Advertisement
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಅಂತರ ಮಾತ್ರವಲ್ಲದೆ ಆನಂತರ ನಡೆದ ಬೆಳವಣಿಗೆಗಳು ಮಾಧ್ಯಮ ಹಾಗೂ ಇತರ ರಾಜಕೀಯ ಪಕ್ಷಗಳಿಗೆ ಚೇತರಿಸಿಕೊಳ್ಳಲಾಗದಷ್ಟು ಆಘಾತವಿಕ್ಕಿವೆ. 300 ಪ್ಲಸ್ ಸ್ಥಾನಗಳನ್ನು ಗೆದ್ದ ಪಕ್ಷ ಪ್ರಖರ ಹಿಂದುತ್ವವಾದಿಯಾಗಿರುವ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಮಾಡಿರುವುದನ್ನು ಅನೇಕ ಮಂದಿ “ಸರ್ಜಿಕಲ್ ಸ್ಟ್ರೈಕ್’ ಎಂದೇ ಬಣ್ಣಿಸುತ್ತಿದ್ದಾರೆ. ಎಡಪಂಥೀಯರಿಗಂತೂ ಇನ್ನೂ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವುದನ್ನು ಜೀರ್ಣಿಸಿಧಿಕೊಳ್ಳಲು ಆಗಿಲ್ಲ. ಅವರು ಇದನ್ನು “ಪೈಶಾಚಿಕ ನಡೆ’ ಎಂದು ಟೀಕಿಸಿ ತಮ್ಮ ಹೊಟ್ಟೆಯುರಿಯನ್ನು ತಣಿಸಿಕೊಳ್ಳುತ್ತಿದ್ದಾರೆ. ಅನೇಕ ಮಂದಿ ಯೋಗಿ ಆದಿತ್ಯನಾಥ್ ಅವರಿಗೆ ತನ್ನ ನಿಲುವು ಮತ್ತು ಕಾರ್ಯಸೂಚಿಗಳನ್ನು ತಿಳಿಸಲು ಒಂದು ಅವಕಾಶವನ್ನೂ ಕೊಡದೆ ಕೋಮುವಾದಿ, ಮತಾಂಧ, ಹಿಂದು ಮೂಲಭೂತವಾದಿ ಇತ್ಯಾದಿ ಬಿರುದು ಬಾವಲಿಗಳನ್ನು ದಯಪಾಲಿಸಿದ್ದಾರೆ.
Related Articles
ಹೊಸ ಮುಖ್ಯಮಂತ್ರಿ ಅತ್ಯಂತ ಸ್ಪಷ್ಟ ನಿಲುವುಗಳುಳ್ಳ ವ್ಯಕ್ತಿ. ತನಗನ್ನಿಸಿದ್ದನ್ನು ಹೇಳಲು ಹಿಂಜರಿಯುವುದಿಲ್ಲ ಮತ್ತು ಅದರಿಂದ ವಿವಾದ ಸೃಷ್ಟಿಯಾದರೂ ಎದೆಗುಂದುವುದಿಲ್ಲ. ನಡೆನುಡಿಯಲ್ಲಿ ತಾನು ಹಿಂದು ಎಂದು ನಿರ್ಭಯವಾಗಿ, ಹೆಮ್ಮೆಯಿಂದ ತೋರಿಸಿಕೊಳ್ಳುತ್ತಾರೆ. ಯೋಗಿ ಆದಿತ್ಯನಾಥ ಅವರು ಅಖಂಡ ಬ್ರಹ್ಮಚರ್ಯವನ್ನು ಪಾಲಿಸುವ ಸನ್ಯಾಸಿ ಮತ್ತು ಪುರಾತನ ಮಠವೊಂದರ ಪೀಠಾಧಿಪತಿಯಾಗಿದ್ದಾರೆ. ಹಿಂದೆ ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪ ಅವರ ಮೇಲಿರುವುದು ನಿಜ. ಗಲಭೆೆ, ದೊಂಬಿ, ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಹಲವು ಕ್ರಿಮಿನಲ್ ಕೇಸ್‌ಗಳು ದಾಖಲಾಗಿರುವುದೂ ಸುಳ್ಳಲ್ಲ. ರಾಜಕೀಯವಾಗಿ ಅವರನ್ನು ಮುಗಿಸಲು ಹಿಂದೆ ಉತ್ತರಪ್ರದೇಶದಲ್ಲಿದ್ದ ಅಖೀಲೇಶ್ ನೇತೃತ್ವದ ಸಮಾಜವಾದಿ ಪಕ್ಷದ ಸರಕಾರ ಬಹಳ ಪ್ರಯತ್ನ ಮಾಡಿತ್ತು. ಆದರೆ ಇವೆಲ್ಲ ವಿರೋಧಗಳನ್ನು ಮೆಟ್ಟಿನಿಂತು ಯಶಸ್ವಿಯಾಗಿ ಹೋರಾಡಿದ ಯೋಗಿ ಆದಿತ್ಯನಾಥ್ ಜಾತೀಯ ನೆಲೆಯಲ್ಲಿ ವಿಭಜನೆಯಾಗಿದ್ದ ಉತ್ತರಪ್ರದೇಶ ರಾಜ್ಯದ ಸಮಾಜವನ್ನು ಹಿಂದುತ್ವದ ನೆಲೆಯಲ್ಲಿ ಒಗ್ಗೂಡಿಸಿದ್ದಾರೆ; ಜಾತಿ, ಮತ, ಧರ್ಮ ಬೇಧ ಪ್ರಾಂತ್ಯಗಳ ಬೇಧವಿಲ್ಲದೆ ಎಲ್ಲ ಮತದಾರರ ಬೆಂಬಲವನ್ನು ಒಗ್ಗೂಡಿಸಿ ವಿಜಯಪತಾಕೆ ಹಾರಿಸಿದ್ದಾರೆ. “ಮೋದಿಯ ಎರಕ’ಕ್ಕೆ ಸರಿಹೊಂದುವ ಪ್ರಬಲ ನಾಯಕ ಎನ್ನುವ ಭಾವನೆಯನ್ನು ಯೋಗಿ ಆರಂಭದಲ್ಲೇ ಮೂಡಿಸಿದ್ದಾರೆ. ಅರಾಜಕತೆಯೇ ತಾಂಡವವಾಡುತ್ತಿದ್ದ ಉತ್ತರಪ್ರದೇಶ ರಾಜ್ಯಕ್ಕೆ ಪ್ರಬಲ, ತೀಕ್ಷ್ಣ ಕತೃìತ್ವ ಶಕ್ತಿಯುಳ್ಳ, ಪ್ರಾಮಾಣಿಕ ಮುಖ್ಯಮಂತ್ರಿಯ ಅಗತ್ಯವಿತ್ತು. ಅದೀಗ ಯೋಗಿ ಆದಿತ್ಯನಾಥ್ ಮುಖಾಂತರ ಈಡೇರಿದೆ. ಮುಖ್ಯಮಂತ್ರಿಯಾದ ಬಳಿಕ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲೇ ಅವರು ತನ್ನ ಆಡಳಿತ ಕಠಿಣವಾಗಿರುತ್ತದೆ ಎಂಬ ಸುಳಿವು ನೀಡಿದ್ದಾರೆ. ರಾಜ್ಯವನ್ನು ಅಭಿವೃದ್ಧಿಗೊಳಿಸುತ್ತೇನೆ ಮತ್ತು ಯಾವುದೇ ತಾರತಮ್ಯ ಮಾಡದೆ ಎಲ್ಲ ಪ್ರಜೆಗಳನ್ನು ರಕ್ಷಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ.
Advertisement
ಚುನಾವಣೆಯ ತಯಾರಿಚುನಾವಣೆಯ ದೃಷ್ಟಿಯಿಂದ ನೋಡುವುದಾದರೆ, ದೇಶದ ರಾಜ್ಯಗಳಲ್ಲೇ ಅತಿ ಹೆಚ್ಚು ಮತದಾರರಿರುವಂತಹ, ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರುವಂತಹ ರಾಜ್ಯ ಉತ್ತರಧಿಪ್ರದೇಶ. ಇಂತಹ ರಾಜ್ಯದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರ ಆಯ್ಕೆಯು ಬಿಜೆಪಿಯು ಮುಂಬರುವ 2019ರ ಸಾರ್ವತ್ರಿಕ ಚುನಾವಣೆಗೆ ಈಗಲೇ ದೊಡ್ಡ ಮಟ್ಟದಲ್ಲಿ ಅತ್ಯಂತ ಯೋಜಿತವಾದ ವ್ಯೂಹಾತ್ಮಕ ತಯಾರಿ ಪ್ರಾರಂಭಿಸಿರುವುದನ್ನು ಸೂಚಿಸುತ್ತದೆ. ದಿಲ್ಲಿಯ ಗದ್ದುಗೆಯನ್ನು ಗೆಲ್ಲಬೇಕಾದರೆ ಉತ್ತರಪ್ರದೇಶವನ್ನು ಗೆಲ್ಲಲೇಬೇಕು ಎನ್ನುವುದು ಎಲ್ಲ ರಾಜಕೀಯ ಪಕ್ಷಗಳಂತೆ ಬಿಜೆಪಿಗೂ ಚೆನ್ನಾಗಿ ಗೊತ್ತಿದೆ. ಅತ್ಯಧಿಕ ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶವನ್ನು ಬಿಜೆಪಿ ಸಹಿತ ಯಾವುದೇ ರಾಜಕೀಯ ಪಕ್ಷಗಳು ಯಾವ ಕಾರಣಕ್ಕೂ ಕಡೆಗಣಿಸುವಂತಿಲ್ಲ. 2014ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪುನರಾವರ್ತಿಸಬೇಕಾದರೆ ಜಾತಿಗಳನ್ನು ಮೀರಿ ನಿಂತು ಹಿಂದು ಮತಗಳನ್ನು ಒಗ್ಗೂಡಿಸುವುದು ಅಗತ್ಯ. ಹಿಂದಿನ ಚುನಾವಣೆಗಳಲ್ಲಿ ಉಳಿದೆಲ್ಲ ಪಕ್ಷಗಳು ಅಲ್ಪಸಂಖ್ಯಾತರ ಓಲೈಕೆಯ ಮಾದರಿಯನ್ನು ಮುಂದಿಟ್ಟುಕೊಂಡು ಉಳಿದ ಜಾತಿ ಮತಗಳ ಬೆಂಬಲದಿಂದ ಅಧಿಕಾರ ಗಳಿಸುವ ಪ್ರಯತ್ನ ಮಾಡಿದರೆ ಬಿಜೆಪಿ ಮಾತ್ರ ಸಮಸ್ತ ಹಿಂದು ಮತಗಳ ಮೇಲೆ ಕಣ್ಣಿಟ್ಟಿತ್ತು. ಈ ರಣತಂತ್ರದಿಂದಾಗಿ ಅಲ್ಪಧಿಸಂಖ್ಯಾತ ಮತಗಳು ಗಮನಾರ್ಹವಾಗಿ ಸಿಗದಿದ್ದರೂ ಬಿಜೆಪಿ ಗೆದ್ದಿದೆ. ಇದೇ ಹಿನ್ನೆಲೆಯಲ್ಲಿ 2019ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಉಳಿದೆಲ್ಲ ಪಕ್ಷಗಳು ಒಂದಾಗಿ ಮಹಾಮೈತ್ರಿಕೂಟ ರಚಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಹಿಂದು ಮತಗಳನ್ನು ಒಗ್ಗೂಡಿಸುವುದು ಬಿಜೆಪಿಗೆ ಅನಿವಾರ್ಯವೂ ಹೌದು. ಹಾಗೆಂದು ಹಿಂದು ಮತಗಳನ್ನು ಒಗ್ಗೂಡಿಸಿದ ಮಾತ್ರಕ್ಕೆ 2019ರ ಮಹಾಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುವಂತಿಲ್ಲ. 2019ರ ಜಯದ ಗುರಿ ಈಡೇರಬೇಕಾದರೆ ಯೋಗಿ ಆದಿತ್ಯನಾಥ್ ಉತ್ತಮವಾದ ಆಡಳಿತವನ್ನು ನೀಡಬೇಕು. ಅಭಿವೃದ್ಧಿ, ಆರ್ಥಿಕ ಚೇತರಿಕೆ, ಉದ್ಯೋಗ ಈ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು. ಮುಖ್ಯವಾಗಿ ಹದಗೆಟ್ಟಿರುವ ಕಾನೂನು ಮತ್ತು ವ್ಯವಸ್ಥೆ ಪಾಲನೆಯನ್ನು ನಿಯಂತ್ರಿಸಬೇಕು. ಜನರಲ್ಲಿ ಸುರಕ್ಷೆಯ ಭಾವ ಮೂಡಿಸಬೇಕು. ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು. ಮಹಿಳೆಯರೂ ಸೇರಿದಂತೆ ಎಲ್ಲರ ಸುರಕ್ಷೆ ಮತ್ತು ಸಮೃದ್ಧಿಯೇ ಸರಕಾರದ ಮಂತ್ರವಾಗಬೇಕು. ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ಬಡವರ ಮತ್ತು ದಮನಿತರ ಬದುಕು ಹಸನಾಗಬೇಕು. ರಸ್ತೆ, ವಿದ್ಯುತ್, ನೀರು ಕೃಷಿ, ಆರೋಗ್ಯ ಶಿಕ್ಷಣ ಸಹಿತ ಎಲ್ಲ ಮೂಲಸೌಕರ್ಯಗಳನ್ನು ಸುಧಾರಿಸುವ ದೊಡ್ಡ ಹೊಣೆಗಾರಿಕೆ ಯೋಗಿ ಆದಿತ್ಯನಾಥ್ ಅವರ ಮೇಲಿದೆ. ಆ ಮೂಲಕ ರಾಜ್ಯದ ಎಲ್ಲ ಮತದಾರರ ವಿಶ್ವಾಸ 2019ರವರೆಗೆ ಮತ್ತು ಆ ಮುಂದಕ್ಕೂ ತನ್ನ ಮೇಲೆ ಉಳಿಯುವುದನ್ನು ಅವರು ಖಾತರಿಪಡಿಸಿಕೊಳ್ಳಬೇಕಾಗಿದೆ. ಉತ್ತರಪ್ರದೇಶಕ್ಕೆ ಅಂಟಿಧಿಕೊಂಡಿರುವ ಗೂಂಡಾರಾಜ್ ಎಂಬ ಕಳಂಕವನ್ನು ತೊಡೆದು ಹಾಕುಧಿವುದು ನೂತನ ಮುಖ್ಯಮಂತ್ರಿಯ ಎದುರು ಇರುವ ದೊಡ್ಡ ಸವಾಲು. ಎಲ್ಲ ವರ್ಗದವರಿಗೂ ಸಮಾನ ಆರ್ಥಿಕ ಅಭಿವೃದ್ಧಿಯ ಅವಕಾಶಗಳನ್ನು ಸೃಷ್ಟಿಸಿ ಜೀವನ ಮಟ್ಟವನ್ನು ಸುಧಾರಿಸುವುದು ಯೋಗಿ ನೇತೃತ್ವದ ಬಿಜೆಪಿ ಸರಕಾರದ ಆದ್ಯತೆಯ ಕಾರ್ಯಕ್ರಮವಾಗಬೇಕು. ಏಕೆ ಸಾಧ್ಯವಿಲ್ಲ?!
ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ 10 ವರ್ಷಗಳಲ್ಲಿ ಇಡೀ ಗುಜರಾತ್ ರಾಜ್ಯದ ಚಹರೆಯನ್ನೇ ಬದಲಾಧಿಯಿಸಿರುವಾಗ ಇದೇ ಕೆಲಸವನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮಾಡಲು ಏಕೆ ಸಾಧ್ಯವಿಲ್ಲ? ಅಧಿಕಾರದ ಜತೆಗೆ ಜವಾಬ್ದಾರಿಯೂ ಹಿಂಬಾಲಿಸಿ ಬಂದೇ ಬರುತ್ತದೆ. ಅಪ್ಪಟ ದೇಶಭಕ್ತ, ದೇಶವನ್ನು ಅಪಾರವಾಗಿ ಪ್ರೀತಿಸುವ ಕಡು
ರಾಷ್ಟ್ರೀಧಿಯವಾದಿಯಾಗಿರುವ ಯೋಗಿಗೆ ಒಂದು ಬೃಹತ್ ರಾಜ್ಯವನ್ನು ಹೇಗೆ ಆಳಬಹುದು ಎಂದು ಸಮರ್ಥವಾಗಿ ತೋರಿಸಿಕೊಡಲು ಒದಗಿರುವ ಸದವಕಾಶವಿದು. ಯೋಗಿ ಆದಿತ್ಯನಾಥ್ ಆಳ್ವಿಕೆ ಇಡೀ ದೇಶಕ್ಕೆ ಭವಿಷ್ಯದ ರಾಜಕೀಯ ದಿಕ್ಸೂಚಿಯಾಗುವ ಸಾಧ್ಯತೆಯಿದೆ. ಸನ್ಯಾಸಿಯನ್ನು ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡುವ ಮೂಲಕ ಬಿಜೆಪಿ ಅತಿ ದೊಡ್ಡ ಜೂಜಾಟದಲ್ಲಿ ಮಹತ್ವದ ದಾಳ ಉರುಳಿಸಿದೆ ಎಂದರೆ ತಪ್ಪಲ್ಲ. ಈ ಜೂಜಿನಲ್ಲಿ ಪಕ್ಷವನ್ನು ಗೆಲ್ಲಿಸುವ ಹಾಗೂ ಇದೇ ವೇಳೆ ರಾಜಕೀಯಕ್ಕೊಂದು ಹೊಸ ವ್ಯಾಖ್ಯಾನ ಬರೆಯುವ ಹೊಣೆ ಯೋಗಿ ಆದಿತ್ಯನಾಥ್ ಅವರಿಗಿದೆ. ಇದರಲ್ಲಿ ಅವರು ಸಫಲರಾದರೆ ಅವರಿಗೆ, ಬಿಜೆಪಿಗೆ ಮಾತ್ರವಲ್ಲ; ದೇಶಕ್ಕೂ ಒಳಿತಾಗಲಿದೆ. ಟಿ. ವಿ. ಮೋಹನದಾಸ್ ಪೈ ಚಿಂತಕ, ಆಡಳಿತ ತಜ್ಞ