Advertisement

ಜನಸಂಖ್ಯೆ ಹೆಚ್ಚಳವು ದೇಶದ ಅಭಿವೃದ್ಧಿಗೆ ಮಾರಕ, ನಿಯಂತ್ರಿಸಬೇಕಾದ ಅಗತ್ಯವಿದೆ : ಯೋಗಿ

08:15 PM Jul 11, 2021 | Team Udayavani |

ಲಕ್ನೋ: “ಜನಸಂಖ್ಯೆಯ ಹೆಚ್ಚಳವು ಅಭಿವೃದ್ಧಿಗೆ ಮಾರಕವಾಗಿದ್ದು, ಅದನ್ನು ನಿಯಂತ್ರಿಸಬೇಕಾದ ಅಗತ್ಯವಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

Advertisement

ವಿಶ್ವ ಜನಸಂಖ್ಯಾ ದಿನವಾದ ಭಾನುವಾರ ಲಕ್ನೋದಲ್ಲಿ “ಉತ್ತರ ಪ್ರದೇಶ ಜನಸಂಖ್ಯಾ ನೀತಿ 2021-2030′ ಅನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದ್ದಾರೆ.

ಜನಸಂಖ್ಯೆಯ ಹೆಚ್ಚಳವು ಪ್ರಗತಿಗೆ ಅಡ್ಡಿಯಾಗುತ್ತಲೇ ಇದೆ. ಕಳೆದ 4 ದಶಕಗಳಿಂದಲೂ ಈ ಬಗ್ಗೆ ಚರ್ಚಿಸಲಾಗುತ್ತಿದೆ. ಸಮಾಜದ ಎಲ್ಲ ವರ್ಗಗಳನ್ನೂ ಗಮನದಲ್ಲಿ ಇರಿಸಿಕೊಂಡು ನಮ್ಮ ಸರ್ಕಾರ ಈ ನೀತಿ ಜಾರಿ ಮಾಡುತ್ತಿದೆ. ರಾಜ್ಯದ ಜನಸಂಖ್ಯೆಯಲ್ಲಿ ನಿಯಂತ್ರಣ ಹಾಗೂ ಸ್ಥಿರತೆ ತಂದು, ಆ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಜತೆಗೆ, 2026ರ ವೇಳೆಗೆ ರಾಜ್ಯದಲ್ಲಿ ಜನನ ಪ್ರಮಾಣವನ್ನು 2.1ಕ್ಕಿಳಿಸುವುದು ನಮ್ಮ ಗುರಿ ಎಂದೂ ಹೇಳಿದ್ದಾರೆ.

ಇದನ್ನೂ ಓದಿ :ಸೆಪ್ಪೆಂಬರ್ ಹೊತ್ತಿಗೆ ಕೋವಿಡ್ ಲಸಿಕೆ ಹಾಕಿಸಿ 3ನೇ ಅಲೆ ತಡೆಗಟ್ಟಿ: ಸುರೇಶ್ ಕುಮಾರ್

Advertisement

ಇದೇ ವೇಳೆ, ಹೊಸ ಜನಸಂಖ್ಯಾ ಕರಡು ನೀತಿಗೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ಕಾಂಗ್ರೆಸ್‌, “ಇದೊಂದು ರಾಜಕೀಯ ಅಜೆಂಡಾ’ ಎಂದು ಕರೆದರೆ, ಸಮಾಜವಾದಿ ಪಕ್ಷವು ಈ ನೀತಿಯನ್ನು “ಪ್ರಜಾಸತ್ತೆಯ ಕಗ್ಗೊಲೆ’ ಎಂದು ಬಣ್ಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next