ಹೊಸದಿಲ್ಲಿ: “ಪದ್ಮಾವತಿ’ ಸಿನಿಮಾ ವಿವಾದ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಸಿನಿಮಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ. ಸಿನಿಮಾ ನಟ- ನಟಿಯರಿಗೆ ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಾದರೆ ಬನ್ಸಾಲಿ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತದೆ. ಜನರ ಭಾವನೆಗಳ ಜೊತೆ ಆಟವಾಡುವುದು ಬನ್ಸಾಲಿಗೆ ಅಭ್ಯಾಸವಾಗಿಬಿಟ್ಟಿದೆ ಎಂದಿದ್ದಾರೆ ಯೋಗಿ.
ಏತನ್ಮಧ್ಯೆ, ದೀಪಿಕಾಳ ತಲೆ ಕಡಿದವರಿಗೆ 10 ಕೋಟಿ ರೂ. ಬಹುಮಾನ ಘೋಷಿ ಸಿದ್ದ ಬಿಜೆಪಿ ನಾಯಕ ಸೂರಜ್ ಪಾಲ್ ಮತ್ತೆ ನಟಿಗೆ ಬೆದರಿಕೆ ಹಾಕಿದ್ದಾರೆ. “ಪದ್ಮಾವತಿ ಸಿನಿಮಾ ಯಾವ ಥಿಯೇಟರ್‌ನಲ್ಲಿ ಬಿಡುಗಡೆ ಯಾಗುತ್ತದೋ, ಆ
ಎಲ್ಲಾ ಥಿಯೇಟರ್‌ಗಳಿಗೂ ಬೆಂಕಿ ಹಚ್ಚಿ’ ಎಂದಿದ್ದಾರೆ.
ಇತಿಹಾಸಕಾರರ ಮೊರೆ: ಇದೇ ವೇಳೆ, ಸಿನಿಮಾದ ಬಿಡುಗಡೆ ಕೂಡ ಇನ್ನಷ್ಟು ವಿಳಂಬವಾಗುವ ಲಕ್ಷಣ ಗೋಚ ರಿಸು ತ್ತಿದೆ. ಸಿನಿಮಾದಲ್ಲಿ ವಿವಾ ದಾತ್ಮಕ ಅಂಶಗಳಿ ರುವ ಆರೋಪದ ಹಿನ್ನೆಲೆಯಲ್ಲಿ ಇತಿಹಾಸಕಾರರ ಸಲಹೆ ಪಡೆಯಲು ಸಿಬಿಎಫ್ಸಿ ಮುಂದಾಗಿದೆ. ಹೀಗಾಗಿ, ಇತಿಹಾಸಕಾರರೊಂದಿಗೆ ಸಮಾ ಲೋಚನೆ ನಡೆಸಿದ ಬಳಿಕವೇ ಪ್ರಮಾಣಪತ್ರ ಸಿಗಲಿದ್ದು, ಸಿನಿಮಾ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ ಎಂದು ಸಿಬಿಎಫ್ಸಿ ಮೂಲಗಳೇ ತಿಳಿಸಿವೆ.
ಇದಕ್ಕೆ ಪೂರಕವೆಂಬಂತೆ, ಸಿಬಿಎಫ್ಸಿ ಪ್ರಮಾಣ ಪತ್ರ ದೊರೆತ ಬಳಿಕವೇ ಬಿಡುಗಡೆ ಕುರಿತು ನಿರ್ಧರಿಸ ಲಾಗು ವುದು ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಹೇಳಿದೆ. ಇನ್ನೊಂದೆಡೆ, ಪ್ರಚಾರ ಕಾರ್ಯ ಸ್ಥಗಿತ ಗೊಳಿಸಲಾಗಿದ್ದು, ಬಿಡುಗಡೆ ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸದ್ಯಕ್ಕೆ ಏನನ್ನೂ ಹೇಳಬಾರದು ಎಂದು ನನಗೆ ಸೂಚನೆ ಬಂದಿದೆ. ಆದರೆ, ಒಂದಂತೂ ಸತ್ಯ. ನಾನು ಪದ್ಮಾವತಿ ಸಿನಿಮಾ ಮತ್ತು ನಿರ್ದೇಶಕ ಬನ್ಸಾಲಿ ಅವರಿಗೆ ಶೇ.200ರಷ್ಟು ಬೆಂಬಲ ನೀಡುತ್ತೇನೆ.
– ರಣವೀರ್ ಸಿಂಗ್, ನಟ
ನನಗೆ ದೀಪಿಕಾಳ ತಲೆ ಉಳಿಯಬೇಕು ಅಷ್ಟೆ. ಆಕೆಯ ದೇಹಕ್ಕಿಂತ ತಲೆಯನ್ನೇ ನಾನು ಹೆಚ್ಚು ಗೌರವಿಸುತ್ತೇನೆ. ಯಾವುದೇ ವಿಚಾರದಲ್ಲೂ ತೀವ್ರಗಾಮಿತ್ವ ಒಳ್ಳೆಯದಲ್ಲ. ಭಾರತ ಯೋಚಿಸಬೇಕಿದೆ.
– ಕಮಲ್ ಹಾಸನ್, ನಟ