Advertisement

ಹೆಣ್ಣುಮಕ್ಕಳನ್ನು ಗೌರವಿಸದಿದ್ದರೆ “ರಾಮ್‌ ನಾಮ್‌ ಸತ್ಯ ಹೇ’ಪ್ರಯಾಣ ಆರಂಭ!

01:47 AM Nov 01, 2020 | sudhir |

ಜೌನ್‌ಪುರ: ಲವ್‌ ಜೆಹಾದ್‌ ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿ ನಮ್ಮ ಸರ್ಕಾರವು ಕಠಿನ ಕಾನೂನನ್ನು ಜಾರಿಗೆ ತರಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶನಿವಾರ ಹೇಳಿದ್ದಾರೆ.

Advertisement

ಜತೆಗೆ, “ಹೆಣ್ಣು ಮಕ್ಕಳಿಗೆ ಗೌರವ ನೀಡದೇ ಇದ್ದರೆ ನಿಮ್ಮ ರಾಮ್‌ ನಾಮ್‌ ಸತ್ಯ ಹೇ… ಪ್ರಯಾಣ ಆರಂಭವಾಗಲಿದೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.

ಕೇವಲ ಮದುವೆಯಾಗುವ ಉದ್ದೇಶಕ್ಕಾಗಿ ಮತಾಂತರಗೊಳ್ಳುವುದನ್ನು ಒಪ್ಪಲಾಗದು ಎಂಬ ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಪ್ರಸ್ತಾಪಿಸಿದ ಸಿಎಂ ಯೋಗಿ, ಲವ್‌ ಜಿಹಾದ್‌ನಲ್ಲಿ ಭಾಗಿಯಾದವರ ಪೋಸ್ಟರ್‌ಗಳನ್ನು ಎಲ್ಲೆಲ್ಲೂ ಅಂಟಿಸಲಾಗುವುದು. ಪರಿಣಾಮಕಾರಿ ಕಾನೂನು ಜಾರಿ ಮಾಡಲಾಗುವುದು ಎಂದಿದ್ದಾರೆ.

ಯಾರು ತಮ್ಮ ನೈಜ ಹೆಸರು, ಗುರುತನ್ನು ಮರೆಮಾಚಿ ಹೆಣ್ಣುಮಕ್ಕಳ ಘನತೆಯೊಂದಿಗೆ ಆಟವಾಡುತ್ತಾರೋ, ಅಂಥವರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ ಎಂದೂ ಯೋಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next