ಮಂಡ್ಯ: ಬೆಂಗಳೂರು- ಮೈಸೂರು ಹೆದ್ದಾರಿಯ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮುಂದಿನ ಭಾವಿ ಪ್ರಧಾನಮಂತ್ರಿ ಎಂದು ಯೋಗಿ ಆದಿತ್ಯನಾಥ್ ಅವರ ಭಾವಚಿತ್ರವನ್ನೂ ಹಾಕಲಾಗಿದೆ.
Advertisement
ಸಮಾವೇಶ ನಡೆಯುವ ಮದ್ದೂರಿನ ಗೆಜ್ಜಲಗೆರೆ ಬಳಿಯ ಮೋದಿ ಆಗಮಿಸುವ ರಸ್ತೆಯಲ್ಲಿಯೇ ಫ್ಲೆಕ್ಸ್ ಅಳವಡಿಸಲಾಗಿದೆ.
ಒಂದೇ ಫ್ಲೆಕ್ಸ್ ನಲ್ಲಿ ಎಡಭಾಗದಲ್ಲಿ ಮೋದಿ ಭಾವಚಿತ್ರ ಬಲ ಭಾಗದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಭಾವಚಿತ್ರ ಅಳವಡಿಸಲಾಗಿದ್ದು, ಹಾಲಿ ಪ್ರಧಾನಿ, ಭಾವಿ ಪ್ರಧಾನಮಂತ್ರಿಗಳು ಎಂದು ಸ್ವಾಗತ ಕೋರಲಾಗಿದೆ.