Advertisement

ಮಾನಸಿಕ ನೆಮ್ಮದಿಗೆ ಯೋಗ ಪೂರಕ

11:35 AM Jun 22, 2017 | Team Udayavani |

ಮಂಗಳೂರು: ಮಾನಸಿಕ ನೆಮ್ಮದಿಯೊಂದಿಗೆ ಆಧ್ಯಾತ್ಮಿಕ ವಿಚಾರದಲ್ಲಿ ಮನಸ್ಸು ಕೇಂದ್ರೀಕೃತವಾಗಲು ಯೋಗ ಪೂರಕ. ಭಾರತದ ಪರಂಪರೆ, ಮೌಲ್ಯ ಮತ್ತು ಗೌರವವನ್ನು ವೃದ್ಧಿಸುವಲ್ಲಿ ಯೋಗದ ಕೊಡುಗೆ ಮಹತ್ತರವಾದುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಆಯುಷ್‌ ಇಲಾಖೆ ವತಿಯಿಂದ ನಗರದ ಪುರ ಭವನದ ನೂತನ ಸಭಾಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದ ಅನೇಕ ರಾಷ್ಟ್ರಗಳು ಭಾರತೀಯ ಋಷಿ ಪರಂಪರೆಯ ಕೊಡುಗೆಯಾದ ಯೋಗದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿವೆ. ಯೋಗ ವಿಶ್ವ ಮನ್ನಣೆಗಳಿಸುವುದಕ್ಕೆ ಪ್ರಧಾನಿಯವರ ಶ್ರಮ ಸಾಕಷ್ಟಿದೆ ಎಂದವರು ಅಭಿಪ್ರಾಯಪಟ್ಟರು.

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಸುಮಾರು ಒಂದು ಗಂಟೆ ಕಾಲ ಯೋಗದ 30ಕ್ಕೂ ಅಧಿಕ ಆಸನಗಳನ್ನು ಪ್ರದರ್ಶಿಸಿದರು. ಸುಮಾರು 1,500ಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸ ಮಾಡಿದರು. ಸಂಸದ ನಳಿನ್‌ ಕುಮಾರ್‌ ಕಟೀಲು, ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಮೇಯರ್‌ ಕವಿತಾ ಸನಿಲ್‌, ಆರೋಗ್ಯ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ರಾವ್‌, ಡಿಸಿಪಿ ಶಾಂತರಾಜು, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಮೊದಲಾದ ಗಣ್ಯರು ಭಾಗವಹಿಸಿದ್ದರು. ಬಳಿಕ ಪ್ರಜಾ ಪಿತ ಬ್ರಹ್ಮಕುಮಾರೀಸ್‌ ಈಶ್ವರೀಯ ವಿದ್ಯಾ ಲಯದ ವಿಶ್ವೇಶ್ವರಿ ಅವರಿಂದ ಧ್ಯಾನದ ಕುರಿತು ಉಪನ್ಯಾಸ ಜರಗಿತು. 

ಕಾರ್ಯಕ್ರಮದಲ್ಲಿ ಔಷಧೀಯ ಗಿಡ ವಿತರಿಸಲಾಯಿತು. ಆಯುಷ್‌ ಇಲಾಖೆಯ ಡಾ| ಮಹಮ್ಮದ್‌ ಇಕ್ಬಾಲ್‌ ಸ್ವಾಗತಿಸಿದರು.

ಆಕಾಶವಾಣಿಯಿಂದ ಹೊಸ ಪ್ರಯೋಗ
ಯೋಗ ದಿನದ ಅಂಗವಾಗಿ ಮಂಗಳೂರು ಆಕಾಶವಾಣಿಯು ದ.ಕ., ಉಡುಪಿ ಹಾಗೂ ಚಿಕ್ಕಮಗಳೂರು ವ್ಯಾಪ್ತಿ ಯೊಳಗೆ ಬೆಳಗ್ಗೆ 8.30ರಿಂದ 11.30ರ ವರೆಗೆ ಯೋಗದ ಕುರಿತು ವಿಶೇಷ ಮಾಹಿತಿ, ನೇರ ಪ್ರಸಾರ ಕಾರ್ಯ ಕ್ರಮ ವನ್ನು ನಡೆಸಿತು. ದೇಶ ದಲ್ಲೇ ಇದೊಂದು ಮಾದರಿ ಪ್ರಯತ್ನ ವಾಗಿದೆ ಎಂದು ಮಂಗಳೂರು ಆಕಾಶ ವಾಣಿಯ ಸದಾನಂದ ಪೆರ್ಲ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next