Advertisement

ನಾಮಪತ್ರ ಸಲ್ಲಿಸಿದ ಸಿಎಂ ಆದಿತ್ಯನಾಥ್: ಯೋಗಿ ಬಳಿ ರಿವಾಲ್ವರ್, ರೈಫಲ್ ಇದೆ

05:23 PM Feb 04, 2022 | Team Udayavani |

ಗೋರಖ್‌ಪುರ : ಯುಪಿ ಸಿಎಂ ಯೋಗಿ ಆದಿತ್ಯನಾಥ್ ಶುಕ್ರವಾರ ಗೋರಖ್‌ಪುರ ನಗರದಿಂದ ನಾಮಪತ್ರ ಸಲ್ಲಿಸಿದರು.ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Advertisement

ಐದು ಅವಧಿಗೆ ಲೋಕಸಭೆಯಲ್ಲಿ ಗೋರಖ್‌ಪುರವನ್ನು ಪ್ರತಿನಿಧಿಸಿರುವ ಯೋಗಿ ಆದಿತ್ಯನಾಥ್ ವರು ವಿಧಾನಸಭಾ ಚುನಾವಣೆಗೆ ಇದೇ ಮೊದಲ ಬಾರಿ ಸ್ಪರ್ಧಿಸುತ್ತಿದ್ದಾರೆ. ಮಾರ್ಚ್ 3 ರಂದು ಯುಪಿ ಚುನಾವಣೆಯ ಆರನೇ ಹಂತದಲ್ಲಿ ಗೋರಖ್‌ಪುರ ನಗರ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.

ಆಸ್ತಿ ವಿವರ

ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಯೋಗಿ ಆದಿತ್ಯನಾಥ್ ಅವರು 1,54,94,054 ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಇದು ಕೈಯಲ್ಲಿರುವ ನಗದು, ಆರು ಬ್ಯಾಂಕ್ ಖಾತೆಗಳ ಬಾಕಿ ಮತ್ತು ಉಳಿತಾಯವನ್ನು ಒಳಗೊಂಡಿರುತ್ತದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅವರು 12,000 ರೂಪಾಯಿ ಮೌಲ್ಯದ ಸ್ಯಾಮ್‌ಸಂಗ್ ಮೊಬೈಲ್ ಫೋನ್, 1,00,000 ರೂಪಾಯಿ ಮೌಲ್ಯದ ರಿವಾಲ್ವರ್ ಮತ್ತು 80,000 ರೂಪಾಯಿ ಮೌಲ್ಯದ ರೈಫಲ್ ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ.

49,000 ರೂಪಾಯಿ ಮೌಲ್ಯದ 20 ಗ್ರಾಂ ತೂಕದ ಚಿನ್ನದ ಕಿವಿ ಆಭರಣ ಮತ್ತು 20,000 ರೂಪಾಯಿ ಮೌಲ್ಯದ 10 ಗ್ರಾಂ ತೂಕದ ಚಿನ್ನದ ಸರ ಮತ್ತು ರುದ್ರಾಕ್ಷ ಕತ್ತಿನ ಆಭರಣವನ್ನು ಹೊಂದಿದ್ದಾರೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.

Advertisement

ಯೋಗಿ ಆದಿತ್ಯನಾಥ್ ಅವರು ತಮ್ಮ ಅಫಿಡವಿಟ್‌ನಲ್ಲಿ 2020-21ರ ಹಣಕಾಸು ವರ್ಷದಲ್ಲಿ 13,20,653 ರೂ., 2019-20ನೇ ಸಾಲಿನಲ್ಲಿ 15,68,799 ರೂ. ಆದಾಯ, 2018-19ನೇ ಸಾಲಿನಲ್ಲಿ 18,27,639 ರೂ. ಮತ್ತು 2018-19ನೇ ಸಾಲಿನಲ್ಲಿ 18,27,639 ರೂ.ಗಳ ಆದಾಯವನ್ನು ಘೋಷಿಸಿದ್ದಾರೆ.

ಅವರ ಚುನಾವಣಾ ಅಫಿಡವಿಟ್ ಪ್ರಕಾರ ಯಾವುದೇ ಕೃಷಿ ಅಥವಾ ಕೃಷಿಯೇತರ ಆಸ್ತಿಯನ್ನು ಹೊಂದಿಲ್ಲ.ಅವರ ಹೆಸರಿನಲ್ಲಿ ಯಾವುದೇ ವಾಹನ ನೋಂದಣಿಯಾಗಿಲ್ಲ ಮತ್ತು ಅವರು ಯಾವುದೇ ಹೊಣೆಗಾರಿಕೆಗಳನ್ನು ಹೊಂದಿಲ್ಲ ಎಂದು ಹೇಳುತ್ತದೆ.

ಯೋಗಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next