ಹೊಸದಿಲ್ಲಿ: ನ್ಯೂಯಾರ್ಕ್‌ನ ಗುರುದ್ವಾರಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದ ಅಮೆರಿಕದ ಭಾರತೀಯ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಅವರನ್ನು ಖಲಿಸ್ಥಾನಿ ಕಿಡಿಗೇಡಿಗಳು ಅಡ್ಡಗಟ್ಟಿ, “ಹದೀìಪ್ ಸಿಂಗ್ ನಿಜ್ಜರ್ ಹತ್ಯೆಗೆ ನೀವೇ ಕಾರಣ’ ಎಂದು ಆರೋಪಿಸಿ ಎಳೆದಾ ಡಿದ್ದಾರೆ. ಈ ನಡುವೆ ಸಂಧು ಪ್ರತಿಕ್ರಿ ಯೆ ನೀಡಿ, “ನನ್ನನ್ನು ಯಾರೂ ಎಳೆ ದಾಡಿಲ್ಲ’ ಎಂದಿದ್ದಾರೆ.
ಈ ವೀಡಿಯೋ ಜಾಲತಾಣ ಗಳಲ್ಲಿಯೂ ವೈರಲ್ ಆಗಿದೆ. ಅವರ ಜತೆಗೆ ಖಲಿಸ್ಥಾನಿ ಕಿಡಿಗೇಡಿಗಳು ನಡೆದುಕೊಂಡ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ನ್ಯೂಯಾರ್ಕ್‌ನ ಲಾಂಗ್ ಐಲೆಂಡ್‌ನ ಹಿಕ್ಸ್‌ವಿಲ್ಲೆಯ ಗುರುದ್ವಾರಕ್ಕೆ ಗುರುಪುರಬ್ ಪ್ರಾರ್ಥನೆ ಹಿನ್ನೆಲೆಯಲ್ಲಿ ತರಣ್‌ಜಿತ್ ಸಿಂಗ್ ಸಂಧು ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಖಲಿಸ್ಥಾನಿಗಳು ಅವರನ್ನು ಸುತ್ತುವರೆದಿದ್ದಾರೆ. “ನಿಜ್ಜರ್‌ನ ಹತ್ಯೆಗೆ ನೀನೇ ಹೊಣೆ. ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದೀಯಾ’ ಎಂದು ಎಳೆದಾಡಿದ್ದಾರೆ’.
ಕೂಡಲೇ ಅವರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಅಲ್ಲಿಯೂ ಒಬ್ಬ ವ್ಯಕ್ತಿ ಖಲಿಸ್ಥಾನಿ ಧ್ವಜ ಬೀಸಿರುವುದು ವರದಿಯಾಗಿದೆ. ಇದಕ್ಕೂ ಮುನ್ನ ಗುರುದ್ವಾರದಲ್ಲಿ ತಾರಂಜಿತ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಗಿತ್ತು. ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಗುರುನಾನಕರ ಕೀರ್ತನೆಯನ್ನು ಆಲಿಸಿ ಏಕತೆ- ಸಮಾನತೆಯ ಅವರ ಸಂದೇಶಗಳನ್ನು ಮನತುಂಬಿಕೊಳ್ಳುವಂಥ ಅಪೂರ್ವ ಕ್ಷಣಗಳಲ್ಲಿ ಭಾಗಿ ಯಾಗಿದ್ದೆ ಎಂದು ತಾರಂಜಿತ್ ಎಕ್ಸ್‌ನಲ್ಲಿ ಸಂತಸವನ್ನೂ ವ್ಯಕ್ತಪಡಿಸಿದ್ದರು.
ಕೇಂದ್ರ ಖಂಡನೆ: ಕೇಂದ್ರ ವಿದೇಶಾಂಗ ಸಚಿವಾಲಯ ಈ ಘಟನೆಯನ್ನು ಖಂಡಿಸಿದ್ದು, ಅಮೆರಿಕ ಸರಕಾರ ಜತೆಗೆ ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ತಿರುಚಿದ ವೀಡಿಯೋ?: ಇದೇ ವೇಳೆ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಸಿಕ್ಖ್ ಫಾರ್ ಜಸ್ಟೀಸ್ ಸಂಘಟನೆ ಮಾಡಿದ ನಕಲಿ ವೀಡಿಯೋ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಹೇಳಿವೆ.