Advertisement

ಮೂಡುಬಿದಿರೆ ಶ್ರೀ ಜೈನಮಠ ಸ್ವಾಮೀಜಿಯವರಿಂದ ಯೋಗಾಸನ

11:05 PM Jun 21, 2020 | Sriram |

ಮೂಡುಬಿದಿರೆ: ಶ್ರೀ ಜೈನಮಠದಲ್ಲಿ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ರವಿವಾರ ಪ್ರಾತಃಕಾಲ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸ್ವಾಮೀಜಿಯವರು ವಜ್ರಾಸನ, ತಾಡಾಸನ, ವೃಕ್ಷಾಸನ (ವೃಕ್ಷದ ಭಂಗಿ), ತ್ರಿಕೋನಾಸನ, ಉತ್ಕಟಾಸನ, ಧನುರಾಸನ, ಭುಜಂಗಾಸನ, ಸೇತು-ಬಂಧಾಸನ, ಸರ್ವಾಂಗಾಸನ, ದಂಡಾಸನ, ಶವಾಸನ ಹಾಗೂ ಯೋಗಾಸನಗಳಲ್ಲೇ ವಿಶಿಷ್ಟವಾದ ಶೀರ್ಷಾಸನಗೈದರು.

Advertisement

ಕೋವಿಡ್‌-19 ನಿಮಿತ್ತ ಈ ಕಾರ್ಯಕ್ರಮದಲ್ಲಿ ಶ್ರೀ ಮಠದ ಸಿಬಂದಿಗಳಾದ ಸುಧಾಕರ್‌, ರತ್ನಕುಮಾರ್‌, ನೇಮಿರಾಜ್‌ ಉಪಸ್ಥಿತರಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next