ನೆನಪುಗಳ ಒಂಥರ ನೆರಳು ಇದ್ದಾಗೆ. ಆಗಾಗ ನಮ್ಮ ಹಿಂದೆ ತಿರುಗ್ತಾನೇ ಇರುತ್ತವೆ. ನೆನಪುಗಳ ಒಲೆ ಮುಂದೆ ಕೂತು ಕೆದಕಿದರೆ, ಕೆಲವು ಸಲ ಭೂತಕಾಲ ಬೆಚ್ಚಗಿರುತ್ತದೆ. ಇನ್ನೂ ಕೆಲಸ ಕಚಗುಳಿ ಇಟ್ಟಂಗೆ ಮಾಡುತ್ತದೆ. ಎಷ್ಟೋ ಸಲ, ಕೋಪವನ್ನು ತರಿಸಿ, ಇನ್ನೂ ಕೆಲವೊಮ್ಮೆ ನಾಚಿ ನೀರಾಗುವಂತೆ ಮಾಡುವುದು ಉಂಟು. ನಿನ್ನ ನೋಡಬೇಕು ಅಂದರೆ ಈ ನೆನಪುಗಳ ಕನ್ನಡಿ ಬೇಕು.
ನಿನಗೆ ನೆನಪಿದೆಯಾ, ಪ್ರೀತಿಯ ಆರಂಭದಲ್ಲಿ ಹೇಗಿದ್ವಿ ಅಂಥ? ಅರ್ಧ ಗಂಟೆ ಕೂಡ ಮಾತಾಡದೇ ಇದ್ದರೆ ಏನೋ ಕಳೆದುಕೊಂಡ ಹಾಗೆ ಆಡ್ತಿದ್ವಿ ಅಲ್ವಾ? ಇಂದು ಅವೆಲ್ಲವೂ ಮರೆಯಾಗುತ್ತಿದೆ. ತಾಯಿಯಿಂದ ಮಗುವನ್ನು ಬೇರೆಮಾಡಿದ ಹಾಗೆ ನನ್ನಿಂದ ನಿನ್ನನ್ನು ಯಾರೊ ಅಪಹರಿಸುತ್ತಿರುವ ಭಾವ ಮೂಡುತ್ತಿದೆ.
ನನ್ನ ಮುಖವನ್ನೆ ನೋಡುತ್ತಿ¨ªಾ ಆ ನಿನ್ನ ಕಂಗಳು ಮರೆಯಾಗಿದೆ. ಕಂಬನಿ ವರೆಸುತ್ತಿದ್ದ ನಿನ್ನ ಕೈಗಳು ಕಣ್ಮರೆಯಾಗಿವೆ. ಸಣ್ಣ ಕದಲಿಕೆಗೂ ಹಂಬಲಿಸುತ್ತಿದ್ದ ನಿನ್ನ ಹೃದಯ ಮಿಡಿಯುತ್ತಿಲ್ಲ.ಬಹುಶಃ ಪ್ರೀತಿ ಬತ್ತಿಹೋಗಿರಬೇಕು.
ನಿನ್ನ ಮೌನ ಭಾಷೆ ಅರ್ಥವಾಗುತ್ತಿಲ್ಲ. ಕುಡಿನೋಟ ಮರೆಯಲಾಗುತ್ತಿಲ್ಲ. ನೀನು ಬದುಕಿರುವುದೇ ನಿನ್ನ ಜೊತೆ ಕಳೆದ ನೆನಪುಗಳಿಂದ ನೀನು ಜೀವಂತ. ಅದು ಕಳೆದು ಹೋದರೆ ಅನ್ನೋ ಭಯ ಶುರುವಾಗಿದೆ. ಆದರೆ, ಹೇಳಿಕೊಳ್ಳುವುದು ಯಾರ ಹತ್ತಿರ? ನೀನೇ ಇಲ್ಲ. ನೀ ಇಲ್ಲದೆ ಬದುಕುವುದಾದರು ಹೇಗೆ ಅನ್ನೋ ಹೆದರಿಕೆ ಶುರುವಾದರೆ, ನೆನಪುಗಳು ನಾನು ಇದ್ದೇನಲ್ಲ ಅಂತ ಸಾಂತ್ವನ ಹೇಳತ್ತವೆ. ಅವೂ ಕಳೆದು ಹೋದರೆ ಅನ್ನೋ ಮತ್ತೂ ಆತಂಕ ಆವರಿಸಿದೆ. ಅದಕ್ಕೆ ಬೇಗ ಸಿಕ್ತೀಯಾ?
– ಅನ್ನಪೂರ್ಣ ವೈ.ಬಿ.ಕೆ.