Advertisement
ಒಂದು ದಿನ ಬಸ್ಸಿನಲ್ಲಿ ಹೋಗುವಾಗ ನನ್ನ ಕಣ್ಣಿಗೆ ಬಿದ್ದ ಹಳ್ಳಿಯ ಗೊಂಬೆ ನೀನು. ಸರಳ ಉಡುಪು, ಮುಗª ನಗೆ, ನಿಷ್ಕಲ್ಮಶ ಮನಸ್ಸು ಇಷ್ಟು ಸಾಕಲ್ವಾ, ನಿನಗೆ ನಾ ಮನ ಸೋಲಲು? ನನ್ನ ಕಣ್ಣುಗಳು, ಪದೇ ಪದೆ ನಿನ್ನ ನೋಡಲು ಬಯಸುತ್ತಿದ್ದವು.
Related Articles
ನಿನ್ನ ಬಳಿ ಹೇಳಲಿಲ್ಲ. ನೀ ನನ್ನ ನೋಡಿ ನಕ್ಕಾಗ ಅದು ಪ್ರೀತಿಯ ದ್ಯೋತಕ ಅಂತಲೇ ತಿಳಿದೆ. ಕುಶಲೋಪರಿ ವಿಚಾರಿಸಿದಾಗ ನನ್ನ ಇಷ್ಟ ನಿನ್ನ ಇಷ್ಟ ಒಂದೇ ಎಂದು ಅರಿತೆ. ಒಂದು ದಿನ ಗಟ್ಟಿ ಮನಸ್ಸು ಮಾಡಿ ನಿನ್ನನ್ನು ಚಹಾ ಕುಡಿಯಲು ಕರೆದೆ. ಅಂದು ಒಂದು ಮನಸ್ಸು ಹೇಳುತ್ತಿತ್ತು, ನಿನ್ನ ಮನದ ಪ್ರೀತಿ ವ್ಯಕ್ತಪಡಿಸು ಅಂತ. ಇನ್ನೊಂದು ಮನಸ್ಸು ಹೇಳುತ್ತಿತ್ತು ನಿನ್ನ ನಿರಾಕರಿಸಿ ದೂರವಾದರೆ ಅಂತ. ಗೊಂದಲ ಗೋಜಲಿನ ಮಧ್ಯೆಯೂ ಧೈರ್ಯ ಮಾಡಿ ಹೇಳಿಯೇ ಬಿಟ್ಟೆ,
Advertisement
ನಾ ನಿನ್ನ ಪ್ರೀತಿಸುವೆ ಎಂದು.ಆಗ ನೀ ಜೋರಾಗಿ ನಕ್ಕೆ. ನನಗೆ ಗಾಬರಿ…ಒಂದು ಕ್ಷಣ ನೀನು ಸುಮ್ಮನಾದೆ. ಆಮೇಲೆ ನೀ ಹರಿಸಿದ ವಾಗ್ಝರಿ, ನೀ ಆಡಿದ ಮಾತು ನನ್ನ ಮನದ ಭಾವನೆಯನ್ನೇ ಬದಲಿಸಿತು. ಲೋ, ನೀ ತುಂಬಾ ಜಾಣ ಕಣೋ. ನಿನಗೆ ಒಳ್ಳೆಯ ಪ್ರತಿಭೆ ಇದೆ. ಅದನ್ನು ಸರಿಯಾಗಿ ಬಳಸಿಕೊಂಡು ಬದುಕಿನಲ್ಲಿ ಒಂದು ಸಾಧನೆ ಮಾಡು. ಕಲಿಯುವ ವಯಸ್ಸಲ್ಲಿ ಹುಟ್ಟುವ ಈ ಭಾವನೆಗಳು ಶಾಶ್ವತವಲ್ಲ. ಪ್ರೀತಿಗಿಂತ ಬದುಕು ಮುಖ್ಯ. ನಾ ನಿನ್ನನ್ನು ಮಾತಾಡಿಸಿದ್ದು ನಿಜ. ನಿನ್ನ ಮೇಲಿನ ಗೌರವದಿಂದ. ಇನ್ನ ಜೊತೆ ನಡೆದು ಬಂದಿದ್ದು, ನಿನ್ನ ಮಾತಿಗೆ ನಲಿದಾಡಿದ್ದು ನಿನ್ನ ನೋವು ದೂರವಾಗಲಿ ಎಂದು. ನಿನ್ನ ಸಾಧನೆ ಕಂಡು ಹರ್ಷ ಪಡುವ ಗೆಳತಿ ಕಣೋ ನಾನು…ನಿನ್ನ ಜೊತೆ ಸದಾ ಗೆಳತಿಯಾಗಿ ಇರಲು ಬಯಸುವೆ’ ಅಂತ ನೀ ಹೇಳಿದ ಬದುಕಿನ ಪಾಠ. ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು. ನಾನು ಪ್ರೇಮದ ಕನವರಿಕೆ ಬಿಟ್ಟು ಸಾಧನೆಯ ಹಾದಿಗೆ ಹೊರಳಲು ನಿರ್ಧರಿಸಿದೇ ಅಂಥದೊಂದು ಬದಲಾವಣೆಗೆ ಕಾರಣಳಾದವಳು ನೀನು. ಬದುಕಿನ ಪಾಠ ಕಲಿಸಿದ ಆಪ್ತ ಗೆಳತಿ ನೀನು….. ರಂಗನಾಥ ಎನ್ ವಾಲ್ಮೀಕಿ