗಳು ತಲೆಯಲಲಿ ಹರಿದಾಡುತ್ತಿರುತ್ತದೆ.
ಹೌದು, ಈಗ ಕೇಂದ್ರ ಸರ್ಕಾರ ಪಿಂಚಣಿಯ ವಿಚಾರದಲ್ಲಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಪಿಂಚಣಿದಾರರ ಖಾತೆಗಳಿಗೆ ಅದರ ವಿವರವನ್ನು ಬ್ಯಾಂಕ್ ಗಳು ಕೇವಲ ಎಸ್ ಎಮ್ ಎಸ್ ಹಾಗೂ ಇ-ಮೇಲ್ ಜೊತೆಗೆ ವಾಟ್ಸ್ಯಾಪ್ ಮುಖಾಂತರವೂ ಕಳುಹಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ : ದರ್ಶನ್- ಇಂದ್ರಜಿತ್ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುವ ಕೆಲಸ ಮಾಡಬೇಡಿ: ಕುಮಾರಸ್ವಾಮಿ
ಇಡೀ ಜಗತ್ತೇ ಡಿಜಿಟಲೀಕರಣದತ್ತ ಮುಖ ಮಾಡುತ್ತಿರುವ ಈ ಹೊತ್ತಿನಲ್ಲಿ ಪಿಂಚಣಿ ಜಮಾ ವಿಚಾರದ ಬಗ್ಗೆಯೂ ಕೂಡ ಸ್ಮಾರ್ಟ್ ಆಗಿ ಯೋಚನೆ ಮಾಡಿದ್ದು, ವಾಟ್ಸ್ಯಾಪ್ ಮುಖಾಂತರವೂ ರವಾನಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
‘ಪಿಂಚಣಿ ವಿತರಣೆ ಮಾಡುವ ಬ್ಯಾಂಕ್‌ಗಳು ಪಿಂಚಣಿ ಚೀಟಿಯನ್ನು ಪಿಂಚಣಿದಾರರಿಗೆ ನೀಡಬೇಕು. , ಜಮಾ ಆಗಿರುವ ಪಿಂಚಣಿ ಮೊತ್ತ, ಕಡಿತ ಮಾಡಿರುವ ತೆರಿಗೆ ಮೊತ್ತ ನಮೂದಾಗಿರಬೇಕು’ ಎಂದು ಪಿಂಚಣಿ ಹಾಗೂ ಪಿಂಚಣಿದಾರರ ಅಭಿವೃದ್ಧಿ ಇಲಾಖೆಯು ಈ ಕುರಿತಾಗಿ ಆದೇಶದ ಹೊರಡಿಸಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಭಾರತ ವಿರುದ್ಧದ ಟಿ20, ಏಕದಿನ ಸರಣಿಯಿಂದ ಕುಸಾಲ್ ಪೆರೇರ ಔಟ್: ವಿ.ಕೀಪರ್ ಹುಡುಕಾಟದಲ್ಲಿ ಲಂಕಾ