ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಸಿನಿಮಾಗಳು ಈ ವರ್ಷ ಬಂಗಾರದ ಬೆಳೆ ತೆಗೆಯುವಲ್ಲಿ ಯಶಸ್ವಿಯಾಗಿದ್ದು, ಫಸಲು ಭರ್ಜರಿಯಾಗಿಯೇ ಇದೆ. ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶದಲ್ಲೂ ಜೋರಾಗಿಯೇ ಸದ್ದು ಮಾಡಿರುವುದು ಸ್ಯಾಂಡಲ್ ವುಡ್ ಹೆಚ್ಚುಗಾರಿಕೆ. “ಕೆಜಿಎಫ್-2′, “ಜೇಮ್ಸ್, “777 ಚಾರ್ಲಿ’, “ವಿಕ್ರಾಂತ್ ರೋಣ’ ಸೇರಿದಂತೆ ಮೊದಲಾದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಿಂಚು ಹರಿಸಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಗಾಳಿಪಟ-2′.
ಗಣೇಶ್ ಹಾಗೂ ಭಟ್ ಕಾಂಬಿನೇಶ ನ್‌ನಲ್ಲಿ ಮೂಡಿಬಂದ ಈ ಚಿತ್ರ ಈಗ ಸೂಪರ್ ಹಿಟ್ ಲಿಸ್ಟ್‌ಗೆ ಸೇರಿದೆ. ಜನ ಸಿನಿಮಾವನ್ನು ಖುಷಿಯಿಂದ ಅಪ್ಪಿಕೊಂಡ ಪರಿಣಾಮ ಸಿನಿಮಾ ಈ ವರ್ಷದ ಬಿಗ್ ಹಿಟ್ ಸಾಲಿನಲ್ಲಿ ನಿಲ್ಲುವಂತಾಗಿದೆ. ಚಿತ್ರ ಆ.12ರಂದು ಬಿಡುಗಡೆಯಾದರೂ, ಅದಕ್ಕೂ ಒಂದು ದಿನ ಮುನ್ನವೇ ಅಂದರೆ ಆ.11ರಂದು ರಾತ್ರಿ 20ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಅಲ್ಲಿಂದಲೇ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಅದು ಭರ್ಜರಿಯಾಗಿ ಮುಂದುವರೆದಿದೆ. ಪರಿಣಾಮವಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಎಲ್ಲಾ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಸಿಂಗಲ್ ಸ್ಕ್ರೀನ್‌ನಿಂದ ಹಿಡಿದು ಮಾಲ್‌ಗಳಿಗೆ ಜನ ಫ್ಯಾಮಿಲಿ, ಸ್ನೇಹಿತರ ಜೊತೆ ಬರುತ್ತಿರುವ ಕಾರಣ ಸಿನಿಮಾ ದೊಡ್ಡ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ಈ ಮೂಲಕ ಈ ವರ್ಷ ಸ್ಯಾಂಡಲ್‌ವುಡ್‌ಗೆ ಮತ್ತೂಂದು ಗೆಲುವು ಸಿಕ್ಕಂತಾಗಿದೆ. ಗಣೇಶ್ ಹಾಗೂ ಭಟ್ ಕಾಂಬಿನೇಶನ್‌ನಲ್ಲಿ 15 ವರ್ಷಗಳ ಹಿಂದೆ ಬಂದ “ಗಾಳಿಪಟ’ ಚಿತ್ರವೂ ಹಿಟ್ ಆಗಿತ್ತು. ಈಗ “ಗಾಳಿಪಟ-2′ ಚಿತ್ರವನ್ನು ಪ್ರೇಕ್ಷಕ ಕೈ ಹಿಡಿದಿದ್ದಾನೆ.
ಫಸ್ಟ್ ರ್‍ಯಾಂಕ್‌ನಲ್ಲಿ ಪಾಸಾದ ನಿರ್ಮಾ ಪಕರು: “ಗಾಳಿಪಟ-2′ ಚಿತ್ರದ ಗೆಲುವಿನಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಅವರ ಪಾತ್ರ ಪ್ರಮುಖವಾಗಿದೆ. ಕೊರೊನಾ ಪೂರ್ವದಲ್ಲಿ ಆರಂಭವಾದ ಚಿತ್ರವಿದು. ಸಾಕಷ್ಟು ಸಿನಿಮಾಗಳು ಕೊರೊನಾದ ಹೊಡೆತಕ್ಕೆ ತನ್ನ ಪ್ಲ್ರಾನ್ ಅನ್ನೇ ಬದಲಿಸಿಕೊಂಡಿರುವ ಸಮಯದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಮಾತ್ರ ತಂಡದ ಕನಸಿಗೆ ಸಾಥ್ ನೀಡುವಲ್ಲಿ ಹಿಂದೇಟು ಹಾಕಿಲ್ಲ. ಚಿತ್ರದ ಬಹುತೇಕ ಚಿತ್ರೀಕರಣ ವಿದೇಶದಲ್ಲಿ ನಡೆಸಲಾಗಿದೆ. ಈಗ ನಿರ್ಮಾಪಕರ ಹಾಗೂ ತಂಡದ ಶ್ರಮಕ್ಕೆ ಫಲ ಸಿಕ್ಕಿದೆ. ಚಿತ್ರ ಭರ್ಜರಿ ಕಲೆಕ್ಷನ್ ಆಗುವ ಮೂಲಕ ಮೊದಲ ವಾರ ಚಿತ್ರಮಂದಿರದ ಕಲೆಕ್ಷನ್‌ನಿಂದಲೇ ನಿರ್ಮಾಪಕರು ಹಾಕಿರುವ ಬಜೆಟ್ ವಾಪಾಸ್ ಬಂದು, ಲಾಭ ನೋಡಲಿ ದ್ದಾರೆ ಎಂಬ ಲೆಕ್ಕಾಚಾರ ಗಾಂಧಿನಗರದಲ್ಲಿ ಶುರುವಾಗಿದೆ.
ಇದನ್ನೂ ಓದಿ:ಪವಿತ್ರ-ದಿವ್ಯಕ್ಷೇತ್ರ ಹರಿಹರಪುರ: ಅಗಸ್ತ್ಯ ಮಹರ್ಷಿಗಳು ತಪಸ್ಸನ್ನಾಚರಿಸಿದ ಸುಕ್ಷೇತ್ರವಿದು
ನಿರ್ಮಾಪಕ ರಮೇಶ್ ರೆಡ್ಡಿ ಈ ಹಿಂದೆ ಮೂರು ಸಿನಿಮಾಗಳನ್ನು ಮಾಡಿದ್ದರೂ ಅದರಿಂದ ದೊಡ್ಡ ಮಟ್ಟದ ಲಾಭ ನೋಡಿಲ್ಲ. ಅದೇ ಕಾರಣದಿಂದ ಅವರು “ಗಾಳಿಪಟ-2′ ಚಿತ್ರದ ಪ್ರತಿ ಪತ್ರಿಕಾಗೋಷ್ಠಿಗಳಲ್ಲೂ “ಈ ಹಿಂದೆ ನಾನು ಬರೆದ ಮೂರು ಎಕ್ಸಾಂಗಳಲ್ಲಿ ಪಾಸಾಗಲಿಲ್ಲ. ಇದು ನಾಲ್ಕನೇ ಬಾರಿ ಬರೆಯುತ್ತಿದ್ದೇನೆ. ಈ ಬಾರಿಯಾದರೂ ಪಾಸು ಮಾಡಿ’ ಎಂದು ಪ್ರೇಕ್ಷಕರನ್ನು ಕೇಳಿಕೊಳ್ಳುತ್ತಿದ್ದರು. ಈ ಬಾರಿ ಪ್ರೇಕ್ಷಕ ಅವರನ್ನು ಜಸ್ಟ್ ಪಾಸ್ ಅಲ್ಲ, ರ್‍ಯಾಂಕ್ ಬರುವಂತೆ ಮಾಡಿದ್ದಾನೆ. ಈ ಖುಷಿಯನ್ನು ಹಂಚಿಕೊಳ್ಳುವ ನಿರ್ಮಾಪಕ ರಮೇಶ್ ರೆಡ್ಡಿ, “ಚಿತ್ರದ ಗೆಲುವು ನನಗೆ ತುಂಬಾ ಖುಷಿ ಕೊಟ್ಟಿದೆ. ಈ ಬಾರಿ ನಾನು ಫಸ್ಟ್‌ರ್‍ಯಾಂಕ್‌ನಲ್ಲಿ ಪಾಸಾಗಿದ್ದೇನೆ. ಜನ ಈ ಬಾರಿ ನಮ್ಮ ಕೈ ಹಿಡಿದಿದ್ದಾರೆ’ ಎನ್ನುತ್ತಾರೆ.