Advertisement

ಯೋಗಗಳು ಯಾಕೆ ಕೈಕೊಡುತ್ತವೆ ಗೊತ್ತಾ?

07:10 AM Nov 26, 2016 | |

ಯೋಗಗಳು ಎಂದರೆ ಅನೇಕ ಗ್ರಹಗಳು ಬೇರೆ ಬೇರೆ ಕಾರಣಗಳಿಂದಾಗಿ ಒಂದೇ ಮನೆ ಅಥವಾ ಒಂದೇ ಒಂದನ್ನು ಸುಸಂಬದ್ಧವಾಗಿ ಒಬ್ಬ ವ್ಯಕ್ತಿಗೆ ಒದಗಿಸಿಕೊಡಲು ಒಂದು ಸಂಪನ್ನ ಪ್ರಮಾಣದಲ್ಲಿ ತಮ್ಮ ಸಂಬಂಧಗಳನ್ನು ಒಂದು ಶಿಷ್ಟ ಶಕ್ತಿಯನ್ನಾಗಿ ರೂಪಿಸಿಕೊಳ್ಳಲು ಸಾಧ್ಯವಾದಾಗ, ಪರಿಣಾಮಕಾರಿಯಾದ ಸಕಾರಾತ್ಮಕ ಸ್ಪಂದನಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾದಾಗ, ಒಳಿತನ್ನು ಮಾಡಿಕೊಡುವ ಒಳಾಂತರ್ಗತ ಶಕ್ತಿಯನ್ನು ಒಂದು ದಶಾಕಾಲದ ಅಥವಾ ದಶಾಕಾಲದ ಭುಕ್ತಿಯಲ್ಲಿ ಕಾಲಘಟ್ಟ ಹೊರಹೊಮ್ಮಿಸಲು ಸಾಧ್ಯವಾದಾಗ, ಬದುಕಿನ ಗೆಲುವಿಗೆ, ಕೀರ್ತಿಗೆ, ಧನಸಂಚಯನಕ್ಕೆ ಇಷ್ಟಾರ್ಥ ಸಿದ್ಧಿಗೆ ದಾರಿ ಮಾಡಿಕೊಡುತ್ತದೆ. ಸಹಜವಾಗಿಯೇ ಆ ವ್ಯಕ್ತಿಯ ಜೀವನದಲ್ಲಿ ಸಂತೋಷ ಸಾಮಾನ್ಯ.

Advertisement

ಮೇಲೆ ಹೇಳಿದ ಯೋಗಗಳ ಹಾಗೆಯೇ ನಕಾರಾತ್ಮಕ ಸಿದ್ಧಿಗೆ ಕಾರಣವಾಗುವ ಹಾಗೆ ಸೂಕ್ತವಲ್ಲದ ಕಾರಣಗಳಿಂದಾಗಿ ಸೂಕ್ತವಲ್ಲದ ಗ್ರಹಗಳು ಒಬ್ಬ ವ್ಯಕ್ತಿಯ ಜಾತಕ ಕುಂಡಲಿಯಲ್ಲಿ ಕೆಟ್ಟ ಯೋಗಗಳನ್ನು ಹರಳುಗಟ್ಟಿಸುತ್ತದೆ. ಕಾರಾಗೃಹ ಯೋಗ, ಧನನಾಶ, ಕೇಮದ್ರುಮ ಕಾಳಸರ್ಪ ಯೋಗ, ಅಂಗಛೇದನ ಅರಿಷ್ಟಾರಿಷ್ಟ ಸಂತಾನ ನಾಶ, ಕುಲನಾಶ ದುರ್ಮರಣ ಯೋಗ ಇತ್ಯಾದಿ. ಆದರೆ ಯೋಗಗಳು ಒಳ್ಳೆಯದಿರಲಿ ಕೆಟ್ಟದ್ದೇ ಇರಲಿ ಅವು ಸಂಭವಿಸಿ ಆ ಯೋಗಗಳು ಕೂಡಿಬರುವ ಗ್ರಹಗಳು ತಂತಮ್ಮ ಕೆಲಸಗಳನ್ನು ಸದ್ದಿರದೆ ಮಾಡಿ ಮುಗಿಸುತ್ತದೆ. ಹೀಗೆ ಯೋಗ ಎಂದರೆ ಒಟ್ಟಿನಲ್ಲಿ ಹೊಂದಿಕೆ ಅಥವಾ ಕೂಡಿ ಬರುವುದು ಅದೃಷ್ಟ ಪ್ರಾಪ್ತಿ ಸಕಾರಾತ್ಮಕ ಯಾ ನಕಾರಾತ್ಮಕ ಯೋಜನೆ ಎಂದರ್ಥ.

ಯೋಗಗಳು ಏಕೆ ಕೈ ಕೊಡುತ್ತದೆ
ಇಂಥದೊಂದು ಯೋಗವಿದೆ ಎಂದು ಜೋತಿಷ್ಯ ಹೇಳಿದಾಗಲೂ ಯೋಗಗಳು ಸಂಭವಿಸಿಲ್ಲ ಎಂದು ಗೊಣಗುವುದನ್ನು ನಾವು ಕೇಳುತ್ತಿರುತ್ತೇವೆ. ಯೋಗಗಳೇ ಇರದವರು ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸುತ್ತಿರುತ್ತಾರೆ. ಕೆಲವರು ಒಳ್ಳೆಯ ಧನಯೋಗ ಇದ್ದರೂ ದರಿದ್ರಗಳಾಗಿ ಕಾಣಿಸಿಕೊಳ್ಳುತ್ತಾರೆ. ಒಳ್ಳೆಯದನ್ನು ಕಂಡು ಕೆಟ್ಟದ್ದಕ್ಕೆ ತಲುಪಿ ದಿವಾಳಿಯಾಗಿ ತಲೆಮರೆಸಿಕೊಂಡರಿದ್ದಾರೆ. ಕೆಟ್ಟದ್ದನ್ನು ಅನುಭಸುತ್ತಿದ್ದಾಗಲೇ ಸರ್ರನೆ ಒಳಿತಿಗೆ ದಾರಿ ಮಾಡಿಕೊಡುವ ಅದೃಷ್ಟ ಒದಗಿ ಅದ್ಭುತ ಯಶಸ್ಸಿಗೆ ಬಂದು ತಲುಪುತ್ತಾರೆ. ಜೀವನಪರ್ಯಂತ ಸುಖ ಕಾಣದೆ ಅಷ್ಟದರಿದ್ರಗಳಾಗಿರುತ್ತಾರೆ. ಸುಖ ಇದೆ ಎಂಬುದನ್ನು ತೋರಿಸುವವರಿರುತ್ತಾರೆ. ಸುಖವಿದ್ದರೂ ಕಷ್ಟ ಕಷ್ಟ ಎಂದು ಅಳುವವರೂ ಇರುತ್ತಾರೆ. ಅದ್ಭುತ ಅದೃಷ್ಟಗಳನ್ನು ಒಂದು ಯೋಗದ ಕಾರಣದಿಂದ ಪಡೆಯುವಲ್ಲಿ ಆ ಅದೃಷ್ಟ ಕೊಡಬೇಕಾದ ಶಕ್ತಿಯನ್ನು ಸೂಕ್ತವಾಗಿ ಪಡೆಯದೇ ದುರ್ಬಲತೆಯನ್ನು ಪಡೆದಿದ್ದರೆ ಯೋಗಗಳಿದ್ದೂ ವಿಫ‌ಲರಲಾರದು. ಆಗ ಕೈಕೊಡುತ್ತದೆ. ನಮ್ಮ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯರ ಜಾತಕ ಪರಿಶೀಲನೆ ಮಾಡಿದಾಗ ರಾಜಯೋಗಗಳಿದ್ದೂ ಅವು ಕೈಕೊಡುವ ವಿಧಾನಗಳನ್ನು ಗಮನಿಸಬಹದು. ರಾಮಕೃಷ್ಣ ಹೆಗಡೆ, ಲಾಲ ಕೃಷ್ಣ ಆಡ್ವಾಣಿ, ಸಿನಿಮಾ ರಂಗದ ಮೀನಾಕುಮಾರಿ, ರಾಜ್‌ಕಪೂರ್‌, ಕ್ರಿಕೆಟ್‌ನ ವಿನೋದ್‌ ಕಾಂಬ್ಳಿ, ಬಿ.ಎಸ್‌. ಚಂದ್ರಶೇಖರ್‌, ಇ.ಎ.ಎಸ್‌. ಪ್ರಸನ್ನ, ಶಿವಲಾಲ್‌ ಯಾದವ್‌, ಇಂದಿರಾ ಗಾಂಧಿ, ಸಂಜಯ್‌ ಗಾಂಧಿ, ರಾಜೀವ್‌ ಗಾಂಧಿ, ರಾಹುಲ್‌ಗಾಂಧಿ, ಎನ್‌ ಟಿ ರಾಮರಾವ್‌ ಮುಂತಾದವರು ತಲುಪಬೇಕಾದ  ಶಿಖರಗಳು ಬಹಳವೇ ಇದ್ದವು. ಬದುಕಿನ ಬಹುಮುಖ್ಯ ಘಟ್ಟಗಳಲ್ಲಿ ತೊಳಲಾಟಗಳನ್ನು ನಡೆಸಿದವರ ಪಟ್ಟಿಯಲ್ಲಿ ಈ ಹೆಸರುಗಳೆಲ್ಲ ಬರುತ್ತವೆ. ಪ್ರತಿ ವ್ಯಕ್ತಿಯ ಬಗೆಗೆ ಬರೆಯುವಾಗಲೂ ಒಂದು ಹೊತ್ತಗೆಯನ್ನೇ ಬರೆಯಬಹುದು. ಇಂದಿರಾ ಗಾಂಧಿಯವರಿಗೆ ತುರ್ತು ಪರಿಸ್ಥಿತಿ ಹೇರಲು ಮನಸ್ಸಿರಲಿಲ್ಲ ಎಂದರೆ ನಂಬುತ್ತೀರಾ? ಅವರು ತುರ್ತು ಪರಿಸ್ಥಿತಿ ಹೇರಿದ್ದೇ ಕಾರಣವಾಗಿ ಎಷ್ಟೆಲ್ಲಾ ಅನಾಮಧೇಯರು ಮುಂದಾಳಾದರು? ಆ ಮುಂದಾಳುಗಳಲ್ಲಿ ಬಹುತೇಕ ಜನ ಈಗ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. 

ಮೊರಾರ್ಜಿಯವರಿಗೆ ಕೈಕೊಟ್ಟ ಯೋಗಗಳು
 ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಆಡಳಿತದ ಆಳ ಅಗಲಗಳ ಹಿಡಿತ ಹಾಗೂ ಚಾಣಾಕ್ಷತೆ ದಕ್ಷತೆ ನಿಷ್ಟುರತೆ ಇತ್ಯಾದಿಗಳನ್ನು ಗಮನಿಸುವುದಾದರೆ ನೆಹರು ನಂತರ ಪ್ರಧಾನಿಯಾಗಿ ಇವರು ದೇಶವನ್ನು ಮುನ್ನೆಡಸಬೇಕಿತ್ತು. ಆದರೆ ಇವರ ನಿಷ್ಟುರತೆ ಮರಣ ಸ್ಥಾನದಲ್ಲಿ ಇವರ ಲಗ್ನಾಧಿಪತಿಯ ಉಪಸ್ಥಿತಿ ಇವರು ಸದಾ ವಿರೋಧಿಗಳನ್ನು ಸೃಷ್ಟಿಸಿಕೊಂಡರು. ವಿರೋಧಿಗಳು ಇವರ ಕಾಲೆಳೆದರು. ಪ್ರಧಾನಿ ಪಟ್ಟ ಕೈ ತಪ್ಪುತ್ತಲೇ ಇತ್ತು. ಉತ್ತಮವಾದ ರಾಜಯೋಗ, ಪರಿವರ್ತನಾಯೋಗ ದುಃಸ್ಥಾನಗಳಲ್ಲಿ ಇದ್ದುದರಿಂದ ಎಲ್ಲಾ ಯೋಗ್ಯತೆ ಇದ್ದರು ಪ್ರಧಾನಿ ಪಟ್ಟ ಕೈತಪ್ಪುತ್ತಾ ಇಂದಿರಾ ಪ್ರಭಾವದ ಎದುರು ಒಂದರ್ಥದಲ್ಲಿ ಮುರಾರ್ಜಿ ಕಸದ ಬುಟ್ಟಿಗೇ ಎಸೆಯಲ್ಪಟ್ಟಂತೆ ದುರ್ಬಲರಾಗಿ ಹೋದರು. ಇವರ ಧೈರ್ಯ ಮುಖಕ್ಕೆ ಹೊಡೆಯುವಂತೆ ಮಾತಾಡುವ ಶಕ್ತಿ ಭ್ರಷ್ಟರನ್ನು ಮಟ್ಟಹಾಕಬೇಕೆಂಬ ಬಲವಾದ ಇಚ್ಛೆ ಇವರ ಪಾಲಿಗೆ ಮಿತ್ರರಿಗಿಂತ ಶತೃಗಳು ಜಾಸ್ತಿಯಾಗಿ ಅಪ್ರಸ್ತುತರಾದರು. ಆದರೆ ಅವರ ವಿಧಿ ಅವರನ್ನು ದೀರ್ಘಾಯುಗಳನ್ನಾಗಿಸಿತ್ತು. 

ರಾಜಯೋಗದ ಭಾಷೆಗೆ ಜೀವಂತಿಕೆ ಸಿಕ್ಕಿತು
ವರ್ಷ 81 ಆದಾಗ ಯಾರು ದೈಹಿಕವಾಗಿ ಪ್ರಬಲರಾಗಿರಲು ಸಾಧ್ಯ? ಆದರೆ ಮುರಾರ್ಜಿ ವರ್ಷ 81ರಲ್ಲೂ ಲವಲವಿಕೆ ಆರೋಗ್ಯ ತೀಕ್ಷ್ಣತೆಯಿಂದಲೇ ಇದ್ದರು. ಉತ್ಛನಾದ ಶನಿ, ಉತ್ಛನಾದ ಗುರು, ಉತ್ಛನಾದ ಮಂಗಳ ಆಯಸ್ಸನ್ನು ವೃದ್ಧಿ ಸುವ ಮರಣಸ್ಥಾನದಲ್ಲಿನ ಚಂದ್ರನ ಸಮೃದ್ಧಿಯಿಂದಾಗಿ ಚೈತನ್ಯ ಧೈರ್ಯಗಳೆಲ್ಲ ಇಳಿತ ವಾದ್ದರಿಂದ ಲಗ್ನಾಧಿಪತಿ ಬುಧನ ಸಂಪನ್ನತೆಗಳ ಫ‌ಲವಾಗಿ ಜೆಪಿ ಚಳವಳಿ ಇಂದಿರಾರ ಜನಪ್ರಿಯತೆಯು ತುರ್ತು ಸ್ಥಿತಿ ಹೇರಿದ ಪರಿಣಾಮವಾಗಿ ಕುಸಿದಿದ್ದರಿಂದ ನೆರವು ಒದಗಿಬಂದು ಪ್ರಧಾನಿಯಾದರು. 81ನೇ ವಯಸ್ಸಿಗೆ ಪ್ರಧಾನಿಯಾದರೂ ಶಕ್ತಿ ಉತ್ಸಾಹಗಳಿದ್ದವು ಎಂಬುದನ್ನು ತಿಳಿಯುವುದು ಇಲ್ಲಿ ಅಗತ್ಯ. ಇದು ವಿಧಿವಿಲಾಸ ಆದರೆ ರಾಜಯೋಗವು ಅಷ್ಟೇ ಕ್ಷಿಪ್ರವಾಗಿ ಕರಗುವ ದೌರ್ಬಾಗ್ಯವನ್ನು ಕೊಟ್ಟಿದ್ದರಿಂದ 28 ತಿಂಗಳುಗಳಲ್ಲಿ ಪ್ರಧಾನಿ ಪಟ್ಟದಿಂದ ನಿರ್ಗಮನವೂ ಆಗಬೇಕಾಯಿತು. ಅಧಿಕಾರ ಬೇರೆ. ಆದರೆ ಸಿದ್ಧಾಂತಗಳ ಕಾರಣಕ್ಕಾಗಿ ಅನ್ಯ ವಾಮ ಮಾರ್ಗಗಳಲ್ಲಿ ಹೆಜ್ಜೆ ಇಡಲಾರೆವೆಂಬ ಬದ್ಧತೆ ತಿರುಗಿ ಅವರನ್ನು ಮೂಲೆಗೆ ತಳ್ಳಿತು.

Advertisement

ವಿಧಿಯ ಚದುರಂಗದಾಟ ಬೇರೆ ಬೇರೆ
ಬಿಜೆಪಿಯ ವಾಜಪೇಯಿ ಆಡ್ವಾಣಿಯವರನ್ನೇ ಗಮನಿಸಿ ರಾಜಯೋಗ ಇಬ್ಬರಿಗೂ ಇದೆ. ವಾಜಪೇಯಿ ಪ್ರಧಾನಿಗಳಾದರು. ಅಷ್ಟೇ ಶಕ್ತಿಇರುವ ಆಡ್ವಾಣಿಯವರು ಪ್ರಧಾನಿಗಳಾಗಲಿಲ್ಲ.  ದೇವೇಗೌಡ ಪ್ರಧಾನಿಯಾದರು ಆದರೆ ಉರುಳಿದರು. ರಾಮಕೃಷ್ಣ ಹೆಗಡೆ ಪ್ರದಾನಿಯಾಗಲಿಲ್ಲ. ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾದರು. ಪರಮೇಶ್ವರ್‌ ಆಗಲಿಲ್ಲ. ಕೂದಲೆಳೆಯಲ್ಲಿ ಎಲ್ಲವೂ ತಪ್ಪುತ್ತದೆ. ರಾಜಕೀಯದಿಂದ ದೂರವೇ ಉಳಿದರೂ ರಾಜೀವ್‌ರನ್ನು ಪ್ರಧಾನಿ ಪಟ್ಟದಲ್ಲಿ ವಿಧಿ ರಚ್ಚೆ ಹಿಡಿದು ತಂದು ಕೂಡಿಸಿತು. ರಾಹುಲ್‌ ಪ್ರಧಾನಿಯಾಗಬಹುದಿತ್ತು ಆದರೆ ಮನಮೋಹನ್‌ ಸಿಂಗ್‌ ಆದರು.  

Advertisement

Udayavani is now on Telegram. Click here to join our channel and stay updated with the latest news.

Next