Advertisement

ಸರ್ಕಾರಿ ಆಸ್ತಿ ಕಬಳಿಸಿದವರಿಗೆ ಆರತಿ ಎತ್ತಬೇಕೇ…: ಯೋಗಿ ಆದಿತ್ಯನಾಥ್ ಪ್ರಶ್ನೆ

12:56 PM Aug 01, 2023 | Team Udayavani |

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ರಾಜ್ಯದಲ್ಲಿ ಅಪರಾಧಿಗಳು ಮತ್ತು ಮಾಫಿಯಾ ವಿರುದ್ಧ ತಮ್ಮ ಸರ್ಕಾರದ ಬುಲ್ಡೋಜರ್ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅಭಿವೃದ್ಧಿಯ ಪಥಕ್ಕೆ ಯಾರಾದರೂ ಯಾವುದೇ ಅಡೆತಡೆಗಳನ್ನು ಉಂಟು ಮಾಡಿದರೆ, ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

Advertisement

ಸ್ಮಿತಾ ಪ್ರಕಾಶ್ ಅವರೊಂದಿಗೆ ಎಎನ್‌ ಐ ಪಾಡ್‌ ಕಾಸ್ಟ್‌ ನಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ರಾಜ್ಯದ ಅಭಿವೃದ್ಧಿಗೆ ಬುಲ್ಡೋಜರ್‌ ಗಳು ಮತ್ತು ಆಧುನಿಕ ಯಂತ್ರಗಳ ಅಗತ್ಯವಿದೆ ಎಂದು ಹೇಳಿದರು.

‘ಉತ್ತರ ಪ್ರದೇಶದಂತಹ ಬೃಹತ್ ರಾಜ್ಯ ಶೀಘ್ರ ಅಭಿವೃದ್ಧಿಯಾಗಬೇಕಾದರೆ ಇಂದಿನ ಕಾಲಘಟ್ಟದಲ್ಲಿ ಸಲಿಕೆ, ಗುದ್ದಲಿ ಬೇಕೇ? ಈ ಹಿಂದೆ ಯಾವುದಾದರೂ ಕಾಮಗಾರಿಗೆ ಅನುಮೋದನೆ ನೀಡಿದರೆ ಮಾಫಿಯಾಗಳು ಬಂದು ಅಕ್ರಮ ಆಸ್ತಿ ದೋಚುತ್ತಿದ್ದರು. ಹಿಂದಿನ ಸರಕಾರಗಳು ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯ ಮಾಡಲಿಲ್ಲ” ಅವರು ಹೇಳಿದರು.

ನಿಮ್ಮ ಸರ್ಕಾರವು ಬುಲ್ಡೋಜರ್‌ ಗಳಿಂದ ಅಪರಾಧಿಗಳ ಮನೆಗಳನ್ನು ಏಕೆ ಕೆಡವುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, “ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದವರಿಗೆ ನಾನು ಆರತಿ ಮಾಡಬೇಕೇ? ಉತ್ತರ ಪ್ರದೇಶದ ಜನರು ಅಪರಾಧಿಗಳು ಮತ್ತು ಮಾಫಿಯಾ ವಿರುದ್ಧ ಕ್ರಮವನ್ನು ಬಯಸುತ್ತಾರೆ” ಎಂದು ಉತ್ತರಿಸಿದರು.

ತಮ್ಮ ಸರ್ಕಾರವು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಅಪರಾಧಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು.

Advertisement

“ಒಬ್ಬ ಒಬ್ಬ ಅಮಾಯಕ ಮುಸ್ಲಿಮನು ಬಂದು ನನಗೆ ಅನ್ಯಾಯವನ್ನು ಎದುರಿಸುತ್ತಿದ್ದೇನೆ ಎಂದು ಹೇಳಲಿ ನೋಡುವ. ಅವರೆಲ್ಲರಿಗೂ ನ್ಯಾಯಾಲಯವಿದೆ.” ಎಂದು ಯೋಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next