ಗಂಗಾವತಿ : ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ ಅಗಸ್ಟ್ ಮೊದಲವಾರದಲ್ಲಿ ಆಯೋಜನೆ ಮಾಡಿರುವ ವಿಶ್ವ ಸಾಧು ಸಂತ ಸಮ್ಮೇಳನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಆರಾಧನಾ ಮಿಶ್ರ ಮೋಹನ್, ಪ್ರಮೋದ್ ತಿವಾರಿ ಆಗಮಿಸಲಿದ್ದಾರೆಂದು ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಉದಯವಾಣಿ ತಿಳಿಸಿದ್ದಾರೆ .
ಅವರು ಮಾತನಾಡಿ ಈಗಾಗಲೇ ವಿಶ್ವ ಸಾಧುಸಂತರ ಸಮ್ಮೇಳನಕ್ಕೆ ಕಿಷ್ಕಿಂದಾ ಅಂಜನಾದ್ರಿ ಯಲ್ಲಿ ಪೂರ್ವಭಾವಿ ಸಿದ್ಧತಾ ಕಾರ್ಯಗಳು ಭರದಿಂದ ನಡೆದಿದ್ದು ಬಿಜೆಪಿ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಮುಖ ಸಚಿವರು ಸೇರಿದಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಂಜನಾದ್ರಿಯಲ್ಲಿ ಸಾಧುಸಂತರ ಸಮ್ಮೇಳನಕ್ಕೆ ಚಾಲನೆ ನೀಡಿದ್ದು ಸನಾತನ ಹಿಂದೂ ಧರ್ಮ ಮತ್ತು ಕಿಷ್ಕಿಂದಾ ಅಂಜನಾದ್ರಿ ಕ್ಷೇತ್ರದ ಕುರಿತು ವಿಶೇಷವಾಗಿ 3 ದಿನಗಳ ಕಾಲ ಚಿಂತನ ಮಂಥನ ಸಭೆ ಜರುಗಲಿದೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ರಾಜ್ಯಪಾಲರು ಸಚಿವರು ಮತ್ತು ಹಿಂದೂ ಸಮಾಜದ ವಿವಿಧ ಮಠಾಧೀಶರು ವಿಶ್ವದ ನಾನಾ ಕಡೆಯಿಂದ ಸಾಧುಸಂತರು ಆಗಮಿಸಲಿದ್ದಾರೆ .ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಟ್ಟ ಪ್ರಮುಖ ರಾಜಕೀಯ ಮುಖಂಡರನ್ನು ಈ ಸಮ್ಮೇಳನಕ್ಕೆ ಆಗಮಿಸಲು ಆಗುತ್ತದೆ. ಅದರಂತೆ ಹಿಂದೂಧರ್ಮದ ಏಳ್ಗೆ ಮತ್ತು ಸಾಧಕ ಬಾಧಕಗಳ ಬಗ್ಗೆ ಸಾಧು ಸಂತರ ಚಿಂತನಾ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಮಹಾಂತ ವಿದ್ಯಾದಾಸ ಬಾಬಾ ತಿಳಿಸಿದ್ದಾರೆ.
ಇದನ್ನೂ ಓದಿ : ಅನ್ಯಧರ್ಮದಲ್ಲಿ ಜನಿಸಿದ್ದರೆ ಬಸವಣ್ಣ ವಿಶ್ವಖ್ಯಾತಿ ಪಡೆಯುತ್ತಿದ್ದ: ಶಿವಾನಂದ ಪಾಟೀಲ