Advertisement
ಇದನ್ನೂ ಓದಿ:ಗೋವಾ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಪರ್ರಿಕರ್ ಪುತ್ರನಿಗೆ ಅಲ್ಪ ಅಂತರದ ಸೋಲು!
Related Articles
Advertisement
ಉತ್ತರಪ್ರದೇಶದಲ್ಲಿ ಈ ಹಿಂದೆ ನಾಲ್ವರು ಮುಖ್ಯಮಂತ್ರಿಗಳು ಮರಳಿ ಅಧಿಕಾರಕ್ಕೆ ಏರಿದ್ದರು. ಆದರೆ ಇದರಲ್ಲಿ ಯಾರೊಬ್ಬರೂ ಐದು ವರ್ಷಗಳ ಪೂರ್ಣಾವಧಿಗೊಳಿಸಿಲ್ಲ. ನಾರಾಯಣ ದತ್ತ ತಿವಾರಿ ಅವರು ಮೂರು ಬಾರಿ ಯುಪಿ ಮುಖ್ಯಮಂತ್ರಿಯಾಗಿದ್ದರು. ಎನ್ ಡಿ ತಿವಾರಿ 1976ರಿಂದ 77, 1984ರಿಂದ 85 ಹಾಗೂ 1988ರಿಂದ 1989ರಲ್ಲಿ ಮುಖ್ಯಮಂತ್ರಿಯಾಗಿದ್ದರು. ಆ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ 35 ವರ್ಷಗಳ ಬಳಿಕ ಐದು ವರ್ಷಗಳ ಪೂರ್ಣಾವಧಿ ನಂತರ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದಂತಾಗಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿಗಳಲ್ಲಿ ಸಂಪೂರ್ಣಾನಂದ 1957ರಲ್ಲಿ, ಚಂದ್ರಭಾನು ಗುಪ್ತಾ 1962 ಹಾಗೂ ರೀಟಾ ಬಹುಗುಣ ಜೋಶಿ 1974ರಲ್ಲಿ ಕ್ರಮವಾಗಿ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ದರು. ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತಂದ ಮೊದಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಉತ್ತರಪ್ರದೇಶದಲ್ಲಿ ಮೂವರು ಮುಖ್ಯಮಂತ್ರಿಗಳು ಮಾತ್ರ 5 ವರ್ಷಗಳ ಕಾಲ ಪೂರ್ಣಗೊಳಿಸಿದ್ದಾರೆ. ಅವರಲ್ಲಿ ಬಹುಜನ ಸಮಾಜ್ ಪಕ್ಷದ ಮಾಯಾವತಿ (2007-2012), ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ (2012-2017), ಯೋಗಿ ಆದಿತ್ಯನಾಥ್ (2017-2022).