Advertisement

“ಅಕಟಕಟʼ ಎಂದ ಲೂಸ್‌ಮಾದ ಯೋಗಿ

07:40 AM Jul 09, 2020 | Lakshmi GovindaRaj |

ಸ್ಯಾಂಡಲ್‌ವುಡ್‌ನ ಲೂಸ್‌ಮಾದ ಯೋಗಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಸಿದ್ಧತೆ ಆರಂಭಿಸಿದ್ದು, ಇದೀಗ 10 ನಿಮಿಷದಲ್ಲೇ ಕಥೆ ಕೇಳಿ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ.

Advertisement

ಹೌದು! ಯೋಗಿ “ಅಕಟಕಟʼ ಎಂಬ ಹೊಸ ಸಿನಿಮಾವನ್ನು ಓಪ್ಪಿದ್ದು, “ದಿ ಬೆಸ್ಟ್ ಆ್ಯಕ್ಟರ್ʼ ಶಾರ್ಟ್ ಮೂವಿಯಿಂದ ಗಮನ ಸೆಳೆದಿದ್ದ, ನಿರ್ದೇಶಕ ನಾಗರಾಜ್ ಸೋಮಯಾಜಿ  ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಯೋಗಿ ಹಿಂದೆದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಾಯಿ-ಮಗನ ಸೆಂಟಿಮೆಂಟ್ ಜೊತೆಗೆ ಕಮರ್ಷಿಯಲ್ ಎಳೆಯಿರುವ ಚಿತ್ರವಾಗಿದೆ. ಚಿತ್ರದಲ್ಲಿ ಯೋಗಿ ಎರಡು ಶೇಡ್‌ಗಳಲ್ಲಿ ನಟಿಸುತ್ತಿದ್ದು, ಅವರ ಹುಟ್ಟುಹಬ್ಬದಂದೇ ಚಿತ್ರತಂಡ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಮಾಡಿತ್ತು.

ಇನ್ನು ಯೋಗಿ ಹುಟ್ಟುಹಬ್ಬದಂದು “ಒಂಬತ್ತನೇ ದಿಕ್ಕು’ ಚಿತ್ರದ ಟೀಸರ್‌ ಬಿಡುಗಡೆಯಾಗಿ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಹಾಗೂ ಈ ಸಿನಿಮಾ ಬಳಿಕ ಯೋಗಿ ತಮ್ಮದೇ ಬ್ಯಾನರ್‌ನಲ್ಲಿ “ಕಂಸ’ ಎಂಬ ಚಿತ್ರದಲ್ಲಿ ನಟಿಸುವ ಬಗ್ಗೆ ಈಗಾಗಲೇ ಸುದ್ದಿಯೂ ಆಗಿದ್ದು, ನಿರ್ಮಾಪಕ ಎನ್‌.ಕುಮಾರ್‌ ನಿರ್ಮಾಣ, ಅನಂತ್‌ರಾಜು ನಿರ್ದೇಶನದ ಹೊಸ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next