Advertisement

‌ಬೀಡಾಡಿ ದನಗಳ ಸಾಕುವ ರೈತರಿಗೆ 900 ರೂ. ಸಹಾಯ ಧನ: ಉತ್ತರ ಪ್ರದೇಶ ಸಿಎಂ

10:46 PM Nov 22, 2020 | sudhir |

ಭೋಪಾಲ/ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರದ ತಾಂಡಾ ಫಾಲ್ಸ್‌ ಎಂಬಲ್ಲಿ ಗೋಪಾಷ್ಟಮಿ ಪ್ರಯುಕ್ತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗೋವುಗಳಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೀಡಾಡಿ ದನಗಳನ್ನು ಗೋ ಶಾಲೆಯಲ್ಲಿ ಇರಿಸಬೇಕು. ನಂತರ ಅವುಗಳನ್ನು ರೈತರಿಗೆ ಹಂಚುವ ವ್ಯವಸ್ಥೆಯಾಗಬೇಕು. ಬೀಡಾಡಿ ದನಗಳನ್ನು ಸಾಕುವ ಪ್ರತಿ ರೈತರಿಗೆ ಪ್ರತಿ ದನಕ್ಕೆ 900 ರೂ. ಸಿಗುವಂತಾಗಬೇಕು ಎಂದು ಹೇಳಿದ್ದಾರೆ.

Advertisement

ಮೊದಲ ಸಭೆ: ಮಧ್ಯಪ್ರದೇಶದಲ್ಲಿ ನೂತನವಾಗಿ ರಚಿಸಿರುವ ಗೋ ಸಂಪುಟ (ಕೌ ಕ್ಯಾಬಿನೆಟ್‌)ದ ಮೊದಲ ಸಭೆ ಭಾನುವಾರ ನಡೆಯಿತು. ಅಧಿಕೃತ ನಿವಾಸದಲ್ಲಿ ಆರಂಭದಲ್ಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಗೋವುಗಳಿಗೆ ಪತ್ನಿಸಮೇತರಾಗಿ ಪೂಜೆ ಸಲ್ಲಿಸಿದರು.

ಗೋಪಾಷ್ಟಮಿ ದಿನವೇ ಈ ಸಭೆ ನಡೆದಿರುವುದು ಮಹತ್ವ ಪಡೆದಿದೆ. ಪಶು ಸಂಗೋಪನೆ, ಅರಣ್ಯ, ಪಂಚಾಯಿತಿ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ ಮತ್ತು ರೈತರ ಕಲ್ಯಾಣ ಸಚಿವಾಲಯಗಳನ್ನು ಸೇರಿಸಿ ಗೋ ಸಂಪುಟವನ್ನು ಬುಧವಾರ ಸಿಎಂ ಚೌಹಾಣ್‌ ಘೋಷಿಸಿದ್ದರು. ಗ್ರಾಮೀಣ ಪ್ರದೇಶದ ಅರ್ಥ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಸರ್ಕಾರ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next