Advertisement

ಅಂಜನಾದ್ರಿಯಲ್ಲಿ ವಚನಾನಂದಸ್ವಾಮೀಜಿ ನೇತೃತ್ವದಲ್ಲಿ ಯೋಗಾಸನ ಪ್ರದರ್ಶನ

12:00 PM Apr 16, 2022 | Team Udayavani |

ಗಂಗಾವತಿ: ಹನುಮಜಯಂತಿ ನಿಮಿತ್ತ ಅಂಜನಾದ್ರಿಯಲ್ಲಿ ಹರಿಹರದ ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ 500 ಕ್ಕೂ ಹೆಚ್ಚು ಯೋಗಪಟುಗಳು ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶನ ಮಾಡಿದರು.

Advertisement

ಈ ಸಂದರ್ಭದಲ್ಲಿ ಪೂಜ್ಯ ವಚನಾನಂದ ಸ್ವಾಮೀಜಿ ಮಾತನಾಡಿ, ಹೆಚ್ಚಾಗಿ ಹನುಮಮಾಲೆಯನ್ನು ಯುವಕರು ಧರಿಸಿ ಒಂದು ಪಯಾಂತರ ನೇಮ ನಿತ್ಯಗಳನ್ನು ಆಚರಣೆ ಮಾಡಿ ದುಶ್ಚಟಗಳನ್ನು ತ್ಯಜಿಸುತ್ತಾರೆ. ಜತೆಗೆ ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಸದೃಢ ದೇಹ ಮನಸ್ಸು ಹೊಂದಲು ಸಾಧ್ಯವಾಗುತ್ತದೆ. ಹರಿಹರ ಮಠದಿಂದ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಯೋಗಾಸನ ಪ್ರದರ್ಶನ ಮಾಡುವ ಮೂಲಕ ಯೋಗವನ್ನು ಇನ್ನಷ್ಟು ಜನಪ್ರಿಯ ಮಾಡುವ ಯೋಜನೆ ಇದೆ. ಅಂಜನಾದ್ರಿ ಹಿಂದೂಗಳ ಶಕ್ತಿಕೇಂದ್ರವಾಗಿದ್ದು ಹನುಮ ಜಯಂತಿಯಂದು ಇಲ್ಲಿ ಯೋಗಾಸನ ಮಾಡುತ್ತಿರುವುದು ಪ್ರತಿಯೊಬ್ಬರಿಗೂ ಖುಷಿ ಕೊಡುವ ವಿಷಯವಾಗಿದೆ. ಹನುಮ ಭಕ್ತರು ಪ್ರತಿ ನಿತ್ಯವೂ ಯೋಗಾಸನ ಮಾಡಿ ವಜ್ರದೇಹಿಗಳಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪತಂಜಲಿ ಯೋಗ ಧ್ಯಾನ ಕೇಂದ್ರದ ರಾಷ್ಟ್ರೀಯ ಮುಖಂಡ ಭವರಲಾಲ್ ಆರ್ಯ, ಕೇಂದ್ರ ಸಚಿವ ಭಗವಂತ ಖೂಭಾ ಸೇರಿ ಗಂಗಾವತಿಯ ಯೋಗ ಮತ್ತು ಧ್ಯಾನ ಸಂಸ್ಥೆಗಳ ಕಾರ್ಯಕರ್ತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next