Advertisement

ಮದ್ರಸಾಗಳ ಆನ್‌ಲೈನ್‌ ನೋಂದಣಿ ಕಡ್ಡಾಯ

08:00 AM Aug 19, 2017 | Team Udayavani |

ಲಕ್ನೋ: ಮದ್ರಸಾಗಳಲ್ಲಿನ ಅವ್ಯವಹಾರಗಳನ್ನು ತಡೆಯುವ ಸಲುವಾಗಿ ರಾಜ್ಯದ ಎಲ್ಲ ಮದ್ರಸಾಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಉತ್ತರಪ್ರದೇಶ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ಅಲ್ಲದೆ, ಇದಕ್ಕೆಂದೇ ಯುಪಿ ಮದರಸಾ ಮಂಡಳಿಯ ಪೋರ್ಟಲ್‌ವೊಂದನ್ನು ರಚಿಸಲಾಗಿದೆ.

Advertisement

ಮದ್ರಸಾಗಳಲ್ಲಿ ಅವ್ಯವಹಾರಗಳು ನಡೆಯುತ್ತಿರುವ ಬಗ್ಗೆ ಅನೇಕ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕಡ್ಡಾಯ ನೋಂದಣಿಗೆ ಸೂಚಿಸಲಾಗಿದೆ. ಇದರಿಂದ ಮದ್ರಸಾಗಳ ಆಡಳಿತ, ಶಿಕ್ಷಕರು ಮತ್ತಿತರ ಎಲ್ಲ ವಿವರಗಳೂ ಲಭ್ಯವಾಗಲಿವೆ. ಜತೆಗೆ, ಇದು ಡಿಜಿಟಲೀಕರಣದತ್ತ ಒಂದು ಹೆಜ್ಜೆ ಎಂದು ವಕ್ಫ್ ಸಚಿವ ಮೊಹ್ಸಿನ್‌ ರಝಾ ಹೇಳಿದ್ದಾರೆ. ಮದ್ರಸಾಗಳಲ್ಲಿ ಡಾಕ್ಟರ್‌ಗಳು, ಎಂಜಿನಿಯರ್‌ಗಳು ಕೂಡ ಹೊರಬರಬೇಕು. ವಿದ್ಯಾರ್ಥಿಗಳಿಗೆ ಉದ್ಯೋಗ ಕೇಂದ್ರಿತ ಶಿಕ್ಷಣ ನೀಡುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಮದ್ರಸಾಗಳಲ್ಲಿ ಕಡ್ಡಾಯವಾಗಿ ಸ್ವಾತಂತ್ರ್ಯದಿನಾಚರಣೆ ನಡೆಸಿ, ವಿಡಿಯೋ ರೆಕಾರ್ಡ್‌ ಮಾಡುವಂತೆ ಸರಕಾರ ಸೂಚನೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next