Advertisement

ಜಾಸ್ತಿ ತಲೆಕೆಡಿಸಿಕೊಳ್ಳಬೇಡ ಮುಂದಿನ ಸರದಿ ನಿನ್ನದು: ಲೇಖಕಿ ರೌಲಿಂಗ್‌ಗೆ ಬೆದರಿಕೆ ಸಂದೇಶ

07:26 PM Aug 14, 2022 | Team Udayavani |

ಲಂಡನ್‌: ಸಲ್ಮಾನ್‌ ರಶ್ದಿ ಅವರ ಹಲ್ಲೆ ಖಂಡಿಸಿ ಟ್ವೀಟ್‌ ಮಾಡಿದ ಹ್ಯಾರಿ ಪಾಟರ್‌ ಲೇಖಕಿ ಜೆಕೆ ರೌಲಿಂಗ್‌ ಅವರಿಗೆ ಶನಿವಾರ ಜೀವ ಬೆದರಿಕೆ ಬಂದಿರುವ ಕುರಿತು ವರದಿಯಾಗಿದೆ.

Advertisement

ರಶ್ದಿ ಅವರ ಹಲ್ಲೆಯನ್ನು ಖಂಡಿಸಿ ಲೇಖಕಿ ರೌಲಿಂಗ್‌ ಅವರು ʼ ಇದೊಂದು ಭಯಾನಕ ಸುದ್ದಿ, ರಶ್ದಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ಗೆ ಮೀರ್‌ ಆಸೀಫ್‌ ಅಜೀಜ್‌ ಎಂಬಾತ ಕಮೆಂಟ್‌ ಹಾಕಿದ್ದು, ಜಾಸ್ತಿ ತಲೆಕೆಡಿಸಿಕೊಳ್ಳಬೇಡ ಮುಂದಿನ ಸರದಿ ನಿನ್ನದು. ರಶ್ದಿ ಹಾಗೆ ನಿನ್ನನ್ನೂ ಹತ್ಯೆ ಮಾಡಲಾಗುವುದು ಎನ್ನುವ ಅರ್ಥದಲ್ಲಿ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಬಂಟ್ವಾಳ ಡಿವೈಎಸ್ ಪಿ ಪ್ರತಾಪ್ ಅವರಿಗೆ ರಾಷ್ಟ್ರಪತಿ ಪದಕ ಗೌರವ

ಇದನ್ನು ಗಂಭೀರವಾಗಿ ಪರಿಗಣಿಸಿದ ರೌಲಿಂಗ್‌, ಟ್ವಿಟರ್‌ ಸಪೋರ್ಟ್‌ ಟೀಂನವರಿಗೆ ಬೆದರಿಕೆ ಸಂದೇಶದ ಸ್ಕ್ರೀನ್‌ ಶಾಟ್‌ ಕಳುಹಿಸಿ ʼಇದಕ್ಕಾಗಿ ಏನಾದರೂ ಸಹಾಯ ಮಾಡುವಿರಾ ಎಂದು ಕೇಳಿದ್ದಾರೆ. ಟ್ವಿಟರ್ ಕೂಡ ಇದಕ್ಕೆ ಸ್ಪಂದಿಸಿದ್ದು, ಬೆದರಿಕೆ ಹಾಕಿದ ವ್ಯಕ್ತಿಯ ಅಕೌಂಟ್‌ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next