Advertisement

ಅಯೋಧ್ಯೆ 2031 ಮಾಸ್ಟರ್ ಪ್ಲಾನ್ ಗೆ ಸಿಎಂ ಯೋಗಿ ಆದಿತ್ಯನಾಥ್ ಅನುಮೋದನೆ

04:27 PM Dec 11, 2022 | Team Udayavani |

ಲಕ್ನೋ : ಮುಂದಿನ ದಶಕದಲ್ಲಿ ಅಯೋಧ್ಯೆಯ ದೇಗುಲ ಪಟ್ಟಣವನ್ನು ಅಭಿವೃದ್ಧಿಪಡಿಸುವ ಮಾಸ್ಟರ್ ಪ್ಲಾನ್ ಅನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನುಮೋದಿಸಿದ್ದಾರೆ. ಈ ಪ್ಲಾನ್ 133.67 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಸುಮಾರು 12 ಲಕ್ಷ ಜನರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

Advertisement

ನಾಗರಿಕರಿಂದ ಬಂದ 1,084 ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿದ ನಂತರ ವಸತಿ ಮತ್ತು ನಗರ ಯೋಜನಾ ಇಲಾಖೆಯು ಮಾಸ್ಟರ್ ಪ್ಲಾನ್ 2031 ಅನ್ನು ಮುಖ್ಯಮಂತ್ರಿಗಳಿಗೆ ಮಂಡಿಸಿತು. ಇಲಾಖೆಯು ಮುಂಭಾಗದ ನಿಯಂತ್ರಣ ಮಾರ್ಗಸೂಚಿಗಳನ್ನು ಮತ್ತು ಸಾಮಾನ್ಯ ಕಟ್ಟಡ ಕೋಡ್ ಅನ್ನು ಅಂತಿಮಗೊಳಿಸಬೇಕಾಗಿತ್ತು.

ವಸತಿ ವಿಭಾಗದ ಪ್ರಧಾನ ಕಾರ್ಯದರ್ಶಿ ನಿತಿನ್ ರಮೇಶ್ ಗೋಕರ್ಣ ಮಾತನಾಡಿ, ನಗರದ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸಲು ಅಯೋಧ್ಯೆ ಮಾಸ್ಟರ್ ಪ್ಲಾನ್‌ಗೆ ಶೀಘ್ರವಾಗಿ ಅನುಮೋದನೆ ನೀಡಲಾಗಿದೆ. ಫೈಜಾಬಾದ್/ಅಯೋಧ್ಯೆಯ ಅಭಿವೃದ್ಧಿಗೆ ಕೊನೆಯ ಮಾಸ್ಟರ್ ಪ್ಲಾನ್ ಅನ್ನು 1983 ರಲ್ಲಿ ಸಿದ್ಧಪಡಿಸಲಾಯಿತು ಮತ್ತು 2001 ರಲ್ಲಿ ಅವಧಿ ಮುಕ್ತಾಯವಾಗಿತ್ತು.

ಯೋಗಿ ಸರಕರವು ಇತರ ನಗರಗಳಿಗಿಂತ ಮೊದಲು ಅಯೋಧ್ಯೆ 2031 ಮಾಸ್ಟರ್ ಪ್ಲಾನ್ ಅನ್ನು ಅನುಮೋದಿಸಿದೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ (ಎಡಿಎ) ಉಪಾಧ್ಯಕ್ಷ ವಿಶಾಲ್ ಸಿಂಗ್ ಮಾತನಾಡಿ, ‘ಶೀಘ್ರದಲ್ಲೇ ನಗರದಲ್ಲಿ ಯೋಜನೆ ಜಾರಿಯಾಗಲಿದ್ದು, ವಲಯ ನಿಯಮಾವಳಿಗಳನ್ನು ಪ್ರಾಧಿಕಾರವು ಮೊದಲು ಕೈಗೆತ್ತಿಕೊಳ್ಳಲಿದೆ’ ಎಂದರು.

ನಗರದಲ್ಲಿ ಸುಮಾರು 4,295 ಮನೆಗಳನ್ನು ಹೊಂದಿರುವ ಏಳು ಕೊಳೆಗೇರಿ ಬಡಾವಣೆಗಳನ್ನು ಪರಿವರ್ತಿಸಲು ಗಮನಹರಿಸುವ ಅಗತ್ಯವಿದೆ ಎಂದು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ ತಜ್ಞರು ತಿಳಿಸಿದ್ದಾರೆ.

Advertisement

ವಾರ್ಷಿಕವಾಗಿ ಎರಡು ಕೋಟಿಗೂ ಹೆಚ್ಚು ಪ್ರವಾಸಿಗರು ನಗರಕ್ಕೆ ಭೇಟಿ ನೀಡುವುದರಿಂದ, ನಿವಾಸಿಗಳಿಗೆ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲು ಮತ್ತು ಆದಾಯವನ್ನು ಗಳಿಸಲು ದೀರ್ಘಾವಧಿಯ ಪ್ರವಾಸೋದ್ಯಮ ಯೋಜನೆಯಲ್ಲಿ ಕೆಲಸ ಮಾಡಲು ತಜ್ಞರು ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. 2031 ರ ವೇಳೆಗೆ ವಾರ್ಷಿಕವಾಗಿ ನಾಲ್ಕು ಕೋಟಿಗೂ ಹೆಚ್ಚು ಪ್ರವಾಸಿಗರು ನಗರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next